ಫ್ರೆಂಚ್ ಓಪನ್-2017 ಮುನ್ನಡೆದ ನಡಾಲ್
Team Udayavani, Jun 3, 2017, 3:25 PM IST
ಪ್ಯಾರಿಸ್: ಕಳೆದ ಬಾರಿಯ ವನಿತಾ ಚಾಂಪಿಯನ್ ಗಾರ್ಬಿನ್ ಮುಗುರುಜಾ, ಪುರುಷರ ವಿಭಾಗದ ನೆಚ್ಚಿನ ಆಟಗಾರ ರಫೆಲ್ ನಡಾಲ್ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಮೂರನೇ ಸುತ್ತನ್ನು ದಾಟಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ಡೊಮಿನಿಕ್ ಥೀಮ್, ವನಿತೆಯರ ಸಿಂಗಲ್ಸ್ನಲ್ಲಿ ಸಮಂತಾ ಸ್ಟೋಸರ್, ಜೆಲೆನಾ ಒಸ್ಟಾಪೆಂಕೊ, ಕ್ರಿಸ್ಟಿನಾ ಲಡೆನೋವಿಕ್ ಕೂಡ 4ನೇ ಸುತ್ತು ತಲುಪಿದ್ದಾರೆ. ಇವರಲ್ಲಿ ಲಾತ್ವಿಯಾದ ಯುವ ಆಟಗಾರ್ತಿ ಒಸ್ಟಾಪೆಂಕೊ ಗ್ರ್ಯಾನ್ಸ್ಲಾಮ್ 4ನೇ ಸುತ್ತಿಗೇರಿದ್ದು ಇದೇ ಮೊದಲು. ಒಸ್ಟಾಪೆಂಕೊ ಉಕ್ರೇನಿನ ಲೆಸಿಯಾ ಸುರೆಂಕೊ ವಿರುದ್ಧ 6-1, 6-4 ಅಂತರದ ಜಯ ಸಾಧಿಸಿದರು. ಮನೆಯಲ್ಲಿ ಬ್ರಝಿಲ್ನ ಸಾಂಬಾ ಡ್ಯಾನ್ಸ್ ಅಭ್ಯಾಸ ನಡೆಸುತ್ತಿರುವುದೇ ತನ್ನ ಯಶಸ್ಸಿಗೆ ಕಾರಣ ಎಂದಿದ್ದಾರೆ ಒಸ್ಟಾಪೆಂಕೊ.
ಒಸ್ಟಾಪೆಂಕೊ ಅವರಿನ್ನು ಮಾಜಿ ಯುಎಸ್ ಓಪನ್ ಚಾಂಪಿಯನ್, ಆಸ್ಟ್ರೇಲಿಯದ ಸಮಂಕಾ ಸ್ಟೋಸರ್ ವಿರುದ್ಧ ಆಡಲಿದ್ದಾರೆ. ಸ್ಟೋಸರ್ ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್ ಅವರಿಗೆ 6-2, 6-2 ನೇರ ಸೆಟ್ಗಳ ಆಘಾತವಿಕ್ಕಿದರು.
ಹಾಲಿ ಚಾಂಪಿಯನ್ ಮುಗುರುಜಾ ಕಜಾಕ್ಸ್ಥಾನದ ಯುಲಿಯಾ ಪುತಿನ್ಸೇವಾ ಅವರನ್ನು 7-5, 6-2 ಅಂತರದಿಂದ ಮಣಿಸಿದರು. ಪ್ರಾನ್ಸ್ನ 13ನೇ ಶ್ರೇಯಾಂಕದ ಕ್ರಿಸ್ಟಿನಾ ಲಡೆನೋವಿಕ್ ಅಮೆರಿಕದ ಶೆಲ್ಬಿ ರೋಜರ್ ವಿರುದ್ಧ 7-5, 4-6, 8-6 ಆಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ರಫೆಲ್ ನಡಾಲ್ ಸುಲಭ ಜಯ
ಪುರುಷರ ಸಿಂಗಲ್ಸ್ನಲ್ಲಿ ರಫೆಲ್ ನಡಾಲ್ ಜಾರ್ಜಿಯಾದ ನಿಕೋಲಾಸ್ ಬಾಸಿಲಶಿಲ್ವಿ ಅವರನ್ನು ಅತ್ಯಂತ ಸುಲಭದಲ್ಲಿ 6-0, 6-1, 6-0 ಅಂತರದಿಂದ ಬಗ್ಗುಬಡಿದರು. ಇದು ಫ್ರೆಂಚ್ ಇತಿಹಾಸದ ಅತ್ಯಂತ ಸುಲಭ ಜಯಗಳಲ್ಲಿ ಒಂದಾಗಿ ದಾಖಲಾಗಿದೆ.
ಸ್ಪೇನ್ ಎದುರಾಳಿ ಗಾರ್ಸಿಯಾ ಲೋಪೆಜ್ ಗಾಯಾಳಾದ್ದರಿಂದ ಕೆನಡಾದ ಮಿಲೋಸ್ ರಾನಿಕ್ ಮುನ್ನಡೆ ಸಾಧಿಸಿದರು. ಆಸ್ಟ್ರಿಯಾದ 6ನೇ ಶ್ರೇಯಾಂಕಿತ ಡೊಮಿನಿಕ್ ಥೀಮ್ ಅಮೆರಿಕದ ಸ್ಟೀವ್ ಜಾನ್ಸನ್ ಅವರನ್ನು 6-1, 7-6 (7-4), 6-3ರಿಂದ ಹಿಮ್ಮೆಟ್ಟಿಸಿದರು. ಸ್ಪೇನಿನ 17ನೇ ಶ್ರೇಯಾಂಕದ ಆಟಗಾರ ಬಾಟಿಸ್ಟ ಅಗುಟ್ ಜೆಕ್ ಗಣರಾಜ್ಯದ ಜಿರಿ ವೆಸ್ಲಿ ಅವರನ್ನು 6-3, 6-4, 6-3ರಿಂದ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.