![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Apr 17, 2024, 1:40 AM IST
ಕೋಲ್ಕತಾ: ಇಂಗ್ಲೆಂಡಿನ ಆಟಗಾರ ಜಾಸ್ ಬಟ್ಲರ್ ಅವರ ಅದ್ಭುತ ಆಟದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡವು ಮಂಗಳವಾರದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎರಡು ವಿಕೆಟ್‌ಗಳಿಂದ ರೋಮಾಂಚಕವಾಗಿ ಸೋಲಿಸಿತು. ಇದು ಐಪಿಎಲ್‌ನಲ್ಲಿ ರನ್ ಚೇಸ್ ವೇಳೆ ದಾಖಲಾದ ಬೃಹತ್ ಗೆಲುವು ಆಗಿದೆ.
ಸುನೀಲ್ ನಾರಾಯಣ್ ಅವರ ಸ್ಫೋಟಕ ಶತಕದಿಂದಾಗಿ ಕೋಲ್ಕತಾ ನೈಟ್‌ರೈಡರ್ ತಂಡವು 6 ವಿಕೆಟಿಗೆ 223 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕುತ್ತವಾಗಿ ಜಾಸ್ ಬಟ್ಲರ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ತಂಡಕ್ಕೆ ಸ್ಮರಣೀಯ ತಂದುಕೊಟ್ಟರು.
ಏಕಾಂಗಿಯಾಗಿ ಹೋರಾಡಿದ ಬಟ್ಲರ್ ಅಂತಿಮ ಎಸೆತದಲ್ಲಿ ವಿಜಯದ ರನ್ ಬಾರಿಸುವ ಮೊದಲು ಒಟ್ಟಾರೆ 60 ಎಸೆತ ಎದುರಿಸಿದ್ದು 9 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 107 ರನ್ ಗಳಿಸಿ ಅಜೇಯರಾಗಿ ಉಳಿದರು. ಬಟ್ಲರ್ ಅವರ ಈ ಶತಕ ವೈಭವದಿಂದಾಗಿ ಸುನೀಲ್ ನಾರಾಯಣ್ ಅವರ ಸಾಧನೆ ವ್ಯರ್ಥವಾಯಿತು.
ಬೌಂಡರಿ, ಸಿಕ್ಸರ್‌ಗಳ ಸುರಿಮಳೆ
17ನೇ ಓವರ್ ತನಕ ಕ್ರೀಸ್ ಆಕ್ರ ಮಿಸಿಕೊಂಡ ನಾರಾಯಣ್ ರಾಜಸ್ಥಾನ್ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು. “ಈಡನ್ ಗಾರ್ಡನ್ಸ್’ ತುಂಬೆಲ್ಲ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಯಾಯಿತು. ಕಿಕ್ಕಿರಿದು ನೆರೆದ ಈಡನ್ ವೀಕ್ಷಕರಿಗೆ ಭರಪೂರ ರಂಜನೆ ಲಭಿಸಿತು. ಕೆರಿಬಿಯನ್ ಕ್ರಿಕೆಟಿಗನ ಗಳಿಕೆ 56 ಎಸೆತಗಳಿಂದ 109 ರನ್.
ಇದು ಐಪಿಎಲ್‌ನಲ್ಲಿ ಸುನೀಲ್ ನಾರಾಯಣ್ ಬಾರಿಸಿದ ಮೊದಲ ಶತಕ. ಹಾಗೆಯೇ ಕೆಕೆಆರ್ ಪರ ದಾಖಲಾದ 3ನೇ ಸೆಂಚುರಿ. ಉಳಿದಿಬ್ಬರೆಂದರೆ ಬ್ರೆಂಡನ್ ಮೆಕಲಮ್ (ಅಜೇಯ 158) ಮತ್ತು ವೆಂಕಟೇಶ್ ಅಯ್ಯರ್ (104).
ಲಕ್ನೋ ಎದುರಿನ ಗೆಲುವಿನ ರೂವಾರಿ ಫಿಲಿಪ್ ಸಾಲ್ಟ್ ಇಲ್ಲಿ ಯಶಸ್ಸು ಕಾಣಲಿಲ್ಲ. ಕೇವಲ 10 ರನ್ ನೀಡಿ ಆವೇಶ್ ಖಾನ್‌ಗೆ ರಿಟರ್ನ್ ಕ್ಯಾಚ್ ನೀಡಿ ವಾಪಸಾದರು. ಹೀಗಾಗಿ ಕೆಕೆಆರ್ ಆರಂಭ ನಿಧಾನಗೊಂಡಿತು. ಮೊದಲ 4 ಓವರ್‌ಗಳಲ್ಲಿ ಕೇವಲ 26 ರನ್ ಬಂತು. ಆದರೆ ಸುನೀಲ್ ನಾರಾಯಣ್ ಮತ್ತು ಅಂಗ್‌ಕೃಷ್ ರಘುವಂಶಿ ಲಯ ಕಂಡುಕೊಂಡ ಕಾರಣ ಮುಂದಿನ 2 ಓವರ್‌ಗಳಲ್ಲಿ 30 ರನ್ ಹರಿದು ಬಂತು. ಪವರ್ ಪ್ಲೇಯಲ್ಲಿ ಕೋಲ್ಕತಾ ಒಂದು ವಿಕೆಟಿಗೆ 56 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಜೋಡಿಯಿಂದ 2ನೇ ವಿಕೆಟಿಗೆ 85 ರನ್ ಒಟ್ಟುಗೂಡಿತು. ರಘುವಂಶಿ ಕೊಡುಗೆ 18 ಎಸೆತಗಳಿಂದ 30 ರನ್ (5 ಬೌಂಡರಿ).
ನಾಯಕ ಶ್ರೇಯಸ್ ಅಯ್ಯರ್ (11), ಆ್ಯಂಡ್ರೆ ರಸೆಲ್ (13) ಕ್ಲಿಕ್ ಆಗಲಿಲ್ಲ. ಆದರೆ ಸುನೀಲ್ ನಾರಾಯಣ್ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದರಿಂದ ರನ್ ಪ್ರವಾಹಕ್ಕೇನೂ ಕೊರತೆ ಉಂಟಾಗಲಿಲ್ಲ. ರಿಂಕು ಸಿಂಗ್ 20 ರನ್ ಮಾಡಿ ಅಜೇಯರಾಗಿ ಉಳಿದರು.
ಅಶ್ವಿನ್, ಬಟ್ಲರ್ ಆಗಮನ
ಸಂಪೂರ್ಣ ಫಿಟ್‌ನೆಸ್ ಹೊಂದಿದ ರಾಜಸ್ಥಾನ್ ಆಟಗಾರರಾದ ಜಾಸ್ ಬಟ್ಲರ್ ಮತ್ತು ಆರ್. ಅಶ್ವಿನ್ ಈ ಪಂದ್ಯಕ್ಕೆಮರಳಿದರು. ಅಶ್ವಿನ್ ಆಡುವ ಬಳಗದಲ್ಲಿದ್ದಾರೆ.
ಸ್ಕೋರ್ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಫಿಲಿಪ್ ಸಾಲ್ಟ್ ಸಿ ಮತ್ತು ಬಿ ಆವೇಶ್ 10
ಸುನೀಲ್ ನಾರಾಯಣ್ ಬಿ ಬೌಲ್ಟ್ 109
ಎ. ರಘುವಂಶಿ ಸಿ ಅಶ್ವಿನ್ ಬಿ ಕುಲ್ದೀಪ್ 30
ಶ್ರೇಯಸ್ ಅಯ್ಯರ್ ಎಲ್‌ಬಿಡಬ್ಲ್ಯು ಚಹಲ್ 11
ಆ್ಯಂಡ್ರೆ ರಸೆಲ್ ಸಿ ಜುರೆಲ್ ಬಿ ಆವೇಶ್ 13
ರಿಂಕು ಸಿಂಗ್ ಔಟಾಗದೆ 20
ವೆಂಕಟೇಶ್ ಅಯ್ಯರ್ ಸಿ ಜುರೆಲ್ ಬಿ ಕುಲ್ದೀಪ್ 8
ರಮಣ್‌ದೀಪ್ ಸಿಂಗ್ ಔಟಾಗದೆ 1
ಇತರ 21
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 223
ವಿಕೆಟ್ ಪತನ: 1-21, 2-106, 3-133, 4-184, 5-195, 6-215.
ಬೌಲಿಂಗ್: ಟ್ರೆಂಟ್ ಬೌಲ್ಟ್ 4-0-31-1
ಆವೇಶ್ ಖಾನ್ 4-0-35-2
ಕುಲ್ದೀಪ್ ಸೇನ್ 4-0-46-2
ಯಜುವೇಂದ್ರ ಚಹಲ್ 4-0-54-1
ಆರ್. ಅಶ್ವಿನ್ 4-0-49-0
ರಾಜಸ್ಥಾನ್ ರಾಯಲ್ಸ್
ಯಶಸ್ವಿ ಜೈಸ್ವಾಲ್ ಸಿ ಅಯ್ಯರ್ ಬಿ ಅರೋರ 19
ಜಾಸ್ ಬಟ್ಲರ್ ಔಟಾಗದೆ 107
ಸಂಜು ಸ್ಯಾಮ್ಸನ್ ಸಿ ಸುನೀಲ್ ಬಿ ರಾಣಾ 12
ರಿಯಾನ್ ಪರಾಗ್ ಸಿ ರಸೆಲ್ ಬಿ ರಾಣಾ 34
ಧ್ರುವ್ ಜುರೆಲ್ ಎಲ್‌ಬಿಡಬ್ಲ್ಯು ಬಿ ನಾರಾಯಣ್ 2
ಆರ್, ಅಶ್ವಿನ್ ಸಿ ರಘುವಂಶಿ ಬಿ ವರುಣ್ 8
ಶಿಮ್ರಾನ್ ಹೆಟ್‌ಮೈರ್ ಬಿ ಅಯ್ಯರ್ ಬಿ ವರುಣ್ 0
ರೋವ¾ನ್ ಪೊವೆಲ್ ಎಲ್‌ಬಿಡಬ್ಲ್ಯು ಬಿ ಸುನೀಲ್ 26
ಟ್ರೆಂಟ್ ಬೌಲ್ಟ್ ರನೌಟ್ 0
ಆವೇಶ್ ಖಾಖ್ ಔಟಾಗದೆ 0
ಇತರ: 16
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 224
ವಿಕೆಟ್ ಪತನ: 1-22, 2-47, 3-97, 4-100, 5-121, 6-121, 7-178, 8-186
ಬೌಲಿಂಗ್: ಮಿಚೆಲ್ ಸ್ಟಾರ್ಕ್ 4-0-50-0
ವೈಭವ್ ಅರೋರ 3-0-45-1
ಹರ್ಷಿತ್ ರಾಣಾ 4-0-45-2
ಸುನೀಲ್ ನಾರಾಯಣ್ 4-0-30-2
ವರುಣ್ ಚಕವರ್ತಿ 4-0-36-2
ಆ್ಯಂಡ್ರೆ ರಸೆಲ್ 1-0-17-0
ಪಂದ್ಯಶ್ರೇಷ್ಠ: ಜಾಸ್ ಬಟ್ಲರ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.