NADA; ನೋಟಿಸ್ ನೀಡಿದರೂ ವಿನೇಶ್ ಫೋಗಾಟ್ ವಿರುದ್ಧ ಕ್ರಮವಿಲ್ಲ?
Team Udayavani, Sep 27, 2024, 6:26 AM IST
ಹೊಸದಿಲ್ಲಿ: ಉದ್ದೀಪನಾ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸುವುದಕ್ಕೆ ಸಂಬಂಧಿಸಿ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ (ನಾಡಾ) ನಿವೃತ್ತ ಕುಸ್ತಿಪಟು ವಿನೇಶ್ ಫೋಗಾಟ್‌ಗೆ ನೋಟಿಸ್ ನೀಡಿದೆ. ತಾನಿರುವ ಸ್ಥಳದ ಬಗ್ಗೆ ವಿನೇಶ್ ಮಾಹಿತಿ ನೀಡದ ಕಾರಣ, ನಾಡಾ ನೋಟಿಸ್ ಜಾರಿ ಮಾಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ.
ಉದ್ದೀಪನ ಪರೀಕ್ಷೆಗೆ ಮಾದರಿ ಸಂಗ್ರಹಿಸುವುದಕ್ಕಾಗಿ, ವಿನೇಶ್ ಈ ಮೊದಲು ವಾಸವಿದ್ದ ಹರಿಯಾಣದ ಖಖೋìದಾ ಎಂಬಲ್ಲಿಗೆ ಸೆ. 9ರಂದು ನಾಡಾ ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ, ಅಲ್ಲಿ ವಿನೇಶ್ ಇರಲಿಲ್ಲ. ಹೀಗಾಗಿ ವಿನೇಶ್‌ಗೆ ನೋಟಿಸ್ ನೀಡಿರುವ ಅಧಿಕಾರಿಗಳು 14 ದಿನಗಳ ಒಳಗಾಗಿ ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.