ಮಳೆ ಮರುದಿನ ನಡಾಲ್‌ ಸೆಮಿ ಯಾನ

Team Udayavani, Jun 8, 2018, 6:00 AM IST

cc-52.jpg

ಪ್ಯಾರಿಸ್‌: ವಿಶ್ವದ ನಂ.1 ಟೆನಿಸಿಗ, ಹಾಲಿ ಚಾಂಪಿಯನ್‌ ಖ್ಯಾತಿಯ ರಫೆಲ್‌ ನಡಾಲ್‌ ಮಳೆಯಾಟದ ಮರುದಿನ ಅಮೋಘ ಗೆಲುವಿನಾಟ ಪ್ರದರ್ಶಿಸಿ ಫ್ರೆಂಚ್‌ ಓಪನ್‌ ಸೆಮಿಫೈನಲ್‌ಗೆ ನಾಗಾಲೋಟ ಬೆಳೆಸಿದ್ದಾರೆ.

ಮಳೆಯಿಂದ ಗುರುವಾರ ಮುಂದುವರಿದ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್‌ ವಿರುದ್ಧದ ಪಂದ್ಯವನ್ನು ನಡಾಲ್‌ 4-6, 6-3, 6-2, 6-2 ಅಂತರದಿಂದ ಗೆದ್ದು ಬೀಗಿದರು. ಬುಧವಾರ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ಮೊದಲ ಸೆಟ್‌ ಕಳೆದುಕೊಂಡಿದ್ದ ನಡಾಲ್‌ 4-6, 5-3ರ ಹಿನ್ನಡೆಯಲ್ಲಿದ್ದರು. 2015ರ ಬಳಿಕ ನಡಾಲ್‌ ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮೊದಲ ಬಾರಿಗೆ ಸೆಟ್‌ ಒಂದನ್ನು ಕಳೆದುಕೊಂಡಿದ್ದರು. ಆರ್ಜೆಂಟೀನಾದ ಆಟಗಾರ ಅದ್ಭುತವೊಂದರ ನಿರೀಕ್ಷೆಯಲ್ಲಿದ್ದರು. ರಾತ್ರಿಯಿಡೀ ದೊಡ್ಡ ಬೇಟೆಯ ಕನಸು ಕಾಣುತ್ತ ಉಳಿದಿದ್ದರೋ ಏನೋ. ಆದರೆ ಗುರುವಾರ ಬಿಸಿಲೇರುತ್ತಿದ್ದಂತೆಯೆ ನಡಾಲ್‌ ಆಟವೂ ಬಿಸಿ ಏರಿಸಿಕೊಳ್ಳುತ್ತ ಹೋಯಿತು. ಅವರು ಹಂತ ಹಂತವಾಗಿ ಶಾರ್ಟ್ಸ್ಮನ್‌ ವಿರುದ್ಧ ಮೇಲುಗೈ ಸಾಧಿಸುತ್ತ ಹೋದರು. ಅವರಿಗೆ ಇನ್ನೊಂದು ಅಂಕ ನೀಡದೆಯೇ ದ್ವಿತೀಯ ಸೆಟ್‌ ವಶಪಡಿಸಿಕೊಂಡರು. ಬಳಿಕ ಸುಲಭದಲ್ಲಿ ಉಳಿದೆರಡು ಸೆಟ್‌ಗಳ ಮೇಲೆ ಪಾರಮ್ಯ ಸಾಧಿಸಿದರು. 

ಸೆಮಿ ಪ್ರವೇಶದ ಸಂತಸ
“ಇದೊಂದು ಅತ್ಯಂತ ಕಠಿನ ಪಂದ್ಯವಾಗಿತ್ತು. ಡೀಗೊ ನನ್ನ ಉತ್ತಮ ಗೆಳೆಯ ಹಾಗೂ ಉತ್ತಮ ಆಟಗಾರ’ ಎಂದು 16 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿರುವ ರಫೆಲ್‌ ನಡಾಲ್‌ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು.  ಇದು ಫ್ರೆಂಚ್‌ ಓಪನ್‌ನಲ್ಲಿ ನಡಾಲ್‌ ಕಾಣುತ್ತಿರುವ 11ನೇ ಸೆಮಿಫೈನಲ್‌. 

11ನೇ ಶ್ರೇಯಾಂಕದ ಡೀಗೊ 
ಶಾರ್ಟ್ಸ್ಮನ್‌ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಕಾಣುವ ಅದೃಷ್ಟದಿಂದ ವಂಚಿತರಾದರು. ಇದು ಅವರ 2ನೇ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್‌. ಕಳೆದ ವರ್ಷದ ಯುಎಸ್‌ ಓಪನ್‌ನಲ್ಲಿ ಅವರು ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ ತಲುಪಿದ್ದರು.

ನಡಾಲ್‌ ಎದುರಾಳಿ ಡೆಲ್‌ ಪೊಟ್ರೊ
ಆರ್ಜೆಂಟೀನಾದ ಒಬ್ಬ ಆಟಗಾರನನ್ನು
ಸೋಲಿಸಿ ಸೆಮಿಫೈನಲ್‌ಗೆ ಬಂದಿರುವ ರಫೆಲ್‌ ನಡಾಲ್‌ ಅವರಿಗೆ ಇಲ್ಲಿ ಮತ್ತೂಬ್ಬ ಆರ್ಜೆಂಟೀನಿ ಆಟಗಾರ ಎದುರಾಗಿದ್ದಾರೆ. ಅವರು 5ನೇ ಶ್ರೇಯಾಂಕದ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ. ಗುರುವಾರ ನಡೆದ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಡೆಲ್‌ ಪೊಟ್ರೊ 7-6 (7-5), 5-7, 6-3, 7-5 ಅಂತರದಿಂದ ಕ್ರೊವೇಶಿಯಾದ 3ನೇ ಶ್ರೇಯಾಂಕಿತ ಮರಿನ್‌ ಸಿಲಿಕ್‌ ವಿರುದ್ಧ ಜಯ ಸಾಧಿಸಿದರು. ಇದು ಫ್ರೆಂಚ್‌ ಓಪನ್‌ನಲ್ಲಿ ಡೆಲ್‌ ಪೊಟ್ರೊ ಕಾಣುತ್ತಿರುವ 3ನೇ ಸೆಮಿಫೈನಲ್‌. ಇದಕ್ಕೂ ಮುನ್ನ 2009 ಮತ್ತು 2016ರಲ್ಲಿ ಉಪಾಂತ್ಯ ಪ್ರವೇಶಿಸಿದ್ದ ಡೆಲ್‌ ಪೊಟ್ರೊ ಎರಡರಲ್ಲೂ ಸೋಲನುಭವಿಸಿದ್ದರು. ಈ ಬಾರಿ ರಫೆಲ್‌ ನಡಾಲ್‌ ವಿರುದ್ಧ ಮ್ಯಾಜಿಕ್‌ ಮಾಡಬಹುದೇ ಎಂಬ ಕೌತುಕ ಟೆನಿಸ್‌ ಅಭಿಮಾನಿಗಳದ್ದು. ಡೆಲ್‌ ಪೊಟ್ರೊ ಈವರೆಗೆ ಒಮ್ಮೆಯಷ್ಟೇ ಗ್ರ್ಯಾನ್‌ಸ್ಲಾಮ್‌ ಕಿರೀಟ ಧರಿಸಿದ್ದಾರೆ. ಇದು 2009ರ ಯುಎಸ್‌ ಓಪನ್‌ನಲ್ಲಿ ಒಲಿದಿತ್ತು. ಸ್ವಾರಸ್ಯವೆಂದರೆ, ಅಂದಿನ ಪ್ರಶಸ್ತಿ ಕಾಳಗದಲ್ಲಿ ನಡಾಲ್‌ ಅವರನ್ನು ಮಣಿಸುವ ಮೂಲಕವೇ ಡೆಲ್‌ ಪೊಟ್ರೊ ಪ್ರಶಸ್ತಿ ಎತ್ತಿದ್ದರು!

ಹಾಲೆಪ್‌ ಫೈನಲ್‌ ಪ್ರವೇಶ
ವಿಶ್ವದ ನಂಬರ್‌ ವನ್‌ ಆಟಗಾರ್ತಿ ರೊಮೇನಿಯಾದ ಸಿಮೋನಾ ಹಾಲೆಪ್‌ ಫ್ರೆಂಚ್‌ ಓಪನ್‌ ವನಿತಾ ಸಿಂಗಲ್ಸ್‌ ಕೂಟದ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದಾರೆ. ಗುರುವಾರ ನಡೆದ ಮೊದಲ ಸೆಮಿಫೈನಲ್‌ ಕಾಳಗದಲ್ಲಿ ಅವರು 6-1, 6-4 ಅಂತರದಿಂದ ಗಾರ್ಬಿನ್‌ ಮುಗುರುಜಾಗೆ ಸೋಲುಣಿಸಿದರು.
ಇನ್ನೊಂದು ಸೆಮಿಫೈನಲ್‌ನಲ್ಲಿ ಮ್ಯಾಡಿಸನ್‌ ಕೀಸ್‌-ಸ್ಲೋನ್‌ ಸ್ಟೀಫ‌ನ್ಸ್‌ ಸೆಣಸಾಡುತ್ತಿದ್ದು, ಇಲ್ಲಿನ ವಿಜೇತರನ್ನು ಹಾಲೆಪ್‌ ಶನಿವಾರದ ಫೈನಲ್‌ನಲ್ಲಿ ಎದುರಿಸಲಿದ್ದಾರೆ.

ಈವರೆಗೆ ಒಂದೂ ಗ್ರ್ಯಾನ್‌ಸ್ಲಾಮ್‌ ಜಯಿಸದ ಸಿಮೋನಾ ಹಾಲೆಪ್‌ಗೆ ಇದು 3ನೇ ಫ್ರೆಂಚ್‌ ಓಪನ್‌ ಫೈನಲ್‌. 2014 ಮತ್ತು ಕಳೆದ ವರ್ಷದ ಪ್ರಶಸ್ತಿ ಸಮರದಲ್ಲಿ ಅವರಿಗೆ ನಿರಾಸೆಯೇ ಗತಿಯಾಗಿತ್ತು. ಅವರು ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಲ್ಲೂ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದರು. ಆದರೆ ಇಲ್ಲಿಯೂ ಸೋಲೇ ಸಂಗಾತಿಯಾಗಿತ್ತು. ಪ್ಯಾರಿಸ್‌ನಲ್ಲಿ 3ನೇ ಪ್ರಯತ್ನದಲ್ಲಿ ಕಪ್‌ ಎತ್ತುವ ಕನಸು ಕಾಣುತ್ತಿದ್ದಾರೆ ಸಿಮೋನಾ ಹಾಲೆಪ್‌.

ಟಾಪ್ ನ್ಯೂಸ್

Karkala: ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ: ಎಎನ್ಎಫ್‌ನಿಂದ ಕೂಂಬಿಂಗ್ ಆಪರೇಷನ್

Karkala: ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ… ಎಎನ್ಎಫ್‌ನಿಂದ ಕೂಂಬಿಂಗ್ ಆಪರೇಷನ್

Kamal Haasan: ʼಥಗ್‌ ಲೈಫ್‌ʼ ರಿಲೀಸ್‌ ಡೇಟ್‌ ಅನೌನ್ಸ್; ಬರ್ತ್‌ ಡೇಗೆ ಟೀಸರ್‌ ಗಿಫ್ಟ್

Kamal Haasan: ʼಥಗ್‌ ಲೈಫ್‌ʼ ರಿಲೀಸ್‌ ಡೇಟ್‌ ಅನೌನ್ಸ್; ಬರ್ತ್‌ ಡೇಗೆ ಟೀಸರ್‌ ಗಿಫ್ಟ್

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ಮುಖ್ಯಸ್ಥ: ಡೊನಾಲ್ಡ್‌ ಟ್ರಂಪ್‌ ಒಲವು

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ಮುಖ್ಯಸ್ಥ: ಡೊನಾಲ್ಡ್‌ ಟ್ರಂಪ್‌ ಒಲವು

Start sugarcane harvesting from November 8: Minister Sivananda Patil appeals to farmers

Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ

Listen to people’s problems and report to the Speaker: JPC President Jagadambika Pal

Hubli: ಜನರ ಸಮಸ್ಯೆ ಆಲಿಸಿ ಸಭಾಪತಿಗೆ ವರದಿ: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್

CCTV Footage: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ… ಯುವತಿ ಬದುಕುಳಿದಿದ್ದೇ ಪವಾಡ

CCTV Footage: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ… ಯುವತಿ ಬದುಕುಳಿದಿದ್ದೇ ಪವಾಡ

pratap simha

Hubli: ವಕ್ಫ್ ಬೋರ್ಡ್ ಆಸ್ತಿ ಸಿದ್ದು ಸರ್ಕಾರದ ಕಬಳಿಕೆಗೆ ಕುಮ್ಮಕ್ಕು: ಪ್ರತಾಪ್‌ ಸಿಂಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sydney Thunder: ಡೇವಿಡ್‌ ವಾರ್ನರ್‌ಗೆ 6 ವರ್ಷಗಳ ಬಳಿಕ ನಾಯಕತ್ವ!

Sydney Thunder: ಡೇವಿಡ್‌ ವಾರ್ನರ್‌ಗೆ 6 ವರ್ಷಗಳ ಬಳಿಕ ನಾಯಕತ್ವ!

Test Series: ಇಂದಿನಿಂದ ‘ಎ’ ತಂಡಗಳ ದ್ವಿತೀಯ ಟೆಸ್ಟ್: ಎಲ್ಲರ ಗಮನ ರಾಹುಲ್ ಮೇಲೆ

Test Series: ಇಂದಿನಿಂದ ‘ಎ’ ತಂಡಗಳ ದ್ವಿತೀಯ ಟೆಸ್ಟ್: ಎಲ್ಲರ ಗಮನ ರಾಹುಲ್ ಮೇಲೆ

Ranji Trophy: ಬಂಗಾಲಕ್ಕೆ ಅನುಸ್ತೂಪ್‌ ಬೆಂಗಾವಲು… 5ಕ್ಕೆ 249 ರನ್‌

Ranji Trophy: ಬಂಗಾಲಕ್ಕೆ ಅನುಸ್ತೂಪ್‌ ಬೆಂಗಾವಲು… 5ಕ್ಕೆ 249 ರನ್‌

Pro Kabaddi League: ರೋಚಕ ಹೋರಾಟದಲ್ಲಿ ಗೆದ್ದ ಮುಂಬಾ

Pro Kabaddi League: ರೋಚಕ ಹೋರಾಟದಲ್ಲಿ ಗೆದ್ದ ಮುಂಬಾ

Afro-Asia Cup after 2 decades?

Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್‌?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1(1)

Sullia: ಎಲ್ಲಿ ನೋಡಿದರಲ್ಲಿ ಗುಂಡಿಗಳದ್ದೇ ದರ್ಬಾರು!

Karkala: ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ: ಎಎನ್ಎಫ್‌ನಿಂದ ಕೂಂಬಿಂಗ್ ಆಪರೇಷನ್

Karkala: ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ… ಎಎನ್ಎಫ್‌ನಿಂದ ಕೂಂಬಿಂಗ್ ಆಪರೇಷನ್

Kamal Haasan: ʼಥಗ್‌ ಲೈಫ್‌ʼ ರಿಲೀಸ್‌ ಡೇಟ್‌ ಅನೌನ್ಸ್; ಬರ್ತ್‌ ಡೇಗೆ ಟೀಸರ್‌ ಗಿಫ್ಟ್

Kamal Haasan: ʼಥಗ್‌ ಲೈಫ್‌ʼ ರಿಲೀಸ್‌ ಡೇಟ್‌ ಅನೌನ್ಸ್; ಬರ್ತ್‌ ಡೇಗೆ ಟೀಸರ್‌ ಗಿಫ್ಟ್

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ಮುಖ್ಯಸ್ಥ: ಡೊನಾಲ್ಡ್‌ ಟ್ರಂಪ್‌ ಒಲವು

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ಮುಖ್ಯಸ್ಥ: ಡೊನಾಲ್ಡ್‌ ಟ್ರಂಪ್‌ ಒಲವು

Waqf JPC President visit : Jolle couple, Jarakiholi visit to Vijayapura

Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.