ಇನ್ನೂ ನಾಯಕನ ಗುಂಗಿನಿಂದ ಹೊರಬರದ ಮಾಹಿ: DRS ಗೆ ಮನವಿ!
Team Udayavani, Jan 17, 2017, 3:48 PM IST
ಪುಣೆ: ನಾಯಕನಾಗಿ ವಿರಾಟ್ ಕೊಹ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಮೈಮರೆತು ಮಾಜಿ ನಾಯಕ ಎಂ.
ಎಸ್.ಧೋನಿ ತೆಗೆದುಕೊಂಡ ಘಟನೆ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ನಡೆದಿದೆ.
ಸದ್ಯ ಏಕದಿನ ನಾಯಕತ್ವದಲ್ಲಿ ಧೋನಿ ಇಲ್ಲ. ಕೊಹ್ಲಿ ಪೂರ್ಣಾವಧಿಯ ನಾಯಕನಾಗಿ ಜವಾಬ್ದಾರಿ ಪಡೆದಿದ್ದಾರೆ. ಹೀಗಾಗಿ ಡಿಆರ್‌ಎಸ್ (ತೀರ್ಪಿನ ವಿರುದ್ಧ ಮೇಲ್ಮನವಿ) ಸೇರಿದಂತೆ ತಂಡದೊಳಗಿನ ಪ್ರಮುಖ ನಿರ್ಧಾರವನ್ನು ಕ್ರೀಡಾಂಗಣದಲ್ಲಿ ಹಾಲಿ ನಾಯಕ ಕೊಹ್ಲಿಯೇ ತೆಗೆದು ಕೊಳ್ಳಬೇಕು. ಆದರೆ ಭಾನುವಾರ ಇಂಗ್ಲೆಂಡ್ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಅಭ್ಯಾಸಬಲದಿಂದ ಧೋನಿಯೇ ಡಿಆರ್‌ಎಸ್‌ಗೆ ಮನವಿ ಸಲ್ಲಿಸಿಬಿಟ್ಟರು. ಆನಂತರ ಕೊಹ್ಲಿ ಡಿಆರ್‌ಎಸ್‌ಗೆ ಮನವಿ ಸಲ್ಲಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಖ್ಯೆಯಲ್ಲಿ ವೀಕ್ಷಣೆಗೆ ಕಾರಣವಾಗಿದೆ.
ಏನಿದು ಘಟನೆ?
ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಎಸೆದ 27ನೇ ಓವರ್‌ನ ಕೊನೆ ಚೆಂಡು ಇಯಾನ್ ಮಾರ್ಗನ್ ಬ್ಯಾಟ್ಸ್ ಸವರಿ ವಿಕೆಟ್ ಕೀಪರ್ ಧೋನಿ ಕೈ ಸೇರಿತು. ಈ ವೇಳೆ ಔಟ್‌ಗಾಗಿ ಮನವಿ ಸಲ್ಲಿಸಿದಾಗ ಅಂಪೈರ್ ಅದನ್ನು ತಿರಸ್ಕರಿಸಿದರು. ಈ ವೇಳೆ ಕೊಹ್ಲಿ ಡಿಆರ್‌ಎಸ್‌ಗೆ ಮನವಿ ಸಲ್ಲಿಸಬೇಕಿತ್ತು. ಆದರೆ ಮಾಜಿ ನಾಯಕ ಧೋನಿ ಕ್ಯಾಪ್ಟನ್ ಕೊಹ್ಲಿಗಿಂತ ಮೊದಲೇ ಡಿಆರ್‌ಎಸ್ ಸಿಗ್ನಲ್ ನೀಡಿದ್ದರು. ಧೋನಿ ಡಿಆರ್‌ಎಸ್ ಸಿಗ್ನಲ್ ಅನ್ನು ಅಂಪೈರ್ ಪುರಸ್ಕರಿಸಲಿಲ್ಲ. ಆನಂತರ ಕೊಹ್ಲಿ ಡಿಆರ್‌ಎಸ್‌ಗೆ ಸೂಚನೆ ನೀಡಿದ ಬಳಿಕ ಅಂಪೈರ್ ಅಧಿಕೃತವಾಗಿ ಪುರಸ್ಕರಿಸಿದರು.
ಧೋನಿ ನಿರ್ಧಾರ ಸಮರ್ಥಿಸಿದ ಕೊಹ್ಲಿ
ಧೋನಿ ಸಲ್ಲಿಸಿದ ಮೇಲ್ಮವಿ ಶೇ.95ರಷ್ಟು ಸರಿ ಇದೆ ಎನ್ನುವುದು ಅಂಕಿ-ಅಂಶಗಳೇ ಹೇಳುತ್ತವೆ. ಈ ಬಗ್ಗೆ ಯಾವುದೇ ಚರ್ಚೆ ಬೇಡ. ಧೋನಿ ನಿರ್ಧಾರವನ್ನು ನಾನು ಯಾವಾಗಲೂ ಹೆಚ್ಚು ಅರ್ಥ ಮಾಡಿಕೊಳ್ಳುತ್ತೇನೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.