ಗೆಲುವಿನ ವಿದಾಯಕ್ಕೆ ಕಾದಿರುವ ಮಾರ್ಕೆಲ್
Team Udayavani, Mar 30, 2018, 6:40 AM IST
ಜೊಹಾನ್ಸ್‌ಬರ್ಗ್: ಶುಕ್ರವಾರದಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯ ನಡುವಿನ ಜೊಹಾನ್ಸ್‌ಬರ್ಗ್ ಟೆಸ್ಟ್ ಎನ್ನುವುದು ಇಬ್ಬರ ಪಾಲಿನ ವಿದಾಯ ಪಂದ್ಯವಾಗಲಿದೆ. ಒಬ್ಬರು, ಆತಿಥೇಯ ನಾಡಿನ ವೇಗಿ ಮಾರ್ನೆ ಮಾರ್ಕೆಲ್.
ಮತ್ತೂಬ್ಬರು, ಆಸ್ಟ್ರೇಲಿಯದ ಕೋಚ್ ಡ್ಯಾರನ್ ಲೇಹ್ಮನ್! ಇವರಲ್ಲಿ ಮಾರ್ಕೆಲ್ ತಮ್ಮ ನಿವೃತ್ತಿ ನಿರ್ಧಾರವನ್ನು ಮೊದಲೇ ಘೋಷಿಸಿದ್ದರು. ಇವರಿಗೆ ಗೆಲುವಿನ ವಿದಾಯ ಹೇಳುವುದು ದಕ್ಷಿಣ ಆಫ್ರಿಕಾದ ಯೋಜನೆ. ಸರಣಿಯಲ್ಲಿ ಈಗಾಗಲೇ 2-1 ಮುನ್ನಡೆಯಲ್ಲಿರುವ ಹರಿಣಗಳ ಪಡೆ ಇದನ್ನು 3-1ಕ್ಕೆ ವಿಸ್ತರಿಸುವ ಕಾರ್ಯತಂತ್ರ ರೂಪಿಸುತ್ತಿದೆ. ಕಾಂಗರೂ ವಿರುದ್ಧ 1970ರ ಬಳಿಕ ಮೊದಲ ಬಾರಿಗೆ ತನ್ನದೇ ನೆಲದಲ್ಲಿ ಸರಣಿ ಗೆಲ್ಲುವ ಅವಕಾಶವೊಂದು ಆಫ್ರಿಕಾ ಮುಂದಿದೆ. ಆಗ ಮಾರ್ನೆಲ್ ಪಾಲಿಗೂ ಇದು ಸ್ಮರಣೀಯ ಪಂದ್ಯವಾಗಲಿದೆ. ಕಳೆದ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಷ್ಟೇ ಮಾರ್ಕೆಲ್ 300 ವಿಕೆಟ್ ಉರುಳಿಸಿದ ಸಾಧನೆಗೈದಿದ್ದರು.
ಇನ್ನೊಂದೆಡೆ ಡ್ಯಾರನ್ ಲೇಹ್ಮನ್ ಗುರುವಾರ ಜೊಹಾನ್ಸ್‌ಬರ್ಗ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ “ಇದೇ ತನ್ನ ಕೊನೆಯ ಟೆಸ್ಟ್’ ಎಂಬುದಾಗಿ ಹೇಳಿದರು. ಕಳಂಕಿತ ಆಸ್ಟ್ರೇಲಿಯ ತಂಡ ತನ್ನ ಕೋಚ್‌ಗೆ ಎಂಥ ಉಡುಗೊರೆ ಕೊಡುತ್ತದೆಂಬುದನ್ನು ಕಾದು ನೋಡಬೇಕು.
ಸ್ಮಿತ್, ವಾರ್ನರ್, ಬ್ಯಾನ್‌ಕ್ರಾಫ್ಟ್ ಇಲ್ಲದ ಆಸ್ಟ್ರೇಲಿಯ ತಂಡ “ವಾಂಡರರ್’ನಲ್ಲಿ ಕಣಕ್ಕಿಳಿಯುತ್ತಿದೆ. ಇವರ ಸ್ಥಾನದಲ್ಲಿ ಜೋ ಬರ್ನ್ಸ್, ಮ್ಯಾಟ್ ರೆನ್‌ಶಾ ಆಡುವ ಸಾಧ್ಯತೆ ಇದೆ. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಪೀಟರ್ ಹ್ಯಾಂಡ್ಸ್‌ಕಾಂಬ್ ಮೊದಲ ಆಯ್ಕೆಯಾಗಬಹುದು. ಸ್ಮಿತ್-ವಾರ್ನರ್ ಅವರಿಬ್ಬರನ್ನೂ ಹೊಂದಿಲ್ಲದ ಆಸ್ಟ್ರೇಲಿಯ 2011ರ ಬಳಿಕ ಮೊದಲ ಟೆಸ್ಟ್ ಆಡಲಿಳಿಯಲಿದೆ. ಕಾಕತಾಳೀಯವೆಂದರೆ, 2011ರ ಜೊಹಾನ್ಸ್‌ಬರ್ಗ್ ಟೆಸ್ಟ್‌ನಲ್ಲೇ ಇವರಿಬ್ಬರು ಆಡಿರಲಿಲ್ಲ!
ಕೀಪರ್ ಟಿಮ್ ಪೇನ್ ಮೊದಲ ಸಲ ಆಸೀಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪೇನ್ ಆಸ್ಟ್ರೇಲಿಯದ 46ನೇ ಟೆಸ್ಟ್ ನಾಯಕನಾಗಿದ್ದು, ಕಾಂಗರೂ ನಾಡಿನ 5ನೇ ವಿಕೆಟ್ ಕೀಪರ್-ನಾಯಕ. ಬಿಲ್ಲಿ ಮುಡೋìಕ್, ಜಾಕ್ ಬ್ಲ್ಯಾಕ್‌ಹ್ಯಾಮ್, ಬ್ಯಾರ್ರಿ ಜರ್ಮನ್ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್ ಉಳಿದ ನಾಲ್ವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.