ಮುಂದಿನ ಐಪಿಎಲ್ ನಲ್ಲಿ ಮಹತ್ತರ ಬದಲಾವಣೆ: ಚೆನ್ನೈ ತಂಡಕ್ಕೆ ಧೋನಿ ಬದಲು ಹೊಸ ನಾಯಕನ ಸಾಧ್ಯತೆ
Team Udayavani, Nov 14, 2020, 10:58 AM IST
ಚೆನ್ನೈ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದು ವಾರಗಳು ಕಳೆದಿಲ್ಲ. ಅಷ್ಟರಲ್ಲೇ ಮುಂದಿನ ಐಪಿಎಲ್ ನ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಮುಂದಿನ ವರ್ಷದ ಏಪ್ರಿಲ್ ಗೆ ಭಾರತದಲ್ಲೇ ಐಪಿಎಲ್ ನಡೆಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಹೇಳಿದ್ದಾರೆ. ಈ ಮಧ್ಯೆ ತಂಡಗಳು ಬದಲಾವಣೆಯತ್ತ ಮುಖ ಮಾಡಿದೆ.
ಈ ಬಾರಿಯ ಕೂಟದಲ್ಲಿ ಗೆಲುವಿಗಿಂತ ಸೋಲನ್ನೇ ಹೆಚ್ಚು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದಿನ ಆವೃತ್ತಿಗೆ ಬಹಳಷ್ಟು ಬದಲಾವಣೆ ಮಾಡಲಿದೆ ಎನ್ನಲಾಗಿದೆ. ಎಲ್ಲದಕ್ಕೂ ಮಿಗಿಲಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವವನ್ನು ತ್ಯಜಿಸಲಿದ್ದಾರಂತೆ. ಹೀಗಂದವರು ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್.
ಮುಂದಿನ ಆವೃತ್ತಿಯಲ್ಲಿ ಎಂ.ಎಸ್.ಧೋನಿ ನಾಯಕತ್ವದ ಜವಾಬ್ದಾರಿಯನ್ನು ಫಾಫ್ ಡು ಪ್ಲೆಸಿಸ್ ಗೆ ಬಿಟ್ಟುಕೊಡಬಹುದು ಎಂದು ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಟೀಂ ಇಂಡಿಯಾ ನಾಯಕನಾಗಿದ್ದ ಸಮಯದಲ್ಲಿನ ಅನುಭವವನ್ನು ಹಂಚಿಕೊಂಡಿರುವ ಬಂಗಾರ್, “ನನಗೆ ತಿಳಿದ ಮಟ್ಟಿಗೆ, ಎಂಎಸ್ ಧೋನಿ ಅವರು 2011 ರ ನಂತರ ಭಾರತೀಯ ತಂಡದ ನಾಯಕನಾಗಿ ಮುಂದುವರಿಯಬೇಕೇ ಎಂದು ಯೋಚಿಸಿರಬಹುದು ಆದರೆ ಅದರ ನಂತರ ಭಾರತವು ಕೆಲವು ಕಠಿಣ ಸರಣಿಗಳನ್ನು ಆಡಲಿದೆ ಎಂದು ಅವರಿಗೆ ತಿಳಿದಿತ್ತು, ತಂಡ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಆಡಬೇಕಾಗಿತ್ತು, ಆ ಸಮಯದಲ್ಲಿ ಯಾವುದೇ ನಾಯಕತ್ವ ಅಭ್ಯರ್ಥಿ ಸಿದ್ಧವಾಗಿಲ್ಲ, ಆದ್ದರಿಂದ ಅವರು ಆ ಹೊಣೆಯನ್ನು ನಿಭಾಯಿಸಿದರು. ನಂತರ ಸರಿಯಾದ ಸಮಯದಲ್ಲಿ ಅವರು ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದರು ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.