ಬಂಗಾಲ ಕ್ರಿಕೆಟಿಗರ ಡ್ರೆಸ್ಸಿಂಗ್ ಕೊಠಡಿಗೆ ರಾಷ್ಟ್ರೀಯ ಆಯ್ಕೆಗಾರ ಅಕ್ರಮ ಪ್ರವೇಶ?
Team Udayavani, Dec 26, 2019, 11:15 PM IST
ಕೋಲ್ಕತಾ: ರಾಷ್ಟ್ರೀಯ ಆಯ್ಕೆಗಾರ ದೇವಾಂಗ್ ಗಾಂಧಿ ಅವರನ್ನು ಬಂಗಾಲ ರಣಜಿ ತಂಡದ ಡ್ರೆಸ್ಸಿಂಗ್ ಕೊಠಡಿಯಿಂದ ಹೊರಗಟ್ಟಿದ ಪ್ರಕರಣ ನಡೆದಿದೆ.
ಗುರುವಾರ ಕೋಲ್ಕತಾದ ಈಡನ್‌ಗಾರ್ಡನ್ ಕ್ರೀಡಾಂಗಣದಲ್ಲಿ ಬಂಗಾಲ- ಆಂಧ್ರಪ್ರದೇಶ ತಂಡಗಳ ನಡುವಿನ ರಣಜಿ ಪಂದ್ಯದ 2ನೇ ದಿನದ ಆಟದ ವೇಳೆ ಘಟನೆ ಸಂಭವಿಸಿದೆ. ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಆಗ್ರಹದ ಮೇಲೆ ಬಿಸಿಸಿಐ ಭ್ರಷ್ಟಾ ಚಾರ ತನಿಖಾ ತಂಡದ ಅಧಿಕಾರಿಗಳು ದೇವಾಂಗ್ ಗಾಂಧಿ ಅವರನ್ನು ಡ್ರೆಸ್ಸಿಂಗ್ ಕೊಠಡಿಯಿಂದ ಹೊರ ಹೋಗುವಂತೆ ಸೂಚಿಸಿದರು.
ಅನವಶ್ಯಕವಾಗಿ ವಿಷಯವನ್ನು ದೊಡ್ಡದು ಮಾಡಲಾಗಿದೆ. ಇದರಿಂದಾಗಿ ಬಂಗಾಲ ಕ್ರಿಕೆಟ್ ಬಾಂಧವ್ಯಕ್ಕೆ ಹಿನ್ನಡೆಯಾಗಿದೆ ಎಂದು ದೇವಾಂಗ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಏನಿದು ಘಟನೆ?
ಗುರುವಾರದ ಆಟದ ವೇಳೆ ಮಂದ ಬೆಳಕಿನ ಕಾರಣ ಸ್ವಲ್ಪ ಹೊತ್ತು ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಬಂಗಾಲ ತಂಡದ ಫಿಸಿಯೋ ಅವರನ್ನು ಭೇಟಿಯಾಗಲು ತಂಡದ ಡ್ರೆಸ್ಸಿಂಗ್ ಕೊಠಡಿಗೆ ದೇವಾಂಗ್ ಗಾಂಧಿ ಆಗಮಿಸಿದ್ದರು. ಮಾಜಿ ನಾಯಕ ಮನೋಜ್ ತಿವಾರಿ ಇದನ್ನು ಬಿಸಿಸಿಐ ಭ್ರಷ್ಟಾಚಾರ ತನಿಖಾ ಅಧಿಕಾರಿ ಸೌಮನ್ ಕರ್ಮಾಕರ್ ಗಮನಕ್ಕೆ ತಂದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಕರ್ಮಾಕರ್ ಡ್ರೆಸ್ಸಿಂಗ್ ಕೊಠಡಿಯಿಂದ ಹೊರಹೋಗುವಂತೆ ಗಾಂಧಿಗೆ ಸೂಚಿಸಿದ್ದಾರೆ.
“ನಾವು ಭ್ರಷ್ಟಾಚಾರ ವಿರೋಧಿ ಶಿಷ್ಟಾಚಾರ ವನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ. ಅನುಮತಿ ಇಲ್ಲದೆ ರಾಷ್ಟ್ರೀಯ ಆಯ್ಕೆಗಾರ ಡೆಸ್ಸಿಂಗ್ ಕೊಠಡಿ ಪ್ರವೇಶಿಸುವಂತಿಲ್ಲ. ಆಟಗಾರರು, ಅಧಿಕಾರಿಗಳು ಮಾತ್ರ ಡ್ರೆಸ್ಸಿಂಗ್ ಕೊಠಡಿಯಲ್ಲಿರುವ ಅಧಿಕಾರ’ ಎಂದು ಮನೋಜ್ ತಿವಾರಿ ತಿಳಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಗಾಂಧಿ, “ಬಂಗಾಲ ಕೋಚ್ ಅರುಣ್‌ಲಾಲ್ ಆಹ್ವಾ ನದ ಮೇಲೆ ಹೋಗಿದ್ದೆ. ನನಗೆ ಬೆನ್ನು ನೋವಿದೆ. ಹೀಗಾಗಿ ತಂಡದ ಫಿಸಿಯೋ ಅವರನ್ನು ಭೇಟಿಯಾಗಲು ಬಯಸಿದ್ದೆ. ಇದ ಕ್ಕಾಗಿ ಅವರ ಅನುಮತಿ ಕೂಡ ಪಡೆದಿದ್ದೆ. ಆದರೆ ಮನೋಜ್ ತಿವಾರಿ ಇದನ್ನೇ ದೊಡ್ಡ ವಿಷಯ ಮಾಡಿಬಿಟ್ಟರು’ ಎಂದಿದ್ದಾರೆ.
ಇಲ್ಲಿ ನೀತಿಸಂಹಿತೆ ಉಲ್ಲಂಘನೆ ಆಗಿಲ್ಲ ಎಂಬುದು ಬಂಗಾಲ ಕ್ರಿಕೆಟ್ ಮಂಡಳಿಯ ಹೇಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.