ಹಿಂಸೆ, ವಿವಾಹೇತರ ಸಂಬಂಧ: ಪತ್ನಿ ಆರೋಪದ ವರದಿ ಸುಳ್ಳೆಂದ ಶಮಿ
Team Udayavani, Mar 7, 2018, 3:35 PM IST
ಹೊಸದಿಲ್ಲಿ : ಪತ್ನಿ ತನ್ನ ವಿರುದ್ಧ ವಿವಾಹೇತರ ಸಂಬಂಧ ಮತ್ತು ಕೌಟುಂಬಿಕ ದೌರ್ಜನ್ಯ ಕುರಿತಾಗಿ ಮಾಡಿರುವ ಆರೋಪಗಳ ವರದಿಗಳನ್ನು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮೀ ತಿರಸ್ಕರಿಸಿದ್ದಾರೆ.
ತನ್ನ ವೈಯಕ್ತಿಕ ಬದುಕಿನ ಕುರಿತಾದ ವರದಿಗಳು ಸಂಪೂರ್ಣ ಸುಳ್ಳು ಹಾಗೂ ಅವುಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಶಮೀ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈಗಿನ್ನೂ ದೃಢೀಕರಿಸಲ್ಪಡದ, ಪತ್ನಿ ಹಸೀನ್ ಜಹಾನ್ ಹೆಸರಿನಲ್ಲಿರುವ ಫೇಸ್ ಬುಕ್ ಖಾತೆಯಲ್ಲಿ “ಪತಿ ಶಮೀ ನನ್ನನ್ನು ಕೊಲ್ಲಲೂ ಯತ್ನಿಸಿದ್ದರು; ಆತ ಮತ್ತು ಆತನ ಕುಟುಂಬದವರು ನನಗೆ ಹಿಂಸೆ ನೀಡುತ್ತಿದ್ದಾರೆ’ ಎಂದು ಹೇಳುವ ಪೋಸ್ಟ್ ಕಂಡು ಬಂದಿತ್ತು.
ಈ ಫೇಸ್ ಬುಕ್ ಪೋಸ್ಟ್ನಲ್ಲಿ ಶಮೀ ತಾಯಿ ಮತ್ತು ಸಹೋದರ ಹಸೀನ್ ಜಹಾನ್ ಗೆ ಕಿರುಕುಳ ನೀಡುತ್ತಿರುವುದಾಗಿಯೂ ಹೇಳಲಾಗಿದೆ. “ಶಮೀ ಈಚೆಗೆ ದಕ್ಷಿಣ ಆಫ್ರಿಕ ಪ್ರವಾಸದಿಂದ ಮರಳಿ ಬಂದ ಬಳಿಕ ನನನ್ನು ಹೊಡೆದು ಹಿಂಸಿಸಿದ್ದಾರೆ’ ಎಂದೂ ಪೋಸ್ಟ್ ನಲ್ಲಿ ಹೇಳಲಾಗಿದೆ.
“ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ನಾನು ಆತನಿಗೆ ಹೇಳಿದೆ ಮತ್ತು ನನ್ನನ್ನು ನಾನು ಸಮಾಧಾನಿಸಿಕೊಳ್ಳಲು ಯತ್ನಿಸಿದೆ. ತನ್ನ ತಪ್ಪು ಸರಿಪಡಿಸಿಕೊಳ್ಳುವ ಬದಲು ಆತ ನನ್ನ ಮೇಲೆಯೇ ತಿರುಗಿ ಕೋಪ ತೋರತೊಡಗಿದ; ನನ್ನನ್ನು ಬೆದರಿಸ ತೊಡಗಿದ. ತನ್ನ ಪ್ರತಿಷ್ಠೆಗಾಗಿ ನಾನು ಸುಮ್ಮನಿರುವನಂತೆ ನನಗೆ ಹೇಳಿದೆ’ ಎಂದು ಪೋಸ್ಟ್ ಹೇಳಿದೆ.
ಈ ಫೇಸ್ ಬುಕ್ ಪೇಜ್ನಲ್ಲಿ ಶಮೀ ದೈಹಿಕ ಸಂಬಂಧ ಹೊಂದಿರುವ ಹುಡುಗಿಯರ ಚಿತ್ರಗಳೂ ಇವೆ. ಆತನ ವಾಟ್ಸಾಪ್ ಚ್ಯಾಟ್ ಸ್ನ್ಯಾಪ್ ಶಾಟ್ಗಳು ಕೂಡ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Melbourne Cricket Club; ಸಚಿನ್ ತೆಂಡುಲ್ಕರ್ಗೆ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.