Mental issue; ಧೋನಿ ಟೀಕಿಸಿದ್ದ ಯುವಿ ತಂದೆಗೆ ಮಾನಸಿಕ ಸಮಸ್ಯೆ?
ಯುವಿಯೇ ಹೇಳಿಕೊಂಡಿದ್ದರು... ವಿಡಿಯೋ ನೋಡಿ
Team Udayavani, Sep 4, 2024, 10:54 AM IST
ಹೊಸದಿಲ್ಲಿ: ಭಾರತ ಕ್ರಿಕೆಟ್ ಲೋಕದ ದಿಗ್ಗಜ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರ ಕುರಿತು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರ ತಂದೆ ಯೋಗರಾಜ್ ಸಿಂಗ್ (Yograj Singh) ಅವರು ಕಟುವಾಗಿ ಟೀಕಿಸಿದ್ದ ಬೆನ್ನಲ್ಲೇ ಹಳೆಯ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಯೋಗರಾಜ್ ಸಿಂಗ್ ಅವರಿಗೆ ಮಾನಸಿಕ ಸಮಸ್ಯೆ ಇದೆ ಎನ್ನುವುದಾಗಿ ಹೇಳಲಾಗಿದೆ.
ಸಾಮಾಜಿಕ ಮಾಧ್ಯಮದ ಪ್ರಭಾವಿ ರಣವೀರ್ ಅಲ್ಲಾಬಾಡಿಯಾ ನಡೆಸುತ್ತಿರುವ ಪಾಡ್‌ಕ್ಯಾಸ್ಟ್ ನ ಕ್ಲಿಪ್‌ನಲ್ಲಿ, ಯುವರಾಜ್ ಸಿಂಗ್ ಅವರು ನನ್ನ ತಂದೆಗೆ ಮಾನಸಿಕ ಸಮಸ್ಯೆ ಇದೆ ಎಂದು ಒಪ್ಪಿಕೊಂಡಿರುವುದನ್ನು ನೋಡಬಹುದಾಗಿದೆ.
Yuvraj Singh – “My father has mental issues”. 👀#MSDhoni #YuvrajSinghpic.twitter.com/tgxiXHKAhy https://t.co/f6GnO65Id2
— Sports with naveen (@sportswnaveen) September 2, 2024
”ನನ್ನ ತಂದೆ ತನ್ನ ಜೀವನದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಒಪ್ಪಿಕೊಂಡರು,ಆದರೆ ಅವರು ಕೆಲವು ವಿಷಯಗಳನ್ನು ಒಪ್ಪಿಕೊಳ್ಳುವುದಿಲ್ಲ.ಅವರು ಪರಿಹರಿಸಿಕೊಳ್ಳಬೇಕಾದ ಕೆಲವು ವಿಷಯಗಳಿವೆ ಎಂದು ನಾನು ಭಾವಿಸುತ್ತೇನೆ, ಆದರೆ ಅವರು ಅದನ್ನು ಸ್ವೀಕರಿಸುವುದಿಲ್ಲ” ಎಂದು ಯುವರಾಜ್ ಹೇಳಿದ್ದಾರೆ.
“ನಾನೆಂದೂ ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಲಿ. ಆತ ದೊಡ್ಡ ಕ್ರಿಕೆಟಿಗ, ಆದರೆ ಆತ ನನ್ನ ಮಗನ ವಿರುದ್ದ ಏನು ಮಾಡಿದ್ದಾನೆ ಎನ್ನುವುದೆಲ್ಲ ಈಗ ಹೊರಬರುತ್ತಿದೆ. ಅದು ಜೀವನದಲ್ಲಿ ಎಂದೂ ಮರೆಯಲಾಗದ್ದು. ನಾನು ಎರಡು ವಿಷಯಗಳನ್ನು ಜೀವನದಲ್ಲಿ ಎಂದೂ ಮಾಡಿಲ್ಲ. ಮೊದಲನೆಯದಾಗಿ, ನನಗೆ ಕೆಟ್ಟದು ಮಾಡಿದ ಯಾರನ್ನೂ ಎಂದೂ ಕ್ಷಮಿಸಿಲ್ಲ. ಎರಡನೆಯದಾಗಿ, ನಾನೆಂದೂ ಅವರನ್ನೂ ತಬ್ಬಿಕೊಂಡಿಲ್ಲ, ಅದು ನನ್ನ ಕುಟುಂಬಿಕರೇ ಆಗಲಿ, ಅಥವಾ ಮಕ್ಕಳೇ ಆಗಿರಲಿ” ಎಂದು ಯೋಗರಾಜ್ ಸಿಂಗ್ ಕಿಡಿ ಯಾಗಿದ್ದರು. ಈ ಹಿಂದೆಯೂ ಧೋನಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.