Team India; ಎಂ.ಎಸ್.ಧೋನಿ ‘ಜೆರ್ಸಿ ನಂ.7’ ಗೆ ವಿದಾಯ ಹೇಳಲಿದೆ ಬಿಸಿಸಿಐ
Team Udayavani, Dec 15, 2023, 1:29 PM IST
ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಂಬರ್ 7 ಜೆರ್ಸಿಗೆ ವಿದಾಯ ಹೇಳಲು ನಿರ್ಧರಿಸಿದೆ. ಈ ಮೂಲಕ ನಂಬರ್ 7 ಜೆರ್ಸಿಯನ್ನು 16 ವರ್ಷಗಳ ಕಾಲ ಧರಿಸಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಗೌರವ ನೀಡಲಿದೆ ಎಂದು ವರದಿಯಾಗಿದೆ.
2019ರ ಏಕದಿನ ವಿಶ್ವಕಪ್ ನಲ್ಲಿ ಕೊನೆಯದಾಗಿ ಭಾರತದ ಪರ ಆಡಿದ್ದ ಎಂ.ಎಸ್ ಧೋನಿ ಅವರು 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು. ಸದ್ಯ ಅವರು ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ.
ಈ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ನಂಬರ್ 10 ಜೆರ್ಸಿಗೆ ಬಿಸಿಸಿಐ ವಿದಾಯ ನೀಡಿತ್ತು. 2017ರಲ್ಲಿ ಶಾರ್ದೂಲ್ ಠಾಕೂರ್ ಅವರು ನಂಬರ್ 10 ಜೆರ್ಸಿ ಧರಿಸಿ ಆಡಿದ್ದರು. ಇದು ಭಾರಿ ಟೀಕೆಗೆ ಕಾರಣವಾಗಿತ್ತು. ಇದಾದ ಬಳಿಕ ಬಿಸಿಸಿಐ ಸಚಿನ್ ತೆಂಡೂಲ್ಕರ್ ಅವರ 10 ಜೆರ್ಸಿಗೆ ವಿದಾಯ ನೀಡಿತ್ತು.
ಜೆರ್ಸಿ ಸಂಖ್ಯೆಗೆ ವಿದಾಯ ನೀಡುವುದು ಅಂದರೆ ಮುಂದೆ ಯಾವುದೇ ಆಟಗಾರನಿಗೆ ಆ ಸಂಖ್ಯೆಯ ಜೆರ್ಸಿ ನೀಡದಿರುವುದು. ಅಂದರೆ ಭಾರತವನ್ನು ಪ್ರತಿನಿಧಿಸುವ ಯಾವುದೇ ಕ್ರಿಕೆಟ್ ಆಟಗಾರ ಜೆರ್ಸಿಯಲ್ಲಿ ನಂಬರ್ 10 ಬಳಸುವಂತಿಲ್ಲ. ಮುಂದೆ ಧೋನಿ ಜೆರ್ಸಿ ವಿದಾಯವೂ ಖಚಿತವಾದರೆ ನಂಬರ್ 7 ಕೂಡಾ ಬಳಸುವಂತಿಲ್ಲ.
ಬಿಸಿಸಿಐ ಈಗಾಗಲೇ ಯುವ ಮತ್ತು ಹಾಲಿ ಆಟಗಾರರಿಗೆ ಜೆರ್ಸಿ ಸಂಖ್ಯೆ 7 ಇನ್ನು ಮುಂದೆ ಆಯ್ಕೆಗೆ ಲಭ್ಯವಿಲ್ಲ ಎಂದು ಹೇಳಿದೆ. “ಯುವ ಆಟಗಾರರು ಮತ್ತು ಪ್ರಸ್ತುತ ಭಾರತೀಯ ತಂಡದ ಆಟಗಾರರು ಎಂಎಸ್ ಧೋನಿ ಅವರ ನಂಬರ್ 7 ಜೆರ್ಸಿಯನ್ನು ಆಯ್ಕೆ ಮಾಡದಂತೆ ತಿಳಿಸಲಾಗಿದೆ. ಧೋನಿ ಆಟಕ್ಕೆ ನೀಡಿದ ಕೊಡುಗೆಗಾಗಿ ಅವರ ಟಿ-ಶರ್ಟ್ ಅನ್ನು ನಿವೃತ್ತಿ ಮಾಡಲು ಬಿಸಿಸಿಐ ನಿರ್ಧರಿಸಿದೆ. ಹೊಸ ಆಟಗಾರ 7 ನೇ ಸ್ಥಾನ ಪಡೆಯಲು ಸಾಧ್ಯವಿಲ್ಲ, ಮತ್ತು ಲಭ್ಯವಿರುವ ಸಂಖ್ಯೆಗಳ ಪಟ್ಟಿಯಿಂದ ನಂ. 10 ಈಗಾಗಲೇ ಹೊರಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.
Jersey No.7 Retired !! 🇮🇳💙
“The young players and current Indian team players have been told not to pick MS Dhoni’s Number 7 jersey. The BCCI has decided to retire Dhoni’s T-shirt for his contribution to the game.” @MSDhoni | #MSDhoni | #TeamIndia pic.twitter.com/ARIFkYPn1u
— Nithish MSDian 🦁 (@thebrainofmsd) December 15, 2023
ಕ್ರಿಕೆಟಿಗರು ತಮ್ಮ ಜೆರ್ಸಿಯ ಹಿಂಭಾಗದಲ್ಲಿ 1 ರಿಂದ 100 ರವರೆಗಿನ ಯಾವುದೇ ಸಂಖ್ಯೆಯನ್ನು ಆಯ್ಕೆ ಮಾಡಲು ಐಸಿಸಿ ಅನುಮತಿಸುತ್ತದೆ. ರಾಷ್ಟ್ರೀಯ ತಂಡದಲ್ಲಿ ಹೊಸ ಆಟಗಾರ ಆಯ್ಕೆಯಾದಾಗ, ಅವನು ಅಥವಾ ಆಕೆಗೆ ಅವರ ಬೆನ್ನಿನಲ್ಲಿ ಯಾವ ಸಂಖ್ಯೆ ಬೇಕು ಎಂದು ಕೇಳಲಾಗುತ್ತದೆ. ಸಂಖ್ಯೆ ಲಭ್ಯವಿದ್ದರೆ, ಅದನ್ನು ಆ ಆಟಗಾರನಿಗೆ ನೀಡಲಾಗುತ್ತದೆ. ಉದಾಹರಣೆಗೆ, 2018 ರಲ್ಲಿ U19 ವಿಶ್ವಕಪ್ ನಲ್ಲಿ ಶುಬ್‌ಮನ್ ಗಿಲ್ ತನ್ನ ಜೆರ್ಸಿಗೆ 7 ನೇ ಸಂಖ್ಯೆಯನ್ನು ಬಯಸಿದ್ದರು ಆದರೆ ಅದು ಲಭ್ಯವಿಲ್ಲದ ಕಾರಣ, ಅವರು ಎರಡು 7 ಸಂಖ್ಯೆ ಪಡೆದರು. ಅವರು ಈಗಲೂ ಭಾರತ ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ಪರ 77 ಜೆರ್ಸಿಯಲ್ಲಿ ಆಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Martin: ಕಿರುತೆರೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.