Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Team Udayavani, Oct 10, 2024, 8:10 AM IST

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

ಮುಲ್ತಾನ್‌: ಪಾಕಿಸ್ಥಾನದ ಬೃಹತ್‌ ಮೊತ್ತಕ್ಕೆ ಪ್ರವಾಸಿ ಇಂಗ್ಲೆಂಡ್‌ ತಂಡ ತಿರುಗೇಟು ನೀಡುವಲ್ಲಿ ಯಶಸ್ವಿ ಯಾಗಿದೆ. ಪಂದ್ಯದ ಮೂರನೇ ದಿನ ಜೋ ರೂಟ್‌ ಮತ್ತು ಹ್ಯಾರಿ ಬ್ರೂಕ್‌ ಅವರ ವೈಭವದ ಶತಕ ಮತ್ತು ಅವರಿಬ್ಬರು ಮುರಿಯದ ನಾಲ್ಕನೇ ವಿಕೆಟಿಗೆ ಪೇರಿಸಿದ ದ್ವಿಶಕದ ಜತೆಯಾಟದಿಂದಾಗಿ ಇಂಗ್ಲೆಂಡ್‌ ತಂಡವು ಪಾಕಿಸ್ಥಾನ ಮೊತ್ತವನ್ನು ಮೀರಿಸುವತ್ತ ಹೊರಟಿದೆ.

ಬಹುತೇಕ ದಿನಪೂರ್ತಿ ಆಡಿದ ರೂಟ್‌ ಮತ್ತು ಬ್ರೂಕ್‌ ಪಾಕಿಸ್ಥಾನ ಬೌಲ ರ್‌ಗಳ ಬೆವರಿಳಿಸಿದರು. ಅವರಿಬ್ಬರ ಸಾಹಸದ ಬ್ಯಾಟಿಂಗಿನಿಂದಾಗಿ ಇಂಗ್ಲೆಂಡ್‌ ಮೂರನೇ ದಿನದಾಟದ ಅಂತ್ಯಕ್ಕೆ ಕೇವಲ ಮೂರು ವಿಕೆಟಿಗೆ 492 ರನ್‌ ಪೇರಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಇಂಗ್ಲೆಂಡಿಗೆ ಇನ್ನು 64 ರನ್‌ ಬೇಕಾಗಿದೆ. ಈ ಮೊದಲು ಪಾಕಿಸ್ಥಾನ ಮೊದಲ ಇನ್ನಿಂಗ್ಸ್‌ನಲ್ಲಿ 556 ರನ್‌ ಗಳಿಸಿತ್ತು.

ಒಂದು ವಿಕೆಟಿಗೆ 96 ರನ್ನಿನಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್‌ ಆರಂಭಿಕ ಜಾಕ್‌ ಕ್ರಾಲಿ ಅವರನ್ನು ಬೇಗನೇ ಕಳೆದುಕೊಂಡಿತು. ಆಬಳಿಕ ರೂಟ್‌ ಅವರನ್ನು ಸೇರಿಕೊಂಡ ಬೆನ್‌ ಡಕೆಟ್‌ ಅವರು ಮೂರನೇ ವಿಕೆಟಿಗೆ 136 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಉತ್ತಮವಾಗಿ ಆಡುತ್ತಿದ್ದ ಡಕೆಟ್‌ ಕೇವಲ 75 ಎಸೆತಗಳಿಂದ 84 ರನ್‌ ಗಳಿಸಿ ಔಟಾದರು.

ರೂಟ್‌, ಬ್ರೂಕ್‌ ಭರ್ಜರಿ ಆಟ
ರೂಟ್‌ ಅವರನ್ನು ಸೇರಿಕೊಂಡ ಹ್ಯಾರಿ ಬ್ರೂಕ್‌ ಏಕದಿನ ಶೈಲಿಯಲ್ಲಿ ಆಟವಾಡಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಪಾಕ್‌ ದಾಳಿಯನ್ನು ನಿರ್ದಾಕ್ಷೀಣ್ಯವಾಗಿ ದಂಡಿಸಿದ ಅವರಿಬ್ಬರು ಈಗಾಗಲೇ ಮುರಿಯದ ನಾಲ್ಕನೇ ವಿಕೆಟಿಗೆ 243 ರನ್‌ ಪೇರಿಸಿದ್ದಾರೆ. ದಿನದಾಟದ ಅಂತ್ಯಕ್ಕೆ ರೂಟ್‌ 176 ಮತ್ತು ಬ್ರೂಕ್‌ 141 ರನ್ನುಗಳಿಂದ ಆಡುತ್ತಿದ್ದಾರೆ. 277 ಎಸೆತ ಎದುರಿಸಿದ ಅವರು 12 ಬೌಂಡರಿ ಬಾರಿಸಿದ್ದರೆ ಬ್ರೂಕ್‌ 173 ಎಸೆತ ಎದುರಿಸಿ 12 ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿದ್ದಾರೆ.

ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ 556; ಇಂಗ್ಲೆಂಡ್‌ 3 ವಿಕೆಟಿಗೆ 492 (ಜಾಕ್‌ ಕ್ರಾಲಿ 78, ರೂಟ್‌ 176 ಬ್ಯಾಟಿಂಗ್‌, ಡಕೆಟ್‌ 84, ಹ್ಯಾರಿ ಬ್ರೂಕ್‌ 141 ಬ್ಯಾಟಿಂಗ್‌).

ಕುಕ್‌ ದಾಖಲೆ ಹಿಂದಿಕ್ಕಿದ ರೂಟ್‌
ಮುಲ್ತಾನ್‌ (ಪಾಕಿಸ್ಥಾನ): ಪಾಕಿಸ್ಥಾನ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೂರನೇ ದಿನ ಇಂಗ್ಲೆಂಡಿನ ಜೊ ರೂಟ್‌ ಅವರು ಅಲಸ್ಟೇರ್‌ ಕುಕ್‌ ಅವರ ದಾಖಲೆಯೊಂದನ್ನು ಹಿಂದಿಕ್ಕಿದ ಸಾಧನೆ ಮಾಡಿದರಲ್ಲದೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಪರ ಗರಿಷ್ಠ ರನ್‌ ಪೇರಿಸಿದ ಸಾಧಕರಾಗಿ ಮೂಡಿ ಬಂದಿದ್ದಾರೆ.

ಪಂದ್ಯದ ಮೂರನೇ ದಿನ 71 ರನ್‌ ಗಳಿಸಿದ ವೇಳೆ ಅವರು ಕುಕ್‌ ಅವರ 12,472 ರನ್‌ ಗಳಿಸಿದ ಸಾಧನೆಯನ್ನು ಹಿಂದಿಕ್ಕಿದ್ದಾರೆ. 33ರ ಹರೆಯದ ರೂಟ್‌ ಅವರೀಗ ಟೆಸ್ಟ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ರನ್‌ ಗಳಿಸಿದ ಸಾಧಕರದಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಸಚಿನ್‌ ತೆಂಡುಲ್ಕರ್‌ (15,921) ಅಗ್ರಸ್ಥಾನದಲ್ಲಿದ್ದರೆ ಆಸ್ಟ್ರೇಲಿ ಯದ ರಿಕಿ ಪಾಂಟಿಂಗ್‌ (13,378), ದಕ್ಷಿಣ ಆಫ್ರಿಕಾದ ಜಾಕಸ್‌ ಕ್ಯಾಲಿಸ್‌ (13,289) ಮತ್ತು ಭಾರತದ ರಾಹುಲ್‌ ದ್ರಾವಿಡ್‌ (13,288) ಅನಂತರದ ಸ್ಥಾನದಲ್ಲಿದ್ದಾರೆ. ಈ ನಾಲ್ವರೂ ಸದ್ಯ ನಿವೃತ್ತಿಯಾಗಿದ್ದರಿಂದ ಇವರೆಲ್ಲರ ಸಾಧನೆಯನ್ನು ಮುರಿಯುವ ಸುವರ್ಣ ಅವಕಾಶ ರೂಟ್‌ ಅವರಿಗಿದೆ. ಮುಲ್ತಾನ್‌ ಟೆಸ್ಟ್‌ನ ಮೂರನೇ ದಿನ ಅವರು 176 ರನ್ನುಗಳಿಂದ ಆಡುತ್ತಿದ್ದಾರೆ. ಈ ಮೂಲಕ ಅವರ ಒಟ್ಟು ರನ್‌ ಮೊತ್ತವು 12,578ಕ್ಕೇರಿದೆ.

ತನ್ನ 147ನೇ ಟೆಸ್ಟ್‌ನಲ್ಲಿ ಆಡುತ್ತಿರುವ ರೂಟ್‌ ಈ ಪಂದ್ಯದಲ್ಲಿ ತನ್ನ ಬಾಳ್ವೆಯ 35ನೇ ಟೆಸ್ಟ್‌ ಶತಕವನ್ನು ಪೂರ್ತಿಗೊಳಿಸಿದ್ದಾರೆ. ಪಾಕಿಸ್ಥಾನದಲ್ಲಿ ಮೊದಲ ಶತಕ ಸಿಡಿಸಿದ ಅವರು ಲಾರ್ಡ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಹೊಡೆಯುವ ಮೂಲಕ ಕುಕ್‌ ಅವರ ದಾಖಲೆ ಟೆಸ್ಟ್‌ ಶಕಕ ಸಾಧನೆಯನ್ನು (33 ಶತಕ) ಮುರಿದಿದ್ದರು.

2021 ಅವರ ಟೆಸ್ಟ್‌ ಬಾಳ್ವೆಯ ಮಹೋನ್ನತ ವರ್ಷವಾಗಿದೆ. ಆ ವರ್ಷ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಅವರು ಒಟ್ಟಾರೆ 1,708 ರನ್‌ ಗಳಿಸಿದ್ದಾರೆ. ಅವರು ಐದು ಬಾರಿ ವರ್ಷವೊಂದರಲ್ಲಿ ಒಂದು ಸಾವಿರ ರನ್‌ ಪೂರ್ತಿಗೊಳಿಸಿದ್ದಾರೆ. ಭಾರತ ವಿರುದ್ಧ ಆಡಿದ 30 ಟೆಸ್ಟ್‌ಗಳಲ್ಲಿ ಅವರು 2,846 ರನ್‌ ಪೇರಿಸಿದ್ದರೆ ಆಸ್ಟ್ರೇಲಿಯ ವಿರುದ್ಧ ಆಡಿದ 34 ಟೆಸ್ಟ್‌ಗಳಲ್ಲಿ 2,428 ರನ್‌ ಹೊಡೆದಿದ್ದರು.

ಟಾಪ್ ನ್ಯೂಸ್

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.