ವಿದರ್ಭ ವಿರುದ್ಧ ಝಾರ್ಖಂಡ್ಗೆ ಭರ್ಜರಿ ಜಯ
Team Udayavani, Mar 16, 2017, 11:46 AM IST
ಹೊಸದಿಲ್ಲಿ: ಆಲ್ರೌಂಡ್ ಆಟದ ಪ್ರದರ್ಶನ ನೀಡಿದ ಝಾರ್ಖಂಡ್ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಕೂಟದ ಮೂರನೇ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಆರು ವಿಕೆಟ್ಗಳಿಂದ ಭರ್ಜರಿಯಾಗಿ ಸೋಲಿಸಿ ಸೆಮಿಫೈನಲಿಗೇರಿದೆ.
ಧೋನಿ ನಾಯಕತ್ವದ ಝಾರ್ಖಂಡ್ ತಂಡ ಬೌಲಿಂಗ್, ಬ್ಯಾಟಿಂಗ್ನಲ್ಲಿ ಅಮೋಘ ನಿರ್ವಹಣೆ ನೀಡಿತು. ಪ್ರತ್ಯುಷ್ ಸಿಂಗ್ ಹೊರತುಪಡಿಸಿ ಉಳಿದ ಐವರು ಬೌಲರ್ಗಳು ನಿಖರ ದಾಳಿ ಸಂಘಟಿಸಿ ವಿಕೆಟ್ ಪಡೆಯಲು ಯಶಸ್ವಿಯಾದರು. ಇದರಿಂದಾಗಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿದರ್ಭ ತಂಡವು ಆರಂಭಿಕ ಆಘಾತ ಅನುಭವಿಸುವಂತಾಯಿತು. 18 ರನ್ ಗಳಿಸುವಷ್ಟರಲ್ಲಿ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಗಣೇಶ್ ಸತೀಶ್, ರವಿ ಜಂಗಿದ್ ಮತ್ತು ರಜನೀಶ್ ಗುರ್ಬಾನಿ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. ಜಂಗಿದ್ ಮಾತ್ರ ಉತ್ತಮ ಹೋರಾಟ ನಡೆಸಿ 62 ರನ್ ಗಳಿಸಿದರು. ಈ ಮೂವರ ಬ್ಯಾಟಿಂಗ್ ಪ್ರಯತ್ನದಿಂದಾಗಿ ವಿದರ್ಭ 9 ವಿಕೆಟಿಗೆ 159 ರನ್ ಗಳಿಸಿತು.
ಸುಲಭ ಗುರಿಯಿದ್ದರೂ ಎಚ್ಚರಿಕೆಯಿಂದ ಆಡಿದ ಝಾರ್ಖಂಡ್ನ ಆರಂಭಿಕರು ಮೊದಲ ವಿಕೆಟಿಗೆ 68 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಉತ್ತಮ ಅಡಿಪಾಯ ಹಾಕಿಕೊಟ್ಟರು. ಆಬಳಿಕ ಇಶಾಂಕ್ ಜಗ್ಗಿ ಮತ್ತು ಧೋನಿ ಮುರಿಯದ ಐದನೇ ವಿಕೆಟಿಗೆ 49 ರನ್ ಪೇರಿಸಿ ತಂಡಕ್ಕೆ ಜಯ ತಂದುಕೊಟ್ಟರು. 45.1 ಓವರ್ಗಳಲ್ಲಿ ಝಾರ್ಖಂಡ್ ಭರ್ಜರಿ ಜಯ ಸಾಧಿಸಿ ಮುನ್ನಡೆಯಿತು.
ಸಂಕ್ಷಿಪ್ತ ಸ್ಕೋರು
ವಿದರ್ಭ 9 ವಿಕೆಟಿಗೆ 159 (ಗಣೇಶ್ ಸತೀಶ್ 35, ರವಿ ಜಂಗಿದ್ 62, ರಜನೀಶ್ ಗುರ್ಬಾನಿ 22, ಮೊನು ಕುಮಾರ್ 27ಕ್ಕೆ 2); ಝಾರ್ಖಂಡ್ 45.1 ಓವರ್ಗಳಲ್ಲಿ 4 ವಿಕೆಟಿಗೆ 165 (ಪ್ರತ್ಯುಷ್ ಸಿಂಗ್ 33, ಇಶಾನ್ ಕಿಶನ್ 35, ಇಶಾಂಕ್ ಜಗ್ಗಿ 41 ಔಟಾಗದೆ, ರವಿಕುಮಾರ್ ಠಾಕುರ್ 25ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.