ಪುನೇರಿಯನ್ನು ಮಣಿಸಿದ ಮುಂಬಾ
ಕೊಹ್ಲಿ ಉಪಸ್ಥಿತಿಯಲ್ಲಿ ಭಾರೀ ಹುರುಪು ತೋರಿದ ಆಟಗಾರರು
Team Udayavani, Jul 28, 2019, 5:18 AM IST
ಮುಂಬಯಿ: ಶನಿವಾರ ಮೊದಲ್ಗೊಂಡ ಮುಂಬಯಿ ಚರಣದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ಯು ಮುಂಬಾ 33-23 ಅಂಕಗಳ ಅಂತರದಿಂದ ಪುನೇರಿ ಪಲ್ಟಾನ್ ತಂಡವನ್ನು ಸೋಲಿಸಿತು. ಎರಡೂ ತಂಡಗಳು ಭಾರೀ ಹೋರಾಟವನ್ನೇ ನಡೆಸಿದವು. ಆದರೆ ಆತಿಥೇಯ ತಂಡವಾದ್ದರಿಂದ ಹೆಚ್ಚಿನ ಹುರುಪಿನಲ್ಲಿ ಆಡಿದ ಯು ಮುಂಬಾ ಜಯದ ನಗೆ ಬೀರಿತು.
ಯು ಮುಂಬಾ ಸಂಘಟಿತ ಹೋರಾಟದ ಮೂಲಕ ಗೆಲುವಿನ ದಡ ತಲುಪಿತು. ದಾಳಿಯಲ್ಲಿ ಗರಿಷ್ಠ ಅಂಕ ಗಳಿಸಿದ್ದು ಅಭಿಷೇಕ್ ಸಿಂಗ್. ವಿಶೇಷವೆಂದರೆ ಅವರು ಗಳಿಸಿದ್ದು ಬರೀ 5 ಅಂಕ. ಅದಕ್ಕಾಗಿ 15 ಬಾರಿ ಎದುರಾಳಿ ತಂಡದ ಕೋಟೆಗೆ ನುಗ್ಗಿ ಹೋದರು! ಮುಂಬಾ ಪರ ರಕ್ಷಣೆಯಲ್ಲಿ ಮಿಂಚಿದ್ದು ಸುರೀಂದರ್ ಸಿಂಗ್. ಅವರು 6 ಬಾರಿ ಎದುರಾಳಿಯನ್ನು ಕೆಡವಿಕೊಳ್ಳಲು ಯತ್ನಿಸಿ 4 ಅಂಕ ಪಡೆಯಲು ಸಫಲರಾದರು.
ಬೆಂಗಾಲ್ ವಿರುದ್ಧ
ಜೈಪುರಕ್ಕೆ ಜಯ
ಶನಿವಾರದ 2ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ನಡುವೆ ರೋಚಕ ಹೋರಾಟ ನಡೆಯಿತು. ಜೈಪುರ 27-25 ಅಂಕಗಳ ಅಂತರದಿಂದ ಜೈಸಿತು. ಗೆಲುವಿನ ಅಂತರ ಕೇವಲ 2 ಅಂಕ ಎನ್ನುವುದು ನಿಕಟ ಹೋರಾಟಕ್ಕೆ ಸಾಕ್ಷಿ. ಜೈಪುರ್ ಪರ ಸಂದೀಪ್ ಧುಲ್ ಮತ್ತು ದೀಪಕ್ ಹೂಡ ಮಿಂಚಿದರು.
ಗಮನ ಸೆಳೆದ ವಿರಾಟ್ ಕೊಹ್ಲಿ
ಪ್ರೊ ಕಬಡ್ಡಿ ಲೀಗ್‌ನ ಪ್ರತೀ ಚರಣದ ಆರಂಭದ ದಿನ ವಿಶೇಷ ಅತಿಥಿಯೊಬ್ಬರನ್ನು ಕರೆಯುವುದು ಸಂಪ್ರದಾಯ. ಅದರಂತೆ ಶನಿವಾರ ಮುಂಬಯಿ ಚರಣದ ಮೊದಲ ದಿನ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಟವನ್ನು ಉದ್ಘಾಟಿಸಿದರು. ಅಭಿಮಾನಿಗಳ ಆಕರ್ಷಣೆಯ ಕೇಂದ್ರ ಬಿಂದು ಅವರೇ ಆಗಿದ್ದರು. ಸ್ಟೇಡಿಯಂನಲ್ಲಿ ಕುಳಿತು ಕಬಡ್ಡಿ ರೋಮಾಂಚನವನ್ನು ಸವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.