ಈ ಮಕ್ಕಳಿಗೆ ಹೋಲಿಸಿದರೆ ನನ್ನ ದುಃಖ ಏನೂ ಅಲ್ಲ: ಗಂಭೀರ್
Team Udayavani, Apr 29, 2018, 6:30 AM IST
ಹೊಸದಿಲ್ಲಿ: ಟ್ವೀಟರ್‌ನಲ್ಲಿ ಭಾವುಕ ಟ್ವೀಟೊಂದನ್ನು ಮಾಡಿರುವ ಗೌತಮ್ ಗಂಭೀರ್ ಅದರಲ್ಲಿ ಪರೋಕ್ಷವಾಗಿ ತನ್ನ ನೋವಿನ ಆಳವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಗಂಭೀರ್ ಸಿಆರ್‌ಪಿಎಫ್ ಯೋಧರ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದರು. ನಕ್ಸಲರ ದಾಳಿಯಲ್ಲಿ ಮೃತರಾದ ಯೋಧರ ಆ ಮಕ್ಕಳನ್ನು ನೋಡಿದಾಗ ನನ್ನ ದುಃಖ ಅದಕ್ಕಿಂತ ಬಹಳ ಕಡಿಮೆ ಎನಿಸಿತು ಎಂದು ಗಂಭೀರ್ ಹೇಳಿಕೊಂಡಿದ್ದಾರೆ. ಇದು ಟ್ವೀಟರ್‌ನಲ್ಲಿ ಬಹಳ ಸದ್ದು ಮಾಡುತ್ತಿದೆ.
ಹಿಂದಿನ 6 ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತಾ ತಂಡವನ್ನು ಮುನ್ನಡೆಸಿದ್ದ ಗಂಭೀರ್ ಅದರಲ್ಲಿ 2 ಬಾರಿ ತಂಡ ಟ್ರೋಫಿ ಎತ್ತಿ ಹಿಡಿಯಲು ಕಾರಣವಾಗಿದ್ದರು. ಆದರೆ ಈ ಬಾರಿ ಡೆಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಅವರು ನಾಯಕತ್ವವನ್ನು ವಹಿಸಿದ್ದರು. ಅವರ ನೇತೃತ್ವದಲ್ಲಿ 6 ಪಂದ್ಯವಾಡಿ 5ರಲ್ಲಿ ಡೆಲ್ಲಿ ಸೋತು ಹೋಗಿತ್ತು. ಪರಿಣಾಮ ಅವರು ನಾಯಕತ್ವ ಬಿಡುವುದರ ಜತೆಗೆ, ತಂಡದಿಂದಲೂ ಹೊರಗುಳಿದರು.
ಸ್ವತಃ ಗಂಭೀರ್ ಕೂಡ ಫಾರ್ಮ್ ಕುಸಿತ ಅನುಭವಿಸಿ ಬಹಳ ನೋವಿನಲ್ಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಗಂಭೀರ್, ಆ ಮಕ್ಕಳ ಕಣ್ಣಿನಲ್ಲಿ ನೀರಿತ್ತು, ಅವರ ಹೃದಯದಲ್ಲಿ ದುಃಖ ತುಂಬಿಕೊಂಡಿತ್ತು. ಅವರೊಂದಿಗೆ ಮಾತನಾಡಿದಾಗ ನನ್ನ ದುಃಖ ಅದಕ್ಕಿಂತ ಬಹಳ ಕಡಿಮೆ ಎನಿಸಿತು ಎಂದು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.