ಸಿಲಿಕಾನ್ ವ್ಯಾಲಿ ಟೆನಿಸ್ ಮೊದಲ ಪ್ರಶಸ್ತಿ ಗೆದ್ದ ಬಝರ್ನೆಸ್ಕಾ
Team Udayavani, Aug 7, 2018, 6:00 AM IST
ಸ್ಯಾನ್ ಜೋಸ್ (ಕ್ಯಾಲಿಫೋರ್ನಿಯಾ): ರೊಮೇನಿಯಾದ ಮಿಹೇಲಾ ಬಝರ್ನೆಸ್ಕಾ ಮೊದಲ ಡಬ್ಲ್ಯುಟಿಎ ಪ್ರಶಸ್ತಿಯ ಸಂಭ್ರಮವನ್ನಾಚರಿಸಿದ್ದಾರೆ. 30ರ ಹರೆಯದ ಮಿಹೇಲಾ “ಸಿಲಿಕಾನ್ ವ್ಯಾಲಿ ಕ್ಲಾಸಿಕ್ ಟೆನಿಸ್’ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿಕೊಳ್ಳುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರವಿವಾರ ರಾತ್ರಿ ನಡೆದ ಫೈನಲ್‌ನಲ್ಲಿ 30ರ ಹರೆಯದ ಮಿಹೇಲಾ ಬಝರ್ನೆಸ್ಕಾ ಗ್ರೀಕ್‌ನ ಮರಿಯಾ ಸಕ್ಕರಿ ವಿರುದ್ಧ 6-1, 6-0 ಅಂತರದ ಸುಲಭ ಜಯ ಸಾಧಿಸಿದರು. ಕೂಟದಲ್ಲಿ ವೀನಸ್ ವಿಲಿಯಮ್ಸ್, ಡೇನಿಯಲ್ ಕೊಲಿನ್ಸ್ ಅವರನ್ನು ಉರುಳಿಸಿ ಸುದ್ದಿಯಾಗಿದ್ದ ಸಕ್ಕರಿಗೆ ಫೈನಲ್‌ನಲ್ಲಿ ಮಾತ್ರ ಸಿಹಿ ಒಲಿಯಲಿಲ್ಲ. ಗೆದ್ದರೆ ಸಕ್ಕರಿ ಪಾಲಿಗೂ ಇದು ಮೊದಲ ಡಬ್ಲ್ಯುಟಿಎ ಪ್ರಶಸ್ತಿಯಾಗುತ್ತಿತ್ತು.
“ಸಕ್ಕರಿ ಈ ಕೂಟದಲ್ಲಿ ಅನೇಕ ಏರುಪೇರಿನ ಫಲಿತಾಂಶಗಳನ್ನು ದಾಖಲಿಸಿದ ಆಟಗಾರ್ತಿ. ಮೊದಲ ಸೆಟ್ ಸೋತರೂ ಆಕೆ ತಿರುಗಿ ಬೀಳುವ ಸಾಧ್ಯತೆ ಇತ್ತು. 3-0 ಮುನ್ನಡೆ ಸಾಧಿಸಿದ ಬಳಿಕವಷ್ಟೇ ಈ ಪಂದ್ಯ ನನ್ನದಾಗುವುದು ಖಂಡಿತ ಎಂಬ ನಂಬಿಕೆ ಮೂಡಿತು…’ ಎಂಬುದಾಗಿ ಮಿಹೇಲಾ ಬಝರ್ನೆಸ್ಕಾ ಹೇಳಿದರು. 73 ನಿಮಿಷಗಳಲ್ಲಿ ಈ ಪಂದ್ಯ ಮುಗಿದು ಹೋಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.