500ನೇ ರಣಜಿ ಪಂದ್ಯ ಆಡಲಿರುವ ಮುಂಬಯಿ
Team Udayavani, Nov 9, 2017, 7:40 AM IST
ಮುಂಬಯಿ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾಗುವ ಬರೋಡ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಕೂಟದ “ಸಿ’ ಬಣದ ಪಂದ್ಯವು ನಮ್ಮ ಪಾಲಿಗೆ “ವಿಶೇಷ’ ಎಂದು ಮುಂಬಯಿ ತಂಡದ ನಾಯಕ ಆದಿತ್ಯ ತಾರೆ ಹೇಳಿದ್ದಾರೆ.
ಈ ಪಂದ್ಯ ರಣಜಿ ಟ್ರೋಫಿಯ ಸುದೀರ್ಘ ಇತಿಹಾಸದಲ್ಲಿ 41 ಬಾರಿಯ ಚಾಂಪಿಯನ್ ಆಗಿರುವ ಮುಂಬಯಿ ಆಡಲಿರುವ 500ನೇ ರಣಜಿ ಪಂದ್ಯವಾಗಲಿದೆ.
ಇದೊಂದು ನಮ್ಮ ಪಾಲಿಗೆ ವಿಶೇಷ ಪಂದ್ಯವಾಗಿದೆ. ಬಲಿಷ್ಠ ತಂಡವೊಂದು 500ನೇ ರಣಜಿ ಟ್ರೋಫಿ ಪಂದ್ಯ ಆಡುತ್ತಿರುವುದು ತುಂಬ ಖುಷಿ ನೀಡುತ್ತಿದೆ. ಇದೊಂದು ನಮ್ಮ ಪಾಲಿಗೆ ಬಲುದೊಡ್ಡ ಸ್ಮರಣೀಯ ಪಂದ್ಯವಾಗಲಿದೆ ಎಂದು ತಾರೆ ಹೇಳಿದ್ದಾರೆ. ಅಜಿಂಕ್ಯ ರಹಾನೆ ಮತ್ತು ಶ್ರೇಯ್ ಅಯ್ಯರ್ ಮರಳಿರುವ ಕಾರಣ ಮುಂಬಯಿ ಪರಿಪೂರ್ಣ ಶಕ್ತಿಯೊಂದಿಗೆ ಬರೋಡ ವಿರುದ್ಧ ಹೋರಾಡಲಿದೆ. ಹೀಗಾಗಿ ತಾರೆ ಬಹಳಷ್ಟು ಈ ಪಂದ್ಯ ಆಡಲು ಉತ್ಸುಕರಾಗಿದ್ದಾರೆ.
ರಣಜಿ ಟ್ರೋಫಿಯ ಆರಂಭದಿಂದ ಇಲ್ಲಿಯತನಕ ಮುಂಬಯಿ ತಂಡಕ್ಕೆ ಬಹಳಷ್ಟು ಮಂದಿ ಕೊಡುಗೆ ಸಲ್ಲಿಸಿದ್ದಾರೆ. ಅದೃಷ್ಟವಶಾತ್ ನಮ್ಮ ಪಾಲಿಗೆ 500ನೇ ಪಂದ್ಯವನ್ನಾಡುವ ಅವಕಾಶ ಸಿಕ್ಕಿದೆ. ಮುಂಬಯಿ ತಂಡವನ್ನು ಪ್ರತಿನಿಧಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ತಾರೆ ಹೇಳಿದರು.
ಮುಂಬಯಿ ಕಳೆದ ಋತುವಿನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು. ಫೈನಲ್‌ನಲ್ಲಿ ಮುಂಬಯಿ ತಂಡವನ್ನು ಕೆಡಹಿದ ಗುಜರಾತ್ ಚೊಚ್ಚಲ ಬಾರಿ ಪ್ರಶಸ್ತಿ ಜಯಿಸಿತ್ತು. ಈ ಬಾರಿ ಮುಂಬಯಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬರೋಡ 4 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಮೂರು ಪಂದ್ಯಗಳನ್ನಾಡಿವೆ.
ಇದೊಂದು ತೀವ್ರ ಪೈಪೋಟಿಯ ಪಂದ್ಯವಾಗಿರಬಹುದು. ಆದರೆ ನಾವು ಪ್ರತಿಯೊಂದು ಪಂದ್ಯವನ್ನು ಹೊಸ ಪಂದ್ಯವೆಂದು ಭಾವಿಸುತ್ತೇವೆ. ಇದು ನಮಗೆ ಮುಖ್ಯ ಕೂಡ ಮತ್ತು ಗೆಲುವೊಂದು ನಮ್ಮ ಗುರಿ. ಸಕಾರಾತ್ಮಕವಾಗಿ ಆಡಿ ಗರಿಷ್ಠ ಅಂಕ ಗೆಲ್ಲಲು ಪ್ರಯತ್ನಿಸಲಿದ್ದೇವೆ ಎಂದು ತಾರೆ ಹೇಳಿದರು.ದೀರ್ಘ ಸಮಯದ ಬಳಿಕ ನಾವು ವಾಂಖೇಡೆಯಲ್ಲಿ ಆಡುತ್ತಿದ್ದೇವೆ. ತವರಿನ ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸುವುದು ತಂಡವೂ ಬಲಿಷ್ಠವೂ ಆಗಿರುವುದು ಖುಷಿಯ ವಿಷಯ ಎಂದವರು ವಿವರಿಸಿದರು.
ಪ್ರತಿಯೊಂದು ಪಂದ್ಯ ನಮ್ಮ ಪಾಲಿಗೆ ಮುಖ್ಯವಾಗಿದೆ. ಯಾಕೆಂದರೆ ಅಂಕಪಟ್ಟಿಯಲ್ಲಿ ನಮಗಿಂತ ಎರಡು ತಂಡಗಳು ಮುನ್ನಡೆಯಲ್ಲಿವೆ. ಅಗ್ರಸ್ಥಾನಕ್ಕೇರುವುದು ನಮ್ಮ ಗುರಿಯಾಗಿದೆ ಎಂದ ಅವರು ನಾವು ಈಗಾಗಲೇ ಐದು ಶತಕ ಬಾರಿಸಿದ್ದೇವೆ. ಬ್ಯಾಟಿಂಗ್ ಶಕ್ತಿ ಬಲಿಷ್ಠವಾಗಿದೆ ಮತ್ತು ನಾವು ಉತ್ತಮ ಫಾರ್ಮ್ನಲ್ಲಿದ್ದೇವೆ ಎಂದರು.
ಬರೋಡ ತಂಡವನ್ನು ದೀಪಕ್ ಹೂಡ ಮುನ್ನಡೆಸಲಿದ್ದಾರೆ. ತಂಡ ಪಾಂಡ್ಯ ಸಹೋದರ ಸಹಿತ ಪಠಾಣ್ ಸಹೋದರರ ಸೇವೆಯಿಂದ ವಂಚಿತವಾಗಿದೆ. ಇರ್ಫಾನ್ ಪಠಾಣ್ ಕಳೆದ ವರ್ಷ ಬರೋಡ ತಂಡದ ನಾಯಕತ್ವ ವಹಿಸಿದ್ದರು. ಆದರೆ ಪಠಾಣ್ ಸಹೋದರರ ಅನುಪಸ್ಥಿತಿ ಬಗ್ಗೆ ಹೂಡ ಅಥವಾ ಮುಖ್ಯ ಕೋಚ್ ಅತುಲ್ ಬೆಡಾಡೆ ಅವರು ಕಾರಣಗಳನ್ನು ತಿಳಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.