ಈ ವರ್ಷ ಟಿ-20 ವಿಶ್ವಕಪ್ ಗೆಲ್ಲೋದು ಇವರೇ… ಭವಿಷ್ಯ ನುಡಿದ ಮಾಹಿ
ಅಭಿಮಾನಿಗಳಿಗೆ ನಿರಾಸೆ ಮಾಡಿದ ಧೋನಿ!
Team Udayavani, Sep 25, 2022, 3:45 PM IST
ನವದೆಹಲಿ: ಟೀಮ್ ಇಂಡಿಯಾ ಮಾಜಿ ಕಪ್ತಾನ ಎಂ.ಎಸ್ ಧೋನಿ ನಿನ್ನೆ ತಮ್ಮ ಫೇಸ್ ಬುಕ್ ನಲ್ಲಿ ಮಹತ್ವದ ಘೋಷಣೆ ಮಾಡಲಿದ್ದೇನೆ ಎಂದು ಪೋಸ್ಟ್ ವೊಂದನ್ನು ಹಾಕಿದ್ದರು. ಇಂದು ಆ ಮಹತ್ವದ ಘೋಷಣೆ ಏನೆಂದು ಅವರು ರಿವೀಲ್ ಮಾಡಿದ್ದಾರೆ.
41 ವರ್ಷದ ಎಂ ಎಸ್ ಧೋನಿ ಸದ್ಯ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಅವರು 2023 ರ ಐಪಿಎಲ್ ನಲ್ಲಿ ಚೆನ್ನೈ ತಂಡವನ್ನು ಮತ್ತೊಮ್ಮೆ ಕ್ಯಾಪ್ಟನ್ ಆಗಿ ಮುನ್ನೆಡಸಲಿದ್ದಾರೆ. ಧೋನಿ ಸೆ.25 ( ಶನಿವಾರ) ಫೇಸ್ ಬುಕ್ ನಲ್ಲಿ ಫೋಸ್ಟ್ ವೊಂದನ್ನು ಹಾಕಿ ಇಂದು ( ಸೆ.26 ರಂದು) ಮಹತ್ವದ ವಿಷಯವನ್ನು ಘೋಷಣೆ ಮಾಡಲಿದ್ದೇನೆ ಎಂದು ಬರೆದುಕೊಂಡಿದ್ದರು. ಈ ಫೋಸ್ಟ್ ಅನೇಕ ಅಭಿಮಾನಿಗಳಲ್ಲಿ ಕುತೂಹಲ ಹಾಗೂ ಕಳವಳವನ್ನು ಹುಟ್ಟಿಸಿತ್ತು.
ಕೆಲಕಡೆ ಧೋನಿ ಐಪಿಎಲ್ ಗೂ ವಿದಾಯ ಹೇಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಆ ಎಲ್ಲಾ ಊಹಾಪೋಹಗಳಿಗೆ ಅವರಿಂದು ತೆರೆ ಎಳೆದಿದ್ದಾರೆ.
ಫೇಸ್ ಬುಕ್ ಲೈವ್ ನಲ್ಲಿ ಅವರು ಮಹತ್ವದ ಘೋಷಣೆ ಬಗ್ಗೆ ರಿವೀಲ್ ಮಾಡಿದ್ದಾರೆ. ಅದೇನೆಂದರೆ ಅವರು ಬಿಸ್ಕೆಟ್ ವೊಂದರ ಬ್ರ್ಯಾಂಡ್ ನ್ನು ಭಾರತದಲ್ಲಿ ಲಾಂಚ್ ಮಾಡಲಿದ್ದಾರೆ. ಲೈವ್ ನಲ್ಲಿ ನಲ್ಲಿ ಮಾತಾನಾಡಿದ ಅವರು, ಭಾರತ 2011 ರಲ್ಲಿ ವಿಶ್ವಕಪ್ ಗೆದ್ದಾಗ ಓರಿಯೋ ಬಿಸ್ಕೆಟ್ ಲಾಂಚ್ ಆಗಿತ್ತು. ಆಗ ನಾವು ಇತಿಹಾಸವನ್ನು ಬರೆದಿದ್ದೇವು. ಈಗ ಮತ್ತೊಮ್ಮೆ ಬಿಸ್ಕೆಟನ್ನು ಭಾರತದಲ್ಲಿ ಲಾಂಚ್ ಮಾಡಲಿದ್ದೇವೆ. ಭಾರತ ಮತ್ತೊಮ್ಮೆ ವಿಶ್ವಕಪ್ ಗೆದ್ದು ಇತಿಹಾಸ ಬರೆಯಲಿದೆ ಎಂದು ಧೋನಿ ಹೇಳಿದ್ದಾರೆ.
ನಾನು 2011 ನ್ನು ಮತ್ತೆ ತರುತ್ತಿದ್ದೇನೆ. ಇತಿಹಾಸವನ್ನು ರಚಿಸಲು ನಾವು ಇತಿಹಾಸವನ್ನು ಮರುಸೃಷ್ಟಿ ಮಾಡಬೇಕೆಂದು ಧೋನಿ ಹೇಳಿದ್ದಾರೆ.
ಧೋನಿ ಅವರ ಲೈವ್ ನೋಡಲು ಲಕ್ಷಕ್ಕೂ ಅಧಿಕ ಮಂದಿ ಕಾಯುತ್ತಿದ್ದರು. ಆದರೆ ಧೋನಿ ಅವರ ಜಾಹೀರಾತಿನ ಬಗ್ಗೆ ಕೇಳಿ ಅನೇಕ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಎಂಎಸ್ ಧೋನಿ 2007 ಟಿ-20 ವಿಶ್ವಕಪ್, 2011 ರ ಏಕದಿನ ವಿಶ್ವಕಪ್, 2013 ರ ಚಾಂಪಿಯನ್ ಟ್ರೋಫಿಯಲ್ಲಿ ಕಪ್ತಾನನಾಗಿ ಮಹತ್ತರ ಸಾಧನೆ ಮಾಡಿದ್ದಾರೆ. 350 ಏಕದಿನ ಪಂದ್ಯ,98 ಅಂತಾರಾಷ್ಟೀಯ ಟಿ-20 ಹಾಗೂ 90 ಟೆಸ್ಟ್ ಪಂದ್ಯಗಳಲ್ಲಿ,ಎಲ್ಲಾ ಮಾದರಿಯಲ್ಲಿ ಅವರು ಒಟ್ಟು 17,226 ರನ್ ಗಳನ್ನು ಗಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.