NADA test: ರವೀಂದ್ರ ಜಡೇಜಗೆ ಐದು ತಿಂಗಳಲ್ಲಿ ಮೂರು ಬಾರಿ ಉದ್ದೀಪನ ಟೆಸ್ಟ್!
Team Udayavani, Aug 10, 2023, 10:35 AM IST
ಹೊಸದಿಲ್ಲಿ: ಕಳೆದ ಐದು ತಿಂಗಳಲ್ಲಿ ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ ಅವರನ್ನು ಮೂರು ಬಾರಿ ನಾಡಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಭಾರತದ 55 ಕ್ರಿಕೆಟರ್ ಗಳ (ಪುರುಷ ಮತ್ತು ಮಹಿಳೆ) 58 ಮಾದರಿ ಸಂಗ್ರಹಿಸಲಾಗಿದೆ ಎಂದು ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ(ನಾಡಾ) ಹೇಳಿದೆ.
ಈ ವರ್ಷದ ಜನವರಿಯಿಂದ ಮೇ ತಿಂಗಳ ವರೆಗೆ ನಡೆಸಿರುವ ಪರೀಕ್ಷೆಗಳ ಅಂಕಿ ಅಂಶವನ್ನು ಅದು ಬಿಡುಗಡೆ ಮಾಡಿದೆ. ಆದರೆ, ಈ ಐದು ತಿಂಗಳ ಅವಧಿಯಲ್ಲಿ ನಾಯಕ ರೋಹಿತ್ ಶರ್ಮ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಮಾದರಿಯನ್ನು ಸಂಗ್ರಹಿಸಿಲ್ಲ ಎಂದೂ ಅದು ಹೇಳಿದೆ. 2021 ಮತ್ತು 2022ರಲ್ಲಿ ನಾಯಕ ರೋಹಿತ್ ಶರ್ಮ ಅವರನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಈ ಅವಧಿಯಲ್ಲೂ ವಿರಾಟ್ ಕೊಹ್ಲಿ ಅವರ ಟೆಸ್ಟ್ ನಡೆಸಿರಲಿಲ್ಲ.
ಈ ವರ್ಷ ರವೀಂದ್ರ ಜಡೇಜ ಅವರನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಬಾರಿ ಸೂರ್ಯಕುಮಾರ್, ಕೆ.ಎಲ್.ರಾಹುಲ್, ಇಶನ್ ಕಿಶನ್, ಸಿರಾಜ್, ದೀಪಕ್ ಚಹರ್, ಮಾಯಾಂಕ್, ರಾಹುಲ್ ತ್ರಿಪಾಠಿ, ಭುವನೇಶ್ವರ ಕುಮಾರ್, ವೃದ್ಧಿಮಾನ್ ಸಹ, ದಿನೇಶ್ ಕಾರ್ತೀಕ್, ಜೈಸ್ವಾಲ್, ರಾಯುಡು, ಪಿಯೂಶ್ ಚಾವ್ಲಾ, ಮನೀಷ್ ಪಾಂಡೆ ಅವರ ಟೆಸ್ಟ್ ನಡೆಸಲಾಗಿದೆ.
ಕ್ರಿಕೆಟ್ ಹೊರತುಪಡಿಸಿದಂತೆ ಒಲಿಂಪಿಕ್ ಪದಕ ಹೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು, ಬಾಕ್ಸರ್ ಲವ್ಲೀನಾ, ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಕುಸ್ತಿ ಆಟಗಾರರಾದ ಬಜರಂಗ್ ಪೂನಿಯ ಮತ್ತು ವಿನೇಶ್ ಪೋಗಟ್, ಹಾಕಿ ಆಟಗಾರರಾದ ಹರ್ಮನ್ಪ್ರೀತ್ ಸಿಂಗ್, ಆರ್ಆರ್ ಶ್ರೀಜೇಶ್, ಸವಿತಾ ಪೂನಿಯಾ ಅವರ ಮಾದರಿ ಸಂಗ್ರಹಿಸಿ ಟೆಸ್ಟ್ ನಡೆಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.