ಮರಳಿ ನಂ. 1 ಸ್ಥಾನಕ್ಕೇರಿದ ನಡಾಲ್
Team Udayavani, Apr 3, 2018, 6:55 AM IST
ಪ್ಯಾರಿಸ್: ಪುರುಷರ ಸಿಂಗಲ್ಸ್ ಟೆನಿಸ್ ರ್ಯಾಂಕಿಂಗ್ನಲ್ಲಿ ಸ್ಪೇನ್ ಆಟಗಾರ ರಫೆಲ್ ನಡಾಲ್ ನಂ. 1 ಸ್ಥಾನವನ್ನು ಮರಳಿ ಪಡೆದುಕೊಂಡಿದ್ದಾರೆ. ಇದರೊಂದಿಗೆ ರಫೆಲ್ ನಡಾಲ್ 2ನೇ ಸ್ಥಾನಕ್ಕೆ ಕುಸಿದರು. ಮಯಾಮಿ ವನಿತಾ ಚಾಂಪಿಯನ್ ಅಮೆರಿಕದ ಸ್ಲೋನ್ ಸ್ಟೀಫನ್ಸ್ 9ನೇ ಸ್ಥಾನ ಪಡೆದುಕೊಂಡಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ನಂ. 1 ಸ್ಥಾನದಲ್ಲಿದ್ದ ಸ್ವಿಸ್ ದೈತ್ಯ ರೋಜರ್ ಫೆಡರರ್ ಮಯಾಮಿ ಮಾಸ್ಟರ್ ಓಪನ್ನಲ್ಲಿ ಜಾನ್ ಇಸ್ನರ್ ವಿರುದ್ಧ ಪರಾಭವಗೊಂಡದ್ದು ನಡಾಲ್ ಪ್ರಗತಿಗೆ ದಾರಿಯಾಯಿತು. ಅತ್ತ ಮಯಾಮಿ ಓಪನ್ ವನಿತಾ ಫೈನಲ್ನಲ್ಲಿ ಜೆಲೆನಾ ಒಸ್ಟಾಪೆಂಕೊ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ಜಯಿಸಿದ ಸ್ಲೋನ್ ಸ್ಟೀಫನ್ಸ್ ಮೊದಲ ಸಲ ಟಾಪ್-10 ಯಾದಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು 3 ಸ್ಥಾನಗಳ ಪ್ರಗತಿ ಸಾಧಿಸಿದರು.
ಸೋಮವಾರ ಬಿಡುಗಡೆಗೊಂಡ ನೂತನ ರ್ಯಾಂಕಿಂಗ್ ಪಟ್ಟಿಯಂತೆ ಒಟ್ಟು 8,770 ಅಂಕಗಳೊಂದಿಗೆ ನಡಾಲ್ ಅಗ್ರಸ್ಥಾನ ಅಲಂಕರಿಸಿದರು. ರೋಜರ್ ಫೆಡರರ್ 2ನೇ, ಮರಿನ್ ಸಿಲಿಕ್ 3ನೇ, ಅಲೆಕ್ಸಾಂಡರ್ ಜ್ವೆರೇವ್ 4ನೇ, ಗ್ರಿಗರ್ ಡಿಮಿಟ್ರೋವ್ 5ನೇ ಸ್ಥಾನದಲ್ಲಿದ್ದಾರೆ.
ರೊಮೇನಿಯಾದ ಸಿಮೋನಾ ಹಾಲೆಪ್ ಒಟ್ಟು 8,140 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಅನಂತರದ ಸ್ಥಾನದಲ್ಲಿ ಡೆನ್ಮಾರ್ಕ್ನ ಕ್ಯಾರೋಲಿನ್ ವೋಜ್ನಿಯಾಕಿ (6,790) ಇದ್ದಾರೆ. ಮಯಾಮಿ ಓಪನ್ ಫೈನಲ್ನಲ್ಲಿ ಸೋತ ಜೆಲೆನಾ ಒಸ್ಟಾಪೆಂಕೊ ಅವರು ಟಾಪ್-5ರೊಳಗಿನ ಸ್ಥಾನ ಉಳಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.