ಕರಾವಳಿಯ ನಮಿತಾ ರೈ; ಅವಳಿ ಚಿನ್ನದ ಪವರ್
Team Udayavani, Dec 20, 2019, 6:13 AM IST
ಮೂಡುಬಿದಿರೆ: ಕರಾವಳಿ ಮೂಲದ ಕನ್ನಡತಿ ನಮಿತಾ ರೈ ಪಾರೇಖ್ ಮಾಸ್ಕೋದಲ್ಲಿ ನಡೆದ ವಿಶ್ವ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಶ್ವದಾಖಲೆಯ ಸಾಧನೆಯೊಂದಿಗೆ 2 ಚಿನ್ನದ ಪದಕ ಜಯಿಸಿದ್ದಾರೆ. 55 ಕೆ.ಜಿ. ವಿಭಾಗದ ಸ್ಪರ್ಧೆಗಳಲ್ಲಿ 172.5 ಕೆಜಿ ಹಾಗೂ 165 ಕೆ.ಜಿ. ಭಾರವೆತ್ತಿ ಸ್ವರ್ಣ ಸಾಧನೆಗೈದರು.
ಇವರು ಕಡಂದಲೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಪ್ರೌಢಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ವೇಣೂರಿನ ಸದಾಶಿವ ರೈ ಮತ್ತು ಮೂಡುಬಿದಿರೆ ಹೊಸಬೆಟ್ಟು ಸರಕಾರಿ ಪ್ರೌಢಶಾಲಾ ಶಿಕ್ಷಕಿ ಜಯಲಕ್ಷ್ಮೀ ಶೆಟ್ಟಿ ದಂಪತಿಯ ಪುತ್ರಿ.
ದೈ.ಶಿ. ಶಿಕ್ಷಕ ತಂದೆಯೇ ಸ್ಫೂರ್ತಿ
ತಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿರುವುದರಿಂದ ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದ ನಮಿತಾ ರೈ, ಮೂಡುಬಿದಿರೆ ಜೈನ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ, ಆಳ್ವಾಸ್‌ನಲ್ಲಿ ಕ್ರೀಡಾ ತರಬೇತಿಯೊಂದಿಗೆ ಬಿಕಾಂನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು. ಆಗಲೇ ಫುಟ್‌ಬಾಲ್, ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆಗೈದಿದ್ದರು.
ಎಂಬಿಎ ಪದವಿ ಗಳಿಸಿ ಬೆಂಗಳೂರಿನ ಎಚ್‌ಎಸ್‌ಬಿಸಿಯಲ್ಲಿ 2 ವರ್ಷ ಉದ್ಯೋಗಿಯಾಗಿದ್ದರು. 2015ರಲ್ಲಿ ಛತ್ತೀಸ್‌ಗಡ ರಾಯ್‌ಪುರದ ಉದ್ಯಮಿ ಸನ್ನಿ ಪಾರೇಖ್ ಅವರನ್ನು ವಿವಾಹವಾಗಿ ಅಲ್ಲೇ ನೆಲೆಸಿ ದ್ದಾರೆ. ಮದುವೆ ಬಳಿಕವೂ ತರಬೇತಿ ಮುಂದುವರಿಸಿದ್ದು, ಅಕ್ಟೋಬರ್‌ನಲ್ಲಿ ಬೆಂಗಳೂರಿ ನಲ್ಲಿ ನಡೆದ ವೇಟ್‌ಲಿಫ್ಟಿಂಗ್ ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗಿದ್ದರು.
ಬದುಕು ಬದಲಿಸಿದ ಕೋಚ್ ಸಲಹೆ
ಬೆಂಗಳೂರಿನ ಜಿಮ್‌ನಲ್ಲಿ ವಕೌìಟ್ ಮಾಡುತ್ತಿ ದ್ದಾಗ ಪವರ್‌ಲಿಫ್ಟಿಂಗ್ ಬಗ್ಗೆ ಕೋಚ್ ನೀಡಿದ ಸಲಹೆಯಿಂದ ತಾನು ಈ ದಿಕ್ಕಿನಲ್ಲಿ ಯೋಚಿಸು ವಂತಾಯಿತು ಎನ್ನುತ್ತಾರೆ ನಮಿತಾ ರೈ. ಕೋಚ್ ಮೊಹಮ್ಮದ್ ಅಜ್ಮತ್ ಮಾರ್ಗದರ್ಶನದಲ್ಲಿ ಭಾರ ಎತ್ತುವ ಕೌಶಲ ಕಲಿತರು.
ಅದು ಯಾವುದೇ ಹಂತವಾಗಿರಲಿ, ಭಾರತವನ್ನು ಪ್ರತಿನಿಧಿಸುವುದೇ ಒಂದು ಹೆಮ್ಮೆ. ಮೊದಲ ಪ್ರಯತ್ನದÇÉೇ ವಿಶ್ವದಾಖಲೆಯೊಂದಿಗೆ ಎರಡು ಚಿನ್ನದ ಪದಕ ಗೆದ್ದಿರುವುದು ತುಂಬ ಖುಷಿ ಕೊಟ್ಟಿದೆ. ಮುಂದೆಯೂ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಎದುರು ನೋಡುತ್ತಿರುತ್ತೇನೆ.
– ನಮಿತಾ ರೈ
ಚಿಕ್ಕಂದಿನಿಂದಲೇ ಆಕೆಗೆ ಕ್ರೀಡೆಯತ್ತ ವಿಶೇಷ ಆಸಕ್ತಿ. ಕಬಡ್ಡಿ, ಹಾಕಿ, ಫುಟ್‌ಬಾಲ್, ಹರ್ಡಲ್ಸ್ ಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಳು. ಹಠ ಹಿಡಿದು ಗುರಿ ಮುಟ್ಟುವ ಸ್ವಭಾವ ಆಕೆಯದು. ವಿಶ್ವದಾಖಲೆಯ ಸಾಧನೆಯ ಮೂಲಕ ನಮ್ಮ ದೇಶಕ್ಕೆ, ನಾಡಿಗೆ ಕೀರ್ತಿ ತಂದಿದ್ದು, ನಮಗೆಲ್ಲ ಬಹಳ ಸಂತಸದ ಸಂಗತಿ.
– ಸದಾಶಿವ ರೈ, ತಂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.