ಬಿಸಿಸಿಐ ಮೊಂಡು ಹಠವಿಶ್ವ ಆ್ಯತ್ಲೆಟಿಕ್ಸ್‌ನಿಂದ ಭಾರತ ಅಮಾನ್ಯ?
Team Udayavani, Oct 29, 2017, 6:35 AM IST
ಹೊಸದಿಲ್ಲಿ: ನಾಡಾದಿಂದ (ರಾಷ್ಟ್ರೀಯ ಉದ್ದೀಪನ ನಿಗ್ರಹ ದಳ) ನಡೆಸಲ್ಪಡುವ ಉದ್ದೀಪನ ಪರೀಕ್ಷೆಗೆ ಒಳಪಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೊಂಡು ಹಠ ಪ್ರದರ್ಶಿಸುತ್ತಿರುವುದರಿಂದ ಜಾಗತಿಕ ಕ್ರೀಡೆಯಿಂದ ಭಾರತೀಯ ಕ್ರೀಡಾಪಟುಗಳು ಅಮಾನ್ಯಗೊಳ್ಳುವ ಭೀತಿಗೆ ಸಿಲುಕಿದ್ದಾರೆ. ಇದು ಭಾರತೀಯ ಕ್ರೀಡಾವಲಯವನ್ನೇ ತೀವ್ರ ಚಿಂತೆಗೀಡುಮಾಡಿದೆ.
ಕ್ರಿಕೆಟ್ ಆಟಗಾರರನ್ನು ಉದ್ದೀಪನ ಪರೀಕ್ಷೆಗೆ ಒಳಪಡಿಸುವ ವಿಚಾರದಲ್ಲಿ ನಾಡಾ ನಿರ್ಧಾರವನ್ನು ಬಿಸಿಸಿಐ ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದೆ. ಸಮಸ್ಯೆ ಶಮನಗೊಳಿಸಿ ಬಿಸಿಸಿಐ ಅನ್ನು ಮನವೊಲಿಸಿ ಕ್ರಿಕೆಟಿಗರನ್ನು ಪೂರ್ಣ ಪ್ರಮಾಣದಲ್ಲಿ ಉದ್ದೀಪನ ಪರೀಕ್ಷೆಗೆ ಒಳಪಡಿಸುವಂತೆ ವಾಡಾ (ವಿಶ್ವ ಉದ್ದೀಪನ ನಿಗ್ರಹ ಸಮಿತಿ) ಕಟ್ಟುನಿಟ್ಟಾಗಿ ನಾಡಾಕ್ಕೆ ಸೂಚಿಸಿತ್ತು. ಆದರೆ ಕ್ರಿಕೆಟಿಗರನ್ನು ಉದ್ದೀಪನ ಪರೀಕ್ಷೆಗೆ ಒಳಪಡಿಸಲು ಬಿಸಿಸಿಐ ವಿಫಲವಾಗಿದೆ. ಹೀಗಾಗಿ ವಾಡಾ ಈ ಕುರಿತಂತೆ ಐಸಿಸಿ ಉನ್ನತ ಮಟ್ಟಕ್ಕೆ ದೂರು ನೀಡಿ ಈಗ ಒತ್ತಡ ಹೇರಿದೆ.
ಕ್ರೀಡಾ ಸಚಿವರಿಗೆ ಪತ್ರ
ವಾಡಾದ ವರದಿಗೆ ಇದುವರೆಗೆ ಐಸಿಸಿನಿಂದಾಗಲೀ ಅಥವಾ ಬಿಸಿಸಿಐನಿಂದಾಗಲೀ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋಡ್‌ಗೆ ವಾಡಾ ಪ್ರಧಾನ ನಿರ್ದೇಶಕ ಒಲಿವಿಯರ್ ನಿಗ್ಲಿ ಪತ್ರ ಬರೆದಿದ್ದಾರೆ. “ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಬಿಸಿಸಿಐ ಅಧೀನದಲ್ಲಿರುವ ಕ್ರಿಕೆಟ್ ಆಟಗಾರರನ್ನು ಪೂರ್ಣ ಪ್ರಮಾಣದಲ್ಲಿ ನಾಡಾ ನಡೆಸುವ ಉದ್ದೀಪನ ಪರೀಕ್ಷೆಗೆ ಒಳಪಡಿಸಬೇಕು. ತಪ್ಪಿದರೆ ವಾಡಾ ಜತೆಗಿನ ಸಂಬಂಧವನ್ನು ನಾಡಾ ಕಳೆದುಕೊಳ್ಳಲಿದೆ’ ಎಂದು ಪರಿಸ್ಥಿತಿಯ ಗಂಭೀರತೆಯನ್ನು ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದೆ.
ಒಂದು ವೇಳೆ ನಾಡಾ ಮಾನ್ಯತೆ ಕಳೆದುಕೊಂಡರೆ ದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಾಡಾದಿಂದ ಉದ್ದೀಪನ ಪರೀಕ್ಷೆ ಇರುವುದಿಲ್ಲ. ಆಗ ಭಾರತ ವಿಶ್ವ ಮಟ್ಟದ ಮಾನ್ಯತೆಯನ್ನೂ ಕಳೆದುಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.