ಫಿಫಾ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್: ಸ್ಪೇನ್-ಮೊರೊಕ್ಕೊ ಪ್ರಚಂಡ ಮೇಲಾಟ
Team Udayavani, Dec 6, 2022, 11:09 PM IST
ದೋಹಾ: “ಎಜುಕೇಶನ್ ಸಿಟಿ ಸ್ಟೇಡಿಯಂ’ನಲ್ಲಿ ನಡೆದ ಸ್ಪೇನ್-ಮೊರೊಕ್ಕೊ ನಡುವಿನ ಮಂಗಳವಾರ ರಾತ್ರಿಯ ಫಿಫಾ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ಪ್ರಚಂಡ ಮೇಲಾಟಕ್ಕೆ ಸಾಕ್ಷಿಯಾಯಿತು.
ಎರಡೂ ತಂಡಗಳ ಗೋಲು ಗಳಿಕೆಯ ಪ್ರಯತ್ನ ವಿಫಲ ವಾಗುವುದರೊಂದಿಗೆ ಪಂದ್ಯ ಹೆಚ್ಚುವರಿ ಅವಧಿಗೆ ವಿಸ್ತರಿಸಲ್ಪಟ್ಟಿತು. ಇಲ್ಲಿಯೂ ಫಲಿತಾಂಶ ಬಾರದೇ ಹೋದರೆ ಪಂದ್ಯ ಪೆನಾಲ್ಟಿ ಶೂಟೌಟ್‌ನತ್ತ ಮುಖ ಮಾಡಲಿದೆ.
ಮೊದಲಾರ್ಧದಲ್ಲಿ ಎರಡೂ ತಂಡ ಗಳು ಅವಕಾಶವನ್ನು ಸೃಷ್ಟಿಸಿಕೊಳ್ಳಲು ವಿಫಲವಾದವು. ಇದ್ದುದರಲ್ಲಿ ಸ್ಪೇನ್‌ನ ಮಾರ್ಕೊ ಅಸೆನ್ಸಿಯೊ ಅವರಿಗೆ ಒಂದು ಉತ್ತಮ ಚಾನ್ಸ್ ಸಿಕ್ಕಿತಾ ದರೂ ಇದು ತಪ್ಪಿಹೋಯಿತು. ದ್ವಿತೀ ಯಾರ್ಧದಲ್ಲೂ ಆಟ ಬಿಗುವಿನಿಂದ ಕೂಡಿತ್ತು. 88ನೇ ನಿಮಿಷದಲ್ಲಿ ಸ್ಪೇನ್ ಕೋಟೆಗೆ ಲಗ್ಗೆ ಹಾಕಿದ ಮೊರೊಕ್ಕೊಗೂ ಅವಕಾಶ ಎದುರಾಯಿತು. ಆದರೆ ಗೋಲ್ ಮಾತ್ರ ದಾಖಲಾಗಲಿಲ್ಲ. 90 +5ನೇ ನಿಮಿಷದಲ್ಲಿ ಸ್ಪೇನ್ ಪ್ರಯತ್ನವನ್ನು ಮೊರೊಕ್ಕೊ ಕೀಪರ್ ವಿಫಲಗೊಳಿಸಿದರು.
ಮೊರೊಕ್ಕೊ “ಎಫ್’ ವಿಭಾಗದ ಅಗ್ರಸ್ಥಾನಿಯಾಗಿತ್ತು. ಕ್ರೊವೇಶಿಯ, ಬೆಲ್ಜಿಯಂಗಿಂತ ಉತ್ತಮ ಪ್ರದರ್ಶನ ನೀಡಿತ್ತು. 6ನೇ ವಿಶ್ವಕಪ್‌ನಲ್ಲಿ ಪಾಲ್ಗೊಂಡ ಮೊರೊಕ್ಕೊಗೆ ಇದು 2ನೇ ಪ್ರಿ ಕ್ವಾರ್ಟರ್ ಫೈನಲ್. ಮೊದಲ ಸಲ 1986ರಲ್ಲಿ ಜರ್ಮನಿ ವಿರುದ್ಧ ಆಡಿ ಏಕೈಕ ಗೋಲಿನಿಂದ ಸೋಲನುಭವಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.