ಕೊಡಗಿನ ಹಾಕಿ ಆಟಗಾರನ ಬರ್ಬರವಾಗಿ ಇರಿದು ಕೊಂದ ಪತ್ನಿ
Team Udayavani, Aug 20, 2017, 4:02 PM IST
ಮುಂಬಯಿ : ಇಲ್ಲಿ ಕೊಡಗು ಮೂಲದ ಮಾಜಿ ಹಾಕಿ ಆಟಗಾರ ಅಪೈಯ್ಯ ಚೆನಂದ ಅವರನ್ನು ಪತ್ನಿಯೇ ಬರ್ಬರವಾಗಿ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮಾಲಾಡದ ಕಚ್‌ಪಡ ಪ್ರದೇಶದಲ್ಲಿರುವ ಫ್ಲ್ಯಾಟ್‌ನ 27 ನೇ ಮಹಡಿಯಲ್ಲಿ ಘಟನೆ ನಡೆದಿದ್ದು , ಕೌಟುಂಬಿಕ ಕಲಹದಿಂದ 52 ರ ಹರೆಯದ ಅಪೈಯ ಅವರನ್ನು ಪತ್ನಿ ಅಮಿತಾ (45) ಬರ್ಬರವಾಗಿ ಇರಿದು ಕೊಲೆಗೈದಿದ್ದಾಳೆ.ಬಳಿಕ ತಾನೂ ಇರಿದು ಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಘಟನೆ ವೇಳೆ ದಂಪತಿಗಳ ಇಬ್ಬರು ಮಕ್ಕಳು ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ. ಅಪೈಯ್ಯ ಸಹಾಯಕ್ಕಾಗಿ ಕೂಗಿಕೊಂಡಿದ್ದು ,ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಆಗಮಿಸಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅಪೈಯ್ಯ ಸಾವನ್ನಪ್ಪಿದ್ದರು.
ದಂಪತಿಗಳು ಮದ್ಯಪಾನ ಮಾಡುವ ವೇಳೆ ಯಾವುದೋ ವಿಚಾರಕ್ಕೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
ಮಲಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪುತ್ರ ಮತ್ತು ಪುತ್ರಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಮಿತ ಆರೋಗ್ಯ ಸುಧಾರಿಸಿದ ಬಳಿಕ ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.
ಅಮಿತಾ ಅಪೈಯ್ಯಗೆ 2 ನೇ ಪತ್ನಿ ಎಂದು ತಿಳಿದು ಬಂದಿದೆ.ಅಪೈಯ್ಯ ಏರ್ ಇಂಡಿಯಾ, ಟಾಟಾ ಮತ್ತು ಮುಂಬಯಿ ಹಾಕಿ ತಂಡಗಳಲ್ಲಿ ಹಲವು ವರ್ಷಗಳ ಕಾಲ ಆಟವಾಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.