China Open 2024 : ಒಸಾಕಾ ದ್ವಿತೀಯ ಸುತ್ತಿಗೆ
Team Udayavani, Sep 26, 2024, 7:50 AM IST
ಬೀಜಿಂಗ್: ಜಪಾನ್‌ನ ನವೋಮಿ ಒಸಾಕಾ “ಚೀನ ಓಪನ್’ ಟೆನಿಸ್ ಪಂದ್ಯಾವಳಿಯ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಬುಧವಾರದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಅವರು ಇಟಲಿಯ ಲೂಸಿಯಾ ಬ್ರಾಮ್ ಝೆಟ್ಟಿ ವಿರುದ್ಧ 6-3, 6-2 ಅಂತರದ ಜಯ ಸಾಧಿಸಿದರು.
ಕೋವಿಡ್-19ಗಿಂತ ಮೊದಲು, 2019ರಲ್ಲಿ ಚೀನ ಓಪನ್ ಚಾಂಪಿಯನ್ ಆಗಿದ್ದ ನವೋಮಿ ಒಸಾಕಾ ಅವರಿನ್ನು ಯುಲಿಯಾ ಪುಟಿನ್ಸೇವಾ ವಿರುದ್ಧ ಆಡಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಅಮೆರಿಕದ ಸೋಫಿಯಾ ಕೆನಿನ್ ರೊಮೇನಿಯಾದ ಅನಾ ಬೋಗ್ದಾನಾ ಅವರೆದುರು 7-5, 6-2 ಅಂತರದಿಂದ ಗೆದ್ದು ಬಂದರು. ಈ ಪಂದ್ಯಾವಳಿಯಲ್ಲಿ ಅಮೆರಿಕದ 15 ಮಂದಿ ಆಟಗಾರ್ತಿಯರು ಆಡುತ್ತಿರುವುದು ವಿಶೇಷ. ಕೆನಿನ್ ಅವರ 2ನೇ ಸುತ್ತಿನ ಎದುರಾಳಿ ಡಯಾನಾ ಶ್ನೆ„ಡರ್.
ಅಮೆರಿಕದ ಮತ್ತೋರ್ವ ಆಟಗಾರ್ತಿ ಟೇಲರ್ ಟೌನ್ಸೆಂಡ್ 6-2, 4-6, 6-3ರಿಂದ ಮಾರ್ಟಿನಾ ಟ್ರೆವಿಸಾನ್ ಅವರನ್ನು, ಚೀನದ ವಾಂಗ್ ಕ್ಸಿನ್ಯು ಜಪಾನ್‌ನ ಮೈ ಹೊಂಟಾಮಾ ಅವರನ್ನು 6-1, 4-6, 6-3ರಿಂದ ಮಣಿಸಿದರು.
ಬರೆಟ್ಟಿ ಗೆಲುವು
ಟೋಕಿಯೊ: ಜಪಾನ್ ಓಪನ್ ಟೆನಿಸ್‌ನಲ್ಲಿ ಮ್ಯಾಟಿಯೊ ಬರೆಟ್ಟಿ ಗೆಲುವಿನ ಆರಂಭ ಪಡೆದಿದ್ದಾರೆ. ಅವರು ಬೋಟಿಕ್ ವಾನ್ ಡೆ ಝಂಡ್‌ಶಪ್ ವಿರುದ್ಧ 6-3, 6-4ರಿಂದ ಗೆದ್ದು ಬಂದರು. ಇವರು ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಅವರನ್ನು ಎದುರಿಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.