ಉತ್ತಮ ಸ್ಥಿತಿಯಲ್ಲಿ ಮುಂಬಯಿ
Team Udayavani, Nov 28, 2017, 6:45 AM IST
ಮುಂಬಯಿ: ತ್ರಿಪುರ ತಂಡದೆದುರಿನ ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಅಂತಿಮ ಲೀಗ್ ಪಂದ್ಯದಲ್ಲಿ ಮುಂಬಯಿ ಉತ್ತಮ ಸ್ಥಿತಿಯಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮುಂಬಯಿ ನಾಕೌಟ್ ಹಂತಕ್ಕೇರುವ ಸಾಧ್ಯತೆಯಿದೆ.
ತ್ರಿಪುರ ತಂಡದ 195 ರನ್ನಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮುಂಬಯಿ ಜಯ್ ಬಿಸ್ತ ಮತ್ತು ಸಿದ್ಧೇಶ್ ಲಾಡ್ ಅವರ ಶತಕದಿಂದಾಗಿ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 421 ರನ್ ಪೇರಿಸಿದೆ. ಇನ್ನೆರಡು ವಿಕೆಟ್ ಉಳಿಸಿಕೊಂಡಿರುವ ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ ಈಗಾಗಲೇ 226 ರನ್ ಮುನ್ನಡೆ ಸಾಧಿಸಿದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಮುಂಬಯಿ ಭಾರೀ ಅಂತರದಿಂದ ಗೆಲ್ಲುವ ಸಾಧ್ಯತೆಯಿದೆ.
3 ವಿಕೆಟಿಗೆ 77 ರನ್ನುಗಳಿಂದ ದಿನದಾಟ ಆರಂಭಿಸಿದ ಮುಂಬಯಿಗೆ ಬಿಸ್ತ ಮತ್ತು ಲಾಡ್ ಆಸರೆಯಾದರು. 41 ರನ್ನಿನಿಂದ ದಿನದಾಟ ಮುಂದುವರಿಸಿದ ಬಿಸ್ತ 123 ರನ್ ಗಳಿಸಿ ಆಧರಿಸಿದರು. 130 ಎಸೆತ ಎದುರಿಸಿದ ಅವರು 17 ಬೌಂಡರಿ ಬಾರಿಸಿದ್ದರು. ಅವರು ಸಿದ್ಧೇಶ್ ಲಾಡ್ ಜತೆ ಐದನೇ ವಿಕೆಟಿಗೆ 146 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಲಾಡ್ ಕೂಡ 123 ರನ್ ಬಾರಿಸಿ ಮುಂಬಯಿಯ ಮುನ್ನಡೆಗೆ ತನ್ನ ಕೊಡುಗೆ ಸಲ್ಲಿಸಿದರು.
ಆದಿತ್ಯ ತಾರೆ 144 ಎಸೆತಗಳಿಂದ 67 ರನ್ ಹೊಡೆದರೆ ಧವಳ್ ಕುಲಕರ್ಣಿ 60 ಎಸೆತಗಳಿಂದ 50 ರನ್ ಗಳಿಸಿ ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರು: ತ್ರಿಪುರ 195; ಮುಂಬಯಿ 8 ವಿಕೆಟಿಗೆ 421 (ಜಯ್ ಬಿಸ್ತ 123, ಸೂರ್ಯಕುಮಾರ್ ಯಾದವ್ 30, ಸಿದ್ಧೇಶ್ ಲಾಡ್ 123, ಆದಿತ್ಯ ತಾರೆ 67, ಧವಳ್ ಕುಲಕರ್ಣಿ 50 ಬ್ಯಾಟಿಂಗ್, ಮಣಿಶಂಕರ್ ಮುರಸಿಂಗ್ 71ಕ್ಕೆ 5).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.