ಮಾಹೇಲ, ಸಚಿನ್ ಸಲಹೆ
Team Udayavani, Apr 13, 2017, 10:56 PM IST
ಮುಂಬಯಿ: ಕೋಚ್ ಮಾಹೇಲ ಜಯವರ್ಧನ ಮತ್ತು ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಅವರಂತಹ ಸ್ಟಾರ್ ಆಟಗಾರರ ಸಲಹೆಗಳಿಂದ ತನ್ನ ಫಾರ್ಮ್ ಮರಳಿ ಪಡೆಯಲು ನೆರವಾಯಿತು ಎಂದು ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ಬ್ಯಾಟ್ಸ್‌ಮನ್ ನಿತೀಶ್ ರಾಣ ಹೇಳಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಪರ ಆಡಿದ ಮೂರು ಪಂದ್ಯಗಳಲ್ಲಿ ರಾಣ ಅಮೋಘ ಆಟದ ಪ್ರದರ್ಶನ ನೀಡಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಮೂರು ಪಂದ್ಯಗಳಲ್ಲಿ ಅನುಕ್ರಮವಾಗಿ 34, 50 ಮತ್ತು 45 ರನ್ ಹೊಡೆದಿದ್ದರು.
ಇಲ್ಲಿಗೆ ಬಂದ ಬಳಿಕ ನಾನು ಹಲವು ಹಿರಿಯ ಆಟಗಾರರಾದ ಜಯವರ್ಧನ, ಸಚಿನ್ ಸರ್ ಮತ್ತು ರೋಹಿತ್ ಶರ್ಮ ಜತೆ ಚರ್ಚೆ ನಡೆಸಿದ್ದೇನೆ. ಇವೆರಲ್ಲರ ಸಂಪರ್ಕ, ಸಲಹೆಯಿಂದ ಆಟದ ವಾತಾವರಣವೇ ಬದಲಾಯಿತು. ನಾನು ಗೌತಮ್ ಗಂಭೀರ್ ಜತೆಯೂ ಮಾತನಾಡಿದ್ದೇನೆ. ರಣಜಿ ಕ್ರಿಕೆಟ್ ಕೂಟದ ವೇಳೆ ನಡೆದ ಸಂಗತಿಗಳನ್ನು ಅವರೊಂದಿಗೆ ಚರ್ಚಿಸಿದ್ದೇನೆ ಮತ್ತು ಅವರ ಅನುಭವದ ಮಾತು ಕೂಡ ನನಗೆ ನೆರವಾಗಿದೆ ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಣ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.