ಮಹಿಳಾ ಕ್ರಿಕೆಟ್ ನಲ್ಲಿ ಡಿಆರ್ ಎಸ್ ನಿರಂತರವಾಗಿರಲಿ: ಮಿಥಾಲಿ ರಾಜ್
Team Udayavani, Mar 1, 2019, 5:52 AM IST
ಮುಂಬೈ: ಅಂಪಾಯರ್ ತೀರ್ಮಾನವನ್ನು ಮೇಲ್ಮನವಿ ಸಲ್ಲಿಸುವ ಡಿಸಿಶನ್ ರಿವೀವ್ ಸಿಸ್ಟಮ್ (ಡಿಆರ್ ಎಸ್) ಅನ್ನು ಮಹಿಳಾ ಕ್ರಿಕೆಟ್ ನಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿಕೆ ನೀಡಿದ್ದಾರೆ.
ಇಂಗ್ಲೆಂಡ್ ಸರಣಿಯ ನಂತರ ಮಾತನಾಡಿದ ಮಿಥಾಲಿ, ನ್ಯೂಜಿಲ್ಯಾಂಡ್ ಸರಣಿಯಲ್ಲಿ ನಮಗೆ ಡಿಆರ್‌ಎಸ್ ಬಳಸುವ ಅವಕಾಶವಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ತವರು ಸರಣಿಯಲ್ಲಿ ಈ ಅವಕಾಶ ಇರಲಿಲ್ಲ. ಹೀಗಾದಲ್ಲಿ ನಮ್ಮ ಆಟಗಾರರಿಗೆ ಡಿಆರ್ ಎಸ್ ಬಳಸುವ ಬಗ್ಗೆ ಗೊಂದಲ ಉಂಟಾಗುತ್ತದೆ. ಡಿಆರ್ ಎಸ್ ಪದ್ದತಿ ತನ್ನದೇ ಆದ ಪರಿಣಾಮಗಳನ್ನು ಹೊಂದಿದೆ. ಹಾಗಾಗಿ ನಿರಂತರ ಬಳಕೆಯಿಂದ ಈ ಅನುಕೂಲವನ್ನು ಯಾವ ಸಮಯದಲ್ಲಿ ಹೇಗೆ ಬಳಸಬೇಕೆಂದು ತಿಳಿಯಲು ವನಿತಾ ಆಟಗಾರ್ತಿಯರಿಗೆ ಸುಲಭವಾಗುತ್ತದೆ ಎಂದರು.
2017ರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ವನಿತಾ ಕ್ರಿಕೆಟ್ ಗೆ ಡಿಆರ್ ಎಸ್ ಅನ್ವಯವಾದಾಗ ಪ್ರಥಮವಾಗಿ ಉಪಯೋಗಿಸಿದ ನಾಯಕಿ ಎಂಬ ಹೆಗ್ಗಳಿಕೆ ಮಿಥಾಲಿ ರಾಜ್ ರದ್ದು. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದ ಬಗ್ಗೆ ಮಾತನಾಡಿದ ಮಿಥಾಲಿ, ಸರಣಿ ಗೆದ್ದ ಬಗ್ಗೆ ಹೆಮ್ಮೆ ಇದೆ. ಆದರೆ ನಾವು ಎಲ್ಲಾ ವಿಭಾಗಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.