IPL 2023: ಸಿಎಸ್ ಕೆ ಆಟಗಾರನ ವಿರುದ್ಧ ಕೋಪಗೊಂಡ ಕ್ಯಾಪ್ಟನ್ ಕೂಲ್ ಧೋನಿ
Team Udayavani, Apr 18, 2023, 12:45 PM IST
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ಯಾಪ್ಟನ್ ಕೂಲ್ ಎಂದೇ ಹೆಸರಾದವರು. ಯಾವುದೇ ಕ್ಷಣದಲ್ಲಿಯೂ ತಾಳ್ಮೆಯಿಂದ ವರ್ತಿಸುವ ಧೋನಿ ಅವರು ಮುಖದಲ್ಲಿಯೂ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಸದಾ ನಿರ್ಲಿಪ್ತರಾಗಿಯೇ ಇರುವ ಧೋನಿ ಆಟಗಾರರ ಮೇಲೆ ಕೋಪಗೊಳ್ಳುವುದು ತೀರಾ ಅಪರೂಪ.
ಆದರೆ ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಧೋನಿ ತಾಳ್ಮೆ ಕಳೆದುಕೊಂಡಿದ್ದಾರೆ. ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಮೋಯಿನ್ ಅಲಿ ವಿರುದ್ಧ ಕೋಪಗೊಂಡಿದ್ದಾರೆ.
ಇದನ್ನೂ ಓದಿ:Ileana D’Cruz: ಮದುವೆಗೂ ಮುನ್ನವೇ ಮಗುವಿನ ನಿರೀಕ್ಷೆ; ಪೋಸ್ಟ್ ಹಾಕಿ ಸಂತಸ ಹಂಚಿಕೊಂಡ ನಟಿ
ರನ್ ಚೇಸ್ ನ 18ನೇ ಓವರ್‌ನಲ್ಲಿ ವೇಯ್ನ್ ಪಾರ್ನೆಲ್ ಅವರು ಮಥೀಶ ಪತಿರಣ ಅವರ ಎಸೆತವನ್ನು ಎಕ್ಸ್‌ಟ್ರಾ-ಕವರ್ ಕಡೆಗೆ ಬಾರಿಸಿ ಸಿಂಗಲ್ ಗಾಗಿ ಓಡಿದರು. ಆದರೆ ನಾನ್ ಸ್ಟ್ರೈಕರ್ ನಲ್ಲಿದ್ದ ಸುಯಶ್ ಪ್ರಭುದೇಸಾಯಿ ಓಡಲೇ ಇಲ್ಲ. ಈ ವೇಳೆ ಅವರನ್ನು ರನ್ ಔಟ್ ಮಾಡುವ ಅದ್ಭುತ ಅವಕಾಶ ಮೊಯಿನ್ ಅಲಿಗೆ ಸಿಕ್ಕಿತ್ತು. ಆದರೆ ಮೊಯಿನ್ ಚೆಂಡನ್ನು ಪಡೆದು ಎಸೆಯುವಲ್ಲಿ ಉದಾಸಿನ ತೋರಿದರು. ಚೆಂಡನ್ನು ಕೀಪರ್ ಧೋನಿಗೆ ಎಸೆಯುವ ಹೊತ್ತಿಗೆ ಬ್ಯಾಟರ್ ಸುರಕ್ಷಿತವಾಗಿ ಕ್ರೀಸ್ ನಲ್ಲಿದ್ದರು. ಮೊಯಿನ್ ಅಲಿ ಅವರ ಈ ಪ್ರಯತ್ನಕ್ಕೆ ಧೋನಿ ಕೋಪಗೊಂಡರು.
— Billu Pinki (@BilluPinkiSabu) April 18, 2023
ಸಿಎಸ್ ಕೆ- ಆರ್ ಸಿಬಿ ನಡುವಿನ ಹೈವೋಲ್ಟೇಜ್ ಸಮರದಲ್ಲಿ ಚೆನ್ನೈ ತಂಡವು ಎಂಟು ರನ್ ಅಂತರದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್ ಕೆ 226 ರನ್ ಗಳಿಸಿದ್ದರೆ, ಬೆಂಗಳೂರು ತಂಡವು 218 ರನ್ ಮಾತ್ರ ಮಾಡಲು ಶಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.