NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್ ಭಾಗಿ ಅನುಮಾನ
ನನ್ನ ವಕೀಲರು ಸಕಾಲದಲ್ಲಿ ಉತ್ತರಿಸುತ್ತಾರೆ ಎಂದ ಬಜರಂಗ್ ಪುನಿಯಾ
Team Udayavani, May 5, 2024, 3:15 PM IST
ಹೊಸದಿಲ್ಲಿ: ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ಅನಿರ್ದಿಷ್ಟಾವಧಿಗೆ ಅಮಾನತು ಮಾಡಿದೆ. ಇದು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಪುನಿಯಾ ಅವರ ಮೂತ್ರದ ಮಾದರಿಯನ್ನು ನೀಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ, ಭವಿಷ್ಯದ ಸ್ಫರ್ಧೆಗಳಲ್ಲಿ ಭಾಗವಹಿಸದಂತೆ ಅವರನ್ನು ಅಮಾನತುಗೊಳಿಸಿ ನಾಡಾ ಆದೇಶ ಹೊರಡಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ತಿಳಿಸಿದೆ.
“ಕೆಳಗಿನ ಪ್ಯಾರಾಗ್ರಾಫ್ 4:1:2 ಗೆ ಒಳಪಟ್ಟು ಮತ್ತು NADR 2021 ರ ಆರ್ಟಿಕಲ್ 7.4 ರ ಪ್ರಕಾರ, ಈ ವಿಷಯದಲ್ಲಿ ವಿಚಾರಣೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಯಾವುದೇ ಸ್ಪರ್ಧೆ ಅಥವಾ ಚಟುವಟಿಕೆಯಲ್ಲಿ ಭಾಗವಹಿಸದಂತೆ ಬಜರಂಗ್ ಪುನಿಯಾ ಅವರನ್ನು ತತ್ ಕ್ಷಣವೇ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ” ಎಂದು ನಾಡಾದಿಂದ ಏಪ್ರಿಲ್ 23 ರಂದು ಅಧಿಕೃತ ಆದೇಶ ಬಿಡುಗಡೆ ಮಾಡಲಾಗಿದೆ.
ನನ್ನ ವಕೀಲರು ಸಕಾಲದಲ್ಲಿ ಉತ್ತರಿಸುತ್ತಾರೆ
“ಡೋಪ್ ಟೆಸ್ಟ್ ತೆಗೆದುಕೊಳ್ಳಲು ನನ್ನನ್ನು ಕೇಳಲಾಗಿದೆ ಎಂಬ ಸುದ್ದಿಯನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ !!! NADA ಅಧಿಕಾರಿಗಳಿಗೆ ನನ್ನ ಮಾದರಿಯನ್ನು ನೀಡಲು ನಾನು ಎಂದಿಗೂ ನಿರಾಕರಿಸಲಿಲ್ಲ, ನನ್ನ ಮಾದರಿಯನ್ನು ತೆಗೆದುಕೊಳ್ಳಲು ಅವರು ತಂದ ಅವಧಿ ಮೀರಿದ ಕಿಟ್‌ನ ಮೇಲೆ ಅವರು ಯಾವ ಕ್ರಮ ತೆಗೆದುಕೊಂಡರು? ನಂತರ ನನ್ನ ಡೋಪ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಮೊದಲು ನನಗೆ ಉತ್ತರಿಸಲು ನಾನು ಅವರನ್ನು ವಿನಂತಿಸಿದೆ. ನನ್ನ ವಕೀಲ ವಿದುಶ್ ಸಿಂಘಾನಿಯಾ ಈ ಪತ್ರಕ್ಕೆ ಸಕಾಲದಲ್ಲಿ ಉತ್ತರಿಸುತ್ತಾರೆ” ಎಂದು ಬಜರಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಜರಂಗ್ ಪುನಿಯಾ ಅವರು ಒಲಿಂಪಿಯನ್‌ಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್‌ರಂತಹ ಹಲವಾರು ಉನ್ನತ ಕುಸ್ತಿಪಟುಗಳೊಂದಿಗೆ ಮಾಜಿ ಬಿಜೆಪಿ ಸಂಸದ ಮತ್ತು ಭಾರತದ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಪ್ರತಿಭಟನೆಗಿಳಿದಿದ್ದರು ಎನ್ನುವುದನ್ನು ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.