ಕ್ರಿಕೆಟೇ ಆಡದ ತಾಪ್ಸಿಗೆ ಮಿಥಾಲಿ ಪಾತ್ರದ ಸವಾಲು!
Team Udayavani, Dec 5, 2019, 12:16 AM IST
ಹೊಸದಿಲ್ಲಿ: ಭಾರತದ ಖ್ಯಾತ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಜೀವನಾಧಾರಿತ “ಶಾಬಾಸ್ ಮಿಥೂ’ ಚಿತ್ರ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಮಿಥಾಲಿ ಅವರ ಪಾತ್ರವನ್ನು ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ನಿರ್ವಹಿಸಲಿದ್ದಾರೆ.
ಮಿಥಾಲಿ ರಾಜ್ ಅವರನ್ನು ಭೇಟಿ ಯಾದ ತಾಪ್ಸಿ ಸಿನೆಮಾದ ಕುರಿತು ಮಾತನಾಡಿದ್ದಾರೆ. ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಕುರಿತು ಕೆಲವು ಮಾಹಿತಿಗಳನ್ನೂ ಪ್ರಕಟಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ತಾಪ್ಸಿ ಪನ್ನು, “ಈವರೆಗೆ ಕ್ರಿಕೆಟೇ ಆಡದ ನನಗೆ ಮಿಥಾಲಿ ರಾಜ್ ಪಾತ್ರ ನಿಜಕ್ಕೂ ಒಂದು ಸವಾಲು’ ಎಂದಿದ್ದಾರೆ. ರಾಹುಲ್ ಢೋಲಾಕಿಯಾ ಈ ಚಿತ್ರದ ನಿರ್ದೇಶಕ.
ಮಿಥಾಲಿ ನೀಡಿದ ದಿಟ್ಟ ಉತ್ತರ
“ಸಂದರ್ಶಕರೊಬ್ಬರು ಮಿಥಾಲಿ ಅವರಲ್ಲಿ ನಿಮ್ಮ ನೆಚ್ಚಿನ ಪುರುಷ ಕ್ರಿಕೆಟಿಗ ಯಾರು ಎಂದು ಪ್ರಶ್ನಿಸಿ ದ್ದರು. ಆಗ ಮಿಥಾಲಿ, ನೀವು ಯಾವತ್ತಾದರೂ ಪುರುಷ ಕ್ರಿಕೆಟಿಗರ ಬಳಿ ತೆರಳಿ ನಿಮ್ಮ ನೆಚ್ಚಿನ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು ಎಂದು ಕೇಳಿದ್ದಿದೆಯೇ ಎಂದು ಮಾರುತ್ತರ ನೀಡಿದ್ದರು. ಮಿಥಾಲಿ ಅವರ ಈ ದಿಟ್ಟ ಉತ್ತರವೇ ನನಗೆ ಅವರ ಪಾತ್ರವನ್ನು ಒಪ್ಪಿಕೊಳ್ಳಲು ಸ್ಫೂರ್ತಿ ನೀಡಿತು. ಇದನ್ನು ನಿರಾಕರಿಸುವ ಪ್ರಶ್ನೆಯೇ ಇರಲಿಲ್ಲ…’ ಎಂದು ತಾಪ್ಸಿ ಹೇಳಿದರು.
“ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಚಿತ್ರೀಕರಣ ಆರಂಭಗೊಳ್ಳ ಬಹುದು. ಅಲ್ಲಿಯ ತನಕ ನನಗೆ ಕ್ರಿಕೆಟ್ ಕಲಿಯಲು ಸಮಯವಿದೆ. ದೊಡ್ಡ ಮಟ್ಟದಲ್ಲೇ ಕ್ರಿಕೆಟ್ ತರಬೇತಿ ಪಡೆಯಬೇಕಿದೆ’ ಎಂದು ತಾಪ್ಸಿ ಹೇಳಿದರು.ಈ ವರ್ಷ ಬದ್ಲಾ, ಗೇಮ್ ಈಸ್ ಓವರ್, ಮಿಷನ್ ಮಂಗಲ್, ಸಾಂಡ್ ಕೀ ಆಂಖ್ ಮೊದಲಾದ ಹಿಟ್ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ತಾಪ್ಸಿ ಅವರದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.