ಚೆಸ್ ಆಡಿ ಮತೀಯವಾದಿಗಳ ಸಿಟ್ಟಿಗೆ ಬಲಿಯಾದ ಕೈಫ್!
Team Udayavani, Jul 29, 2017, 10:29 AM IST
ನವದೆಹಲಿ: ಇತ್ತೀಚೆಗಷ್ಟೇ ಕ್ರಿಕೆಟಿಗ ಇರ್ಫಾನ್ ಪಠಾಣ್ ವಿರುದ್ಧ ಹರಿಹಾಯ್ದಿದ್ದ ಕೆಲ ಇಸ್ಲಾಂ ಮೂಲಭೂತವಾದಿಗಳ ಗಮನ ಈಗ ಮತ್ತೂಬ್ಬ ಕ್ರಿಕೆಟಿಗ ಮೊಹಮ್ಮದ್ ಕೈಫ್ರತ್ತ ತಿರುಗಿದೆ.
ಮಗನ ಜತೆ ಚೆಸ್ ಆಡುತ್ತಿರುವ ಚಿತ್ರವನ್ನು ಫೇಸ್ ಬುಕ್‌ನಲ್ಲಿ ಪ್ರಕಟಿಸಿದ್ದಕ್ಕೆ ಹಲವರು ವಿಪರೀತವಾಗಿ ಪ್ರತಿಕ್ರಿಯಿಸಿ, ಇದು ಇಸ್ಲಾಂಗೆ ವಿರುದ್ಧ ಎಂದಿದ್ದಾರೆ! ಕೆಲ ತಿಂಗಳುಗಳ ಹಿಂದೆ ಸೂರ್ಯ ನಮಸ್ಕಾರ ಮಾಡುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾಗಲೂ ಕೈಫ್ ಕೆಂಗಣ್ಣಿಗೆ ಸಿಲುಕಿದ್ದರು.
“ಚೆಸ್‌ಗೆ ಇಸ್ಲಾಂ ವಿರುದ್ಧವಾಗಿದೆ ಬಾಯ್’ ಎಂದು ಒಬ್ಬ ಬರೆದಿದ್ದಾನೆ. ಮತ್ತೂಬ್ಬ ನೀವು ಇಸ್ಲಾಂಗೆ ವಿರುದ್ಧವಾದ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಕಟಿಸಿದ್ದಾನೆ. ಮತ್ತೋರ್ವ ಇಸ್ಲಾಂ ಧರ್ಮದಲ್ಲಿ ಯಾವುದೆಕ್ಕೆಲ್ಲ ನಿಷೇಧವಿದೆ ಎನ್ನುವ ಕುರಿತು 4 ಅಂಶವನ್ನು ಪ್ರಕಟಿಸಿ ಕೈಫ್ಗೆ ಬೋಧನೆ ಮಾಡಿದ್ದಾನೆ.
ಇರ್ಫಾನ್ ಪತ್ನಿ ಉಗುರಿಗೆ ಬಣ್ಣ ಹಚ್ಚಿದ್ದಕ್ಕೂ ಆಕ್ರೋಶ
ಇದಾದ ಬಳಿಕ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿ ಜತೆಗಿದ್ದ ಫೋಟೋವೊಂದನ್ನು ಪ್ರಕಟಿಸಿದ್ದರು. ಇದರಲ್ಲಿ ಅವರ ಪತ್ನಿ ಬುರ್ಖಾ ಹಾಕಿಕೊಂಡಿದ್ದರು. ಆದರೆ ಅವರ ಪತ್ನಿ ಕೈಗೆ ನೈಲ್ ಪಾಲಿಶ್ ಹಾಕಿರುವುದು ಮೂಲಭೂತವಾದಿಗಳಿಗೆ ತಪ್ಪಾಗಿ ಕಂಡಿತ್ತು. ನಮ್ಮ ಧರ್ಮದಲ್ಲಿ ನೈಲ್ ಪಾಲಿಶ್ ಹಾಕುವಂತಿಲ್ಲ. ಇದನ್ನು ನಿಮ್ಮ ಪತ್ನಿಗೆ ಸ್ವಲ್ಪ ಹೇಳಿ, ಈ ತರಹ ಮತ್ತೆ ಮಾಡಬಾರದು ಎನ್ನುವುದನ್ನು ನಿಮ್ಮ ಪತ್ನಿಗೆ ತಿಳಿಸಿ ಅಂತೆಲ್ಲ ಕೆಲವರು ಟ್ವೀಟ್ ಮಾಡಿದ್ದರು. ಭಾರತ ಸರ್ವ ಧರ್ಮದ ಬೀಡು. ಇಲ್ಲಿ ಎಲ್ಲರಿಗೂ ಅವರ ಇಷ್ಟದಂತೆ ಬದುಕುವ ಅವಕಾಶ ಇದೆ ಎಂದು
ಇರ್ಫಾನ್ ತಿರುಗೇಟು ನೀಡಿದ್ದರು.
ಪತ್ನಿಯ ಚಿತ್ರ ಹಾಕಿ ಬೈಸಿಕೊಂಡಿದ್ದ ಶಮಿ
ಭಾರತ ತಂಡದ ವೇಗಿ ಮೊಹಮ್ಮದ್ ಶಮಿಯೂ ಕ್ಷುಲ್ಲಕ ಕಾರಣಕ್ಕಾಗಿ ಕೆಲ ಮೂಲಭೂತವಾದಿಗಳ ಸಿಟ್ಟಿಗೆ ಬಲಿಯಾಗಿದ್ದರು. ಕೆಲ ತಿಂಗಳುಗಳ ಹಿಂದೆ ಮೊಹಮ್ಮದ್ ಶಮಿ ಪತ್ನಿ ಜತೆಗಿದ್ದ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಅಲ್ಲಿ ಪತ್ನಿ ಬುರ್ಖಾ ಹಾಕಿರಲಿಲ್ಲ. ಜೊತೆಗೆ ತೋಳುಗಳು ಬೆತ್ತಲೆಯಾಗಿ ಕಾಣಿಸುತ್ತಿದ್ದವು. ಇದರ ವಿರುದ್ಧ ಭಾರೀ ಟೀಕೆ ಕೇಳಿ ಬಂದಿತ್ತು. ಮುಸ್ಲಿಂ ಸಂಪ್ರದಾಯದಂತೆ ನಿಮ್ಮ ಪತ್ನಿಗೆ ಮುಖಮುಚ್ಚಿಕೊ ಳ್ಳಲು ಸಲಹೆ ನೀಡಿ. ಅವರಿಗೆ ಬಟ್ಟೆ ತಂದುಕೊಡಿ ಎಂದೆಲ್ಲ ಮೂಲಭೂತವಾದಿಗಳು ಟೀಕೆ ಮಾಡಿದ್ದರು. ಇದರ ವಿರುದ್ಧ ಶಮಿ ಆಕ್ರೋಶಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.