ಮಯಾಮಿ ಓಪನ್ ಟೆನಿಸ್: ವೀನಸ್‌ಗೆ ಸೋಲುಣಿಸಿದ ಕಾಲಿನ್ಸ್
Team Udayavani, Mar 30, 2018, 6:35 AM IST
ಮಯಾಮಿ (ಫ್ಲೋರಿಡಾ): ಡಬ್ಲ್ಯುಟಿಎ ಮಯಾಮಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ವೀನಸ್ ವಿಲಿಯಮ್ಸ್ ಆಟ ಮುಗಿದಿದೆ. ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾಗಿ ಬಂದ ಅಮೆರಿಕದವರೇ ಆದ 24ರ ಹರೆಯದ ಡೇನಿಯಲ್ ಕಾಲಿನ್ಸ್ 6-2, 6-3ರಿಂದ ವೀನಸ್‌ಗೆ ಸೋಲುಣಿಸಿ ಸೆಮಿಪೈನಲಿಗೆ ಲಗ್ಗೆ ಇರಿಸಿದ್ದಾರೆ.
“ಇದು ನನ್ನ ಟೆನಿಸ್ ಬದುಕಿನ ಸ್ಮರಣೀಯ ರಾತ್ರಿ ಆಗುತ್ತದೆಂದು ನಾನು ಭಾವಿಸಿರಲಿಲ್ಲ. ವೀನಸ್ ನನ್ನ ನೆಚ್ಚಿನ ಆಟಗಾರ್ತಿ. ಅವರನ್ನು ಮೊದಲ ಸಲ ಲಾಕರ್ ರೂಮ್‌ನಲ್ಲಿ ಕಂಡಾಗ ನಾನು ಅಳುವುದೊಂದೇ ಬಾಕಿ ಇತ್ತು’ ಎಂದು ವೀನಸ್ ಜತೆಗಿನ ಮೊದಲ ಭೇಟಿಯನ್ನು ಗೆಲುವಿನ ಬಳಿಕ ಸ್ಮರಿಸಿಕೊಂಡರು.
ಡೇನಿಯಲ್ ಕಾಲಿನ್ಸ್ ಅವರಿನ್ನು ಸೆಮಿಫೈನಲ್‌ನಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ ವಿರುದ್ಧ ಸೆಣಸಲಿದ್ದಾರೆ. ದಿನದ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಸ್ಟಾಪೆಂಕೊ ಭಾರೀ ಹೋರಾಟದ ಬಳಿಕ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವರನ್ನು 7-6 (7-3), 7-6 (7-5) ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.
ಇಸ್ನರ್ ಗೆಲುವಿನಾಟ
ಪುರುಷರ ಸಿಂಗಲ್ಸನಲ್ಲಿ ಅಮೆರಿಕದ ಬಿಗ್ ಸರ್ವರ್ ಖ್ಯಾತಿಯ ಜಾನ್ ಇಸ್ನರ್ ದಕ್ಷಿಣ ಕೊರಿಯಾದ ಚುಂಗ್ ಹಿಯಾನ್ ಅವರನ್ನು 6-1, 6-4ರಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದಾರೆ. ಇವರ ಮುಂದಿನ ಎದುರಾಳಿ ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ. ಇನ್ನೊಂದು ಮುಖಾಮುಖೀಯಲ್ಲಿ ಡೆಲ್ ಪೊಟ್ರೊ ಕೆನಡಾದ ಮಿಲೋಸ್ ರಾನಿಕ್ ವಿರುದ್ಧ 5-7, 7-6 (7-1), 7-6 (7-3) ಅಂತರದಿಂದ ಮಣಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.