Ipl: ಮತ್ತೆ ಮುಂಬೈ ತಂಡ ಸೇರಿಕೊಂಡ ಪರಸ್ ಮ್ಹಾಂಬ್ರೆ
Team Udayavani, Oct 16, 2024, 10:00 PM IST
ಮುಂಬಯಿ: ಭಾರತ ತಂಡದ ಮಾಜಿ ಬೌಲಿಂಗ್ ಕೋಚ್ ಪರಸ್ ಮ್ಹಾಂಬ್ರೆ ಮರಳಿ ಮುಂಬೈ ಇಂಡಿಯನ್ಸ್ ಪಾಳೆಯವನ್ನು ಸೇರಿಕೊಂಡಿದ್ದಾರೆ. ಇಲ್ಲಿಯೂ ಅವರು ಕೋಚಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿದ್ದು, ಬೌಲಿಂಗ್ ಕೋಚ್ ಲಸಿತ ಮಾಲಿಂಗ ಮತ್ತು ಪ್ರಧಾನ ಕೋಚ್ ಮಾಹೇಲ ಜಯವರ್ಧನೆ ಅವರೊಂದಿಗೆ ಕರ್ತವ್ಯ ನಿಭಾಯಿಸಲಿದ್ದಾರೆ.
ಭಾರತದ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಪರಸ್ ಮ್ಹಾಂಬ್ರೆ ಅವರ ಬೌಲಿಂಗ್ ಕೋಚಿಂಗ್ ಅವಧಿ ಮುಗಿದಿತ್ತು. ಹೀಗಾಗಿ ಅವರ ಹಾದಿ ಸುಗಮ ಗೊಂಡಿತು. ಮುಂಬೈ ಇಂಡಿಯನ್ಸ್ ತಂಡದ 2013ರ ಐಪಿಎಲ್ ಗೆಲುವಿನ ವೇಳೆ, ಹಾಗೂ 2010, 2011 ಮತ್ತು 2013ರ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯ ವೇಳೆ ಪರಸ್ ಮ್ಹಾಂಬ್ರೆ ಕೋಚಿಂಗ್ ಹುದ್ದೆಯಲ್ಲಿದ್ದರು.
ಸೋಮವಾರವಷ್ಟೇ ಮುಂಬೈ ಇಂಡಿಯನ್ಸ್ ಮಾಹೇಲ ಜಯವರ್ಧನೆ ಅವರನ್ನು ಮರಳಿ ಕರೆಸಿಕೊಂಡು, ಪ್ರಧಾನ ಕೋಚ್ ಹುದ್ದೆಯನ್ನು ನೀಡಿತ್ತು. 2017-2022ರ ಅವಧಿಯಲ್ಲಿ ಮುಂಬೈ 3 ಸಲ ಐಪಿಎಲ್ ಚಾಂಪಿಯನ್ ಆದಾಗ ಜಯವರ್ಧನೆ ಅವರೇ ತರಬೇತುದಾರರಾಗಿದ್ದರು.
ಇದನ್ನೂ ಓದಿ: Baba Siddique Case: ಯೂಟ್ಯೂಬ್ ನೋಡಿ ಗನ್ ಬಳಕೆ ಕಲಿತಿದ್ದ ಹಂತಕರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆ ಬದಲಾಗಲ್ಲ: ಕುಲಪತಿ ಡಾ.ಧರ್ಮ
Udupi: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Udupi: ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ: ಕಾರ್ಯಾಲಯ ಉದ್ಘಾಟನೆ
Mangaluru: ಕೇಂದ್ರದ ತೆರಿಗೆ ವಿಷಯದಲ್ಲಿ ಬಿಜೆಪಿ ಮೌನ: ಯು.ಟಿ. ಫರ್ಝಾನ
Udupi: “ಸಾಗರ್ ಕವಚ್’ ಅಣಕು ಕಾರ್ಯಾಚರಣೆ; 21 ಮಂದಿ ಬಂಧನ, 2 ಬೋಟ್, ವಾಹನಗಳು ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.