ಮುನಾಫ್ ಪಟೇಲ್ ಕ್ರಿಕೆಟ್ ವಿದಾಯ
Team Udayavani, Nov 11, 2018, 6:10 AM IST
ಹೊಸದಿಲ್ಲಿ: ಭಾರತದ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ, ಈಗ ತಂಡದಿಂದ ಬೇರ್ಪಟ್ಟಿರುವ ಮಧ್ಯಮ ವೇಗಿ ಮುನಾಫ್ ಪಟೇಲ್ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
“ನಿವೃತ್ತಿಗೆ ವಿಶೇಷ ಕಾರಣವಿಲ್ಲ. ವಯಸ್ಸಾಗುತ್ತಿದೆ.ಫಿಟ್ ನೆಸ್ ಕಾಪಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯುವ ಆಟಗಾ ರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಇನ್ನೂ ಇಲ್ಲೇ ಉಳಿಯುವುದು ಸರಿಯಲ್ಲ. 2011ರ ವಿಶ್ವ ಕಪ್ ವಿಜೇತ ತಂಡದಲ್ಲಿ ನಾನಿದ್ದೆ ಎಂಬ ಖುಷಿ ಇದೆ’ ಎಂದು ಮುನಾಫ್ ಪಟೇಲ್ ಹೇಳಿದರು. 2011ರ ಬಳಿಕ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ.
“ನಿವೃತ್ತಿ ವಿಚಾರದಲ್ಲಿ ಯಾವುದೇ ವಿಷಾದವಿಲ್ಲ. ಧೋನಿಯನ್ನು ಹೊರತುಪಡಿಸಿ ನಾನು ಯಾರೊಂದಿಗೆಲ್ಲ ಆಡಿದ್ದೆನೋ ಅವರೆಲ್ಲ ಈಗಾಗಲೇ ನಿವೃತ್ತಿ ಪಡೆದಿದ್ದಾರೆ.ಒಂದು ವೇಳೆ ಉಳಿದ ಆಟಗಾರರು ಇನ್ನೂ ಆಡುತ್ತಿದ್ದು, ನಾನು ಮಾತ್ರ ವಿದಾಯ ತಿಳಿಸುತ್ತಿದ್ದರೆ ಬೇಸರವಾಗುತ್ತಿತ್ತು’ ಎಂದು ಮುನಾಫ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮುಂದೆ ಕೋಚಿಂಗ್‌ನಲ್ಲಿ ನಿರತರಾಗುವ ಯೋಜನೆ ಅವರದು.
ಮುನಾಫ್ 13 ಟೆಸ್ಟ್, 70 ಏಕದಿನ ಹಾಗೂ 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಟ್ಟು 125 ವಿಕೆ ಟ್‌ಗಳನ್ನು ಪಡೆದಿದ್ದಾರೆ. ವೃತ್ತಿ ಜೀವನದಲ್ಲಿ ಅವರು ಗಾಯಾ ಳಾಗಿ ಹೊರಗುಳಿದ್ದೇ ಹೆಚ್ಚು. ದೇಶಿ ಕ್ರಿಕೆಟ್ನಲ್ಲಿ ಬರೋಡಾ ಹಾಗೂ ಗುಜರಾತ್ ತಂಡವನ್ನು ಪ್ರತಿನಿಧಿಸಿರುವ ಮುನಾಫ್ 69 ಪಂದ್ಯಗಳಲ್ಲಿ 231 ವಿಕೆಟ್ ಸಂಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.