ಮಿಶ್ರ ಡಬಲ್ಸ್: ಭಾರತದ ಪೇಸ್ ಜೋಡಿಗೆ ಸೋಲು
ಪುರುಷರ ಡಬಲ್ಸ್: ದಿವಿಜ್-ಮಾರ್ಸೆಲೊಗೆ ಮುನ್ನಡೆ
Team Udayavani, Jul 6, 2019, 5:54 AM IST
ಲಂಡನ್: ವಿಂಬಲ್ಡನ್ ಟೆನಿಸ್ ಕೂಟದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್ -ಆಸ್ಟ್ರೇಲಿಯದ ಸಮಂತಾ ಸ್ಟೊಸರ್ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲುಂಡು ಕೂಟದಿಂದ ನಿರ್ಗಮಿಸಿದ್ದಾರೆ. ಆದರೆ ದಿವಿಜ್ ಶರಣ್ ಪುರುಷರ ವಿಭಾಗದ ಡಬಲ್ಸ್ನಲ್ಲಿ ಗೆಲುವು ಸಾಧಿಸಿ ಮೂರನೇ ಸುತ್ತಿಗೆ ಪ್ರವೇಶ ಪಡೆದು ಭಾರತದ ಭರವಸೆಯಾಗಿದ್ದಾರೆ.
ಶುಕ್ರವಾರ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಇವಾನ್ ಹೊಯ್r- ಈಡೆನ್ ಸಿಲ್ವ ವಿರುದ್ಧ 4-6, 6-2, 4-6 ಸೆಟ್‌ಗಳ ಅಂತರದಿಂದ ಲಿಯಾಂಡ್ ಪೇಸ್ ಜೋಡಿ ಪರಾಭವಗೊಂಡಿತು. ಮೊದಲ ಸೆಟ್‌ನಲ್ಲಿ ಪರಾಭವಗೊಂಡು ಪೇಸ್ ಜೋಡಿ 1-0 ಹಿನ್ನಡೆ ಅನುಭವಿಸಿತು. ಎರಡನೇ ಸೆಟ್‌ನಲ್ಲಿ ಗೆದ್ದು 1-1 ಸಮಸಾಧಿಸಿಕೊಂಡಿತು. ಆದರೆ ಮೂರನೇ ಸೆಟ್‌ನಲ್ಲಿ ಪ್ರಬಲ ಹೋರಾಟ ಪ್ರದರ್ಶಿಸಿದರೂ ಅಂತಿಮವಾಗಿ ಪೇಸ್ ಜೋಡಿ ಹಿನ್ನಡೆ ಅನುಭವಿಸಿ ಸೋಲಿಗೆ ಶರಣಾಗಬೇಕಾಯಿತು.
ದಿವಿಜ್ ಜೋಡಿ 3ನೇ ಸುತ್ತಿಗೆ: ಭಾರತದ ದಿವಿಜ್ ಶರಣ್ – ಬ್ರೆಜಿಲ್ನ ಮಾರ್ಸೆಲೊ ಡೆಮೊಲಿನೆರ್ ಜೋಡಿ 7-6, 5-7, 7-6, 6-4 ಸೆಟ್‌ಗಳ ಅಂತರದಿಂದ ಬೆಲ್ಜಿಯಂನ ಸ್ಯಾಂಡರ್ ಗಿಲ್ಲೆ – ಜೊರಾನ್ ವಿಲಿಜೆನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು.
ಹೊರಬಿದ್ದ ವೋಜ್ನಿಯಾಕಿ
ಡೆನ್ಮಾರ್ಕ್‌ನ ತಾರಾ ಆಟಗಾರ್ತಿ ವಿಶ್ವ 19ನೇ ಶ್ರೇಯಾಂಕಿತ ಕ್ಯಾರೊಲಿನಾ ವೊಜ್ನಿಯಾಕಿ ಮಹಿಳಾ ಸಿಂಗಲ್ಸ್ ಪಂದ್ಯದ ಮೂರನೇ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಸೋತು ಕೂಟದಿಂದ ಹೊರಬಿದ್ದಿದ್ದಾರೆ. 6-4, 6-2 ಸೆಟ್‌ಗಳ ಅಂತರದಿಂದ ಚೀನಾದ 50ನೇ ಶ್ರೇಯಾಂಕಿತ ಆಟಗಾರ್ತಿ ಶುವಾಯ್ ಝಾಂಗ್ ವಿರುದ್ಧ ಪರಾಭವಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.