ಕ್ರಿಕೆಟ್‌ಗೆ ಬ್ರೇಕ್; ಫುಟ್‌ಬಾಲ್ ಆಡಿದ ಧೋನಿ
Team Udayavani, Jul 27, 2018, 6:00 AM IST
ಹೊಸದಿಲ್ಲಿ: ಭಾರತೀಯ ಏಕದಿನ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಎಂಎಸ್ ಧೋನಿ ಫುಟ್‌ಬಾಲ್ ಅಭಿಮಾನಿ. ಬಿಡುವಿನ ವೇಳೆ ಅವರು ಫುಟ್‌ಬಾಲ್ ಆಟದಲ್ಲಿ ಮಗ್ನರಾಗುವುದು ಸಾಮಾನ್ಯ.
ಇಂಗ್ಲೆಂಡ್ ವಿರುದ್ಧದ ಟ್ವೆಂಟಿ20 ಮತ್ತು ಏಕದಿನ ಸರಣಿ ಮುಗಿದ ಬಳಿಕ ಧೋನಿ ಕ್ರಿಕೆಟ್‌ಗೆ ಬ್ರೇಕ್ ನೀಡಿದ್ದು ಬಾಲಿವುಡ್ ನಟ ಧಡಕ್ ಸಿನಿಮಾದ ತಾರೆ ಇಶಾನ್ ಖಟ್ಟರ್ ಜತೆ ಫುಟ್‌ಬಾಲ್ ಆಡಿದರು. ಮಾತ್ರವಲ್ಲದೇ ಇಶಾನ್‌ಗೆ ಫುಟ್‌ಬಾಲ್ ಆಟದ ಬಗ್ಗೆ ಕೆಲವು ಟಿಪ್ಸ್ ನೀಡಿದ್ದಾರೆ. ಇಶಾನ್ ಅವರು ನಟ ಶಾಹಿದ್ ಕಪೂರ್ ಅವರ ಕಿರಿಯ ಸಹೋದರರಾಗಿದ್ದಾರೆ.ಈಗ ಫುಟ್‌ಬಾಲ್ ಸಮಯ ಎಂದು ಧೋನಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಧೋನಿ ಇತ್ತೀಚೆಗೆ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರ್ತಿಗೊಳಿಸಿದ 12ನೇ ಆಟಗಾರ ಎಂದೆನಿಸಿಕೊಂಡಿದ್ದರು. ಈ ಸಾಧನೆಗೈದ ಎರಡನೇ ವಿಕೆಟ್‌ಕೀಪರ್ ಆಗಿದ್ದಾರೆ. ಕುಮಾರ ಸಂಗಕ್ಕರ ಮೊದಲ ವಿಕೆಟ್‌ಕೀಪರ್ ಆಗಿದ್ದಾರೆ.
ಏಕದಿನದಲ್ಲಿ ಗರಿಷ್ಠ ರನ್ ಪೇರಿಸಿದವರಲ್ಲಿ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರು 18,426 ರನ್ ಗಳಿಸಿದ್ದಾರೆ. ಸಂಗಕ್ಕರ (14,234), ಆಸ್ಟ್ರೇಲಿಯದ ರಿಕಿ ಪಾಂಟಿಂಗ್ (13,704), ಶ್ರೀಲಂಕಾದ ಸನತ್ ಜಯಸೂರ್ಯ (13,430) ಮತ್ತು ಮಾಹೇಲ ಜಯವರ್ಧನ (12,650) ಅನಂತರದ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.