ಮಿಕ್ಕಿಮೌಸ್ ಆಯ್ಕೆ ಸಮಿತಿ: ಎಂಜಿನಿಯರ್
Team Udayavani, Nov 1, 2019, 5:18 AM IST
ಮುಂಬಯಿ: ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಭಾರತೀಯ ಕ್ರಿಕೆಟ್ ವಲಯದಲ್ಲಿ ಹಲವು ಸಂದರ್ಭಗಳಲ್ಲಿ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.
ಇದೀಗ ಮತ್ತೆ ಅವರ ವಿರುದ್ಧ ಆಕ್ರೋಶ ಎದ್ದಿದೆ. ಈ ಬಾರಿ ಸಿಟ್ಟನ್ನು ಹೊರಹಾಕಿದ್ದು ಮಾಜಿ ಕ್ರಿಕೆಟಿಗ ಫಾರೂಖ್ ಎಂಜಿನಿಯರ್.
ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು, ಅನುಷ್ಕಾ ಶರ್ಮಗೆ ಟೀ ಕೊಡುವುದರಲ್ಲಿ ಮಗ್ನರಾಗಿದ್ದನ್ನು ನೋಡಿದೆ. ಇದು ಮಿಕ್ಕಿಮೌಸ್ ಆಯ್ಕೆ ಸಮಿತಿ. ಇವರ್ಯಾರಿಗೂ ಯೋಗ್ಯತೆಯೇ ಇಲ್ಲ ಎಂದು ಎಂಜಿನಿಯರ್ ಹೇಳಿದ್ದಾರೆ.
ಭಾರತೀಯ ತಂಡದ ಆಯ್ಕೆಯಲ್ಲಿ ವಿರಾಟ್ ಕೊಹ್ಲಿಯದ್ದೇ ಸಂಪೂರ್ಣ ಪ್ರಭಾವವಿದೆ. ಇದು ಒಳ್ಳೆಯದೇ. ಆದರೆ ಆಯ್ಕೆಗಾರರ ಯೋಗ್ಯತೆಯೇನು? ಈ ಆಯ್ಕೆಗಾರರೆಲ್ಲ ಸೇರಿ ಹತ್ತರಿಂದ ಹನ್ನೆರಡು ಟೆಸ್ಟ್ ಪಂದ್ಯವಾಡಿದ್ದಾರೆ. ಅವರೆಲ್ಲ ಮಾಡುತ್ತಿದ್ದುದು ಅನುಷ್ಕಾಗೆ ಟೀ ತಂದುಕೊಡುವ ಕೆಲಸ ಎಂದು ಫಾರೂಖ್ ಹೇಳಿದ್ದಾರೆ.
“ನಾನಲ್ಲಿ ಇರಲೇ ಇಲ್ಲ’
ಫಾರೂಖ್ ಎಂಜಿನಿಯರ್ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅನುಷ್ಕಾ ಶರ್ಮ ಮೌನ ಮುರಿದು, ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ನಿಮಗೆ ಆಯ್ಕೆ ಸಮಿತಿ ಮೇಲೆ ಸಿಟ್ಟಿದ್ದರೆ, ನೇರವಾಗಿ ಅವರ ವಿರುದ್ಧ ಮಾತನಾಡಿ. ಇದರಲ್ಲಿ ನನ್ನ ಹೆಸರನ್ನು ಎಳೆದು ತರಬೇಡಿ. ವಿಶ್ವಕಪ್ ಪಂದ್ಯಗಳಲ್ಲಿ ಆಯ್ಕೆಸಮಿತಿ ಸದಸ್ಯರು ನನಗೆ ಟೀ ತಂದುಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆದರೆ ನಾನು ವಿಶ್ವಕಪ್ ವೇಳೆ ಭಾರತ-ನ್ಯೂಜಿಲ್ಯಾಂಡ್ ನಡುವಿನ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಹಾಜರಿದ್ದೆ. ಆಗ ನಾನು ಆಯ್ಕೆ ಸಮಿತಿ ಬಾಕ್ಸ್ ನಲ್ಲಿ ಇರಲಿಲ್ಲ, ಬದಲಿಗೆ ಕುಟುಂಬ ಸದಸ್ಯರ ಸ್ಥಾನದಲ್ಲಿ ಕುಳಿತಿದ್ದೆ. ಇವೆಲ್ಲ ಉದ್ದೇಶಪೂರ್ವಕ ಸುಳ್ಳಿನಮಾಲಿಕೆಯ ಹೊಸ ಆವೃತ್ತಿಯಷ್ಟೇ’ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.