Mike Tyson: 58 ವರ್ಷದ ಬಾಕ್ಸಿಂಗ್ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್ ಎದುರು ಸೋಲು
Team Udayavani, Nov 16, 2024, 9:51 PM IST
ಅರ್ಲಿಂಗ್ಟನ್: 27 ವರ್ಷದ ಜೇಕ್ ಪೌಲ್, 58 ವರ್ಷದ ದಂತಕಥೆ ಮೈಕ್ ಟೈಸನ್ ನಡುವೆ ಅಮೆರಿಕದ ಟೆಕ್ಸಾಸ್‌ನಲ್ಲಿ ಶನಿವಾರ ಬೆಳಗ್ಗೆ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ಟೈಸನ್ ಸೋತುಹೋದರು.
ಆರಂಭದಲ್ಲಿ ವರ್ಣಿಸಿದ್ದಷ್ಟು ರೋಚಕವಾಗಿ ಈ ಹೋರಾಟ ನಡೆಯಲಿಲ್ಲ. ತಲಾ 2 ನಿಮಿಷದ 8 ಸುತ್ತಿನ ಪಂದ್ಯದಲ್ಲಿ ಅವಿರೋಧವಾಗಿ ಪೌಲ್ ಗೆದ್ದರು. ಒಬ್ಬ ತೀರ್ಪುಗಾರ ಪೌಲ್ ಪರವಾಗಿ 80-72, ಇನ್ನೊಬ್ಬ ತೀರ್ಪುಗಾರ 79-73ರ ತೀರ್ಪು ನೀಡಿದರು. ಇಡೀ ಪಂದ್ಯ ಆಟಕ್ಕಿಂತ ಹೆಚ್ಚಾಗಿ ಇತರೆ ವಿವಾದಗಳಿಂದಲೇ ಸುದ್ದಿಯಾಯಿತು.
ಪಂದ್ಯದ ನಂತರ ಮಾತನಾಡಿದ ಪೌಲ್, ಮೈಕ್ ಟೈಸನ್ ಸಾರ್ವಕಾಲಿಕ ಶ್ರೇಷ್ಠ ಬಾಕ್ಸರ್, ಅವರೆದುರು ಗೆದ್ದಿದ್ದು ಒಂದು ಗೌರವ ಎಂದು ವರ್ಣಿಸಿದ್ದಾರೆ. ಪಂದ್ಯ ಶುರುವಾದ ಮರುಕ್ಷಣದಲ್ಲೇ ಟೈಸನ್ ಪೌಲ್‌ಗೆ 2 ಹೊಡೆತಗಳನ್ನು ನೀಡಿದರು. ಅನಂತರ ತಣ್ಣಗಾದ ಟೈಸನ್ ದೊಡ್ಡ ಪ್ರಯತ್ನಕ್ಕೆ ಹೋಗಲಿಲ್ಲ. ಬದಲಿಗೆ ಒಂದಷ್ಟು ಏಟುಗಳನ್ನು ತಿಂದರು. ಹಾಗಂತ ಪೌಲ್ ಕೂಡ ಟೈಸನ್‌ಗೆ ಗಂಭೀರವಾದ ಏಟು ನೀಡುವ ಯತ್ನ ಮಾಡಲಿಲ್ಲ!
ವಸ್ತುಸ್ಥಿತಿಯಲ್ಲಿ ಟೈಸನ್ 2005ರಲ್ಲಿ ಕೊನೆಯ ಬಾರಿಗೆ ಬಾಕ್ಸಿಂಗ್ ಪಂದ್ಯದಲ್ಲಿ ಭಾಗಿಯಾಗಿದ್ದರು. ಹೆಚ್ಚುಕಡಿಮೆ 20 ವರ್ಷದ ನಂತರ ಮತ್ತೆ ಸ್ಪರ್ಧಿಸಿದರು. ಇನ್ನು ಜೇಕ್ ಪೌಲ್ ಈ ಹಿಂದೆ ಯೂಟ್ಯೂಬರ್ ಆಗಿದ್ದವರು ಈಗ ವೃತ್ತಿಪರ ಬಾಕ್ಸರ್!
ಅಭಿಮಾನಿಗಳ ವೀಕ್ಷಣೆಗೆ ಕ್ರ್ಯಾಶ್ ಆದ ನೆಟ್‌ಫ್ಲಿಕ್ಸ್
ಇದೇ ಮೊದಲ ಬಾರಿ ದೊಡ್ಡದೊಂದು ಕ್ರೀಡಾಸ್ಪರ್ಧೆಯನ್ನು ನೇರಪ್ರಸಾರದ ಮಾಡಿದ ನೆಟ್‌ಫ್ಲಿಕ್ಸ್ ಟೀಕಾಪ್ರಹಾರಕ್ಕೆ ತುತ್ತಾಯಿತು. ಭಾರತೀಯ ಕಾಲಮಾನ ಶನಿವಾರ ಬೆಳಗ್ಗೆ ನಡೆದ ಸ್ಪರ್ಧೆಯಲ್ಲಿ ಒಮ್ಮೆಲೆ 12 ಕೋಟಿ ಮಂದಿ ವಿಶ್ವಾದ್ಯಂತ ಲಾಗಿನ್ ಆದರು. ಇದು ಫ್ಲಿಕ್ಸ್ ಕ್ರ್ಯಾಶ್ ಆಗಲು ಕಾರಣವಾಯಿತು. ಪಂದ್ಯಕ್ಕೂ ಪೂರ್ವ, ಪಂದ್ಯದ ವೇಳೆ ಪ್ರಸಾರ ಸುಗಮವಾಗಿರಲಿಲ್ಲ ಎಂದು ಅಭಿಮಾನಿಗಳು ಸಿಟ್ಟಾದರು.
ಟೈಸನ್ ಬೆತ್ತಲೆಯಿದ್ದ ದೃಶ್ಯ ಪ್ರಸಾರ!:
ಪಂದ್ಯಕ್ಕೂ ಮುನ್ನ ಟೈಸನ್ ಸಂದರ್ಶನ ನಡೆಯುತ್ತಿದ್ದಾಗ ಇನ್ನೊಂದು ಘಟನೆ ನಡೆಯಿತು. ಸಂದರ್ಶನ ನೀಡಿ ಮುಗಿಸಿದ ಟೈಸನ್ ಮುಂದೆ ಹೋಗುತ್ತಿದ್ದಾಗ ದಿಢೀರನೆ ಅವರ ಹಿಂಭಾಗ ನಗ್ನವಾಗಿರುವ ದೃಶ್ಯವೊಂದು ಸಿಕ್ಕಿದೆ. ಇದು ಫ್ಲಿಕ್ಸ್‌ನಲ್ಲಿ ಪ್ರಸಾರವೂ ಆಗಿದೆ. ಇದನ್ನು ಅಭಿಮಾನಿಗಳು ಹಾಸ್ಯ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.