ಮಲೇಷ್ಯನ್ ಚೆಸ್: ಮುಂಬಯಿ 6 ವರ್ಷದ ಬಾಲಕಿಗೆ ಬಂಗಾರ
Team Udayavani, Sep 4, 2022, 11:46 PM IST
ಮುಂಬಯಿ: ಮುಂಬಯಿಯ 6 ವರ್ಷದ ಬಾಲಕಿ ಅನಿಷ್ಕಾ ಬಿಯಾನಿ ಕೌಲಾಲಂಪುರದಲ್ಲಿ ನಡೆದ “ಮಲೇಷ್ಯನ್ ಏಜ್ ಗ್ರೂಪ್ ಚೆಸ್ ಚಾಂಪಿಯನ್‌ಶಿಪ್’ನಲ್ಲಿ ಬಂಗಾರದ ಪದಕ ಜಯಿಸಿದ್ದಾಳೆ.
ಧೀರೂಬಾೖ ಅಂಬಾನಿ ಸ್ಕೂಲ್‌ನ ಫಸ್ಟ್ ಗ್ರೇಡ್ ವಿದ್ಯಾರ್ಥಿನಿ ಯಾಗಿರುವ ಅನಿಷ್ಕಾಳಿಂದ “ಅಂಡರ್-6′ ವಿಭಾಗದ ಸ್ಪರ್ಧೆಯಲ್ಲಿ ಈ ಸಾಧನೆ ದಾಖಲಾಯಿತು. ಒಟ್ಟು 8 ದೇಶದ ಸ್ಪರ್ಧಿಗಳು ಈ ಕೂಟದಲ್ಲಿ ಪಾಲ್ಗೊಂಡಿದ್ದರು.
ಅನಿಷ್ಕಾ ಇನ್ನು “ಸಿಂಗಾಪುರ್ ಓಪನ್ ನ್ಯಾಶನಲ್ ಏಜ್ ಗ್ರೂಪ್ ಚಾಂಪಿಯನ್‌ಶಿಪ್’ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಬೇಕಿದೆ. ಈ ಟೂರ್ನಿ ವರ್ಷಾಂತ್ಯ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.