National Swimming: ಕರ್ನಾಟಕ ಚಾಂಪಿಯನ್
17 ಚಿನ್ನ ಸೇರಿದಂತೆ 33 ಪದಕ ಗೆದ್ದ ಕರ್ನಾಟಕ
Team Udayavani, Sep 13, 2024, 10:50 PM IST
ಮಂಗಳೂರು: ಭಾರತೀಯ ಈಜು ಒಕ್ಕೂಟ (SFI) ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಎಮ್ಮೆ ಕೆರೆ ಅಂತಾರಾಷ್ಟ್ರೀಯ ಈಜುಕೊಳ ದಲ್ಲಿ ಆಯೋಜಿಸಲಾದ 4 ದಿನಗಳ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾ ಟಕ ತಂಡ ಅಗ್ರಸ್ಥಾನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕರ್ನಾಟಕ 17 ಚಿನ್ನದ ಪದಕ ಸಹಿತ ಒಟ್ಟು 33 ಪದಕಗಳನ್ನು ಜಯಿಸಿತು. 6 ಚಿನ್ನ ಸಹಿತ 22 ಪದಕ ಗೆದ್ದ ಮಹಾರಾಷ್ಟ್ರ ದ್ವಿತೀಯ, 19 ಪದಕ ಗೆದ್ದ ಆರ್‌ಎಸ್‌ಪಿಬಿ ತೃತೀಯ, 14 ಪದಕ ಗೆದ್ದಿರುವ ತಮಿಳುನಾಡು ನಾಲ್ಕನೇ ಸ್ಥಾನ ಪಡೆಯಿತು. ಉಳಿದಂತೆ ಎಸ್‌ಎಸ್‌ಸಿಬಿ 7, ತೆಲಂಗಾಣ ಮತ್ತು ಒಡಿಶಾ 6; ಬಿಹಾರ, ಪಶ್ಚಿಮ ಬಂಗಾಲ, ಆಂಧ್ರ ಪ್ರದೇಶ, ಹೊಸದಿಲ್ಲಿ ತಲಾ 3; ಪಂಜಾಬ್ ಮತ್ತು ರಾಜಸ್ಥಾನ 2, ಹರಿಯಾಣ, ಗುಜರಾತ್, ಜಾರ್ಖಂಡ್ ತಲಾ ಒಂದು ಪದಕ ಪಡೆದಿವೆ.
ಪುರುಷರ ವಿಭಾಗದಲ್ಲಿ ಕರ್ನಾಟಕದ ಅನೀಶ್ ಎಸ್. ಗೌಡ (4 ಚಿನ್ನ) ಹಾಗೂ ಮಹಿಳಾ ವಿಭಾಗದಲ್ಲಿ ಕರ್ನಾಟಕದವರೇ ಆದ ಹಾಶಿಕಾ ರಾಮಚಂದ್ರ (3 ಚಿನ್ನ, 1 ಬೆಳ್ಳಿ) ವೈಯುಕ್ತಿಕ ಚಾಪಿಯನ್ ಪಡೆದುಕೊಂಡಿದ್ದಾರೆ.
4×100 ಫ್ರೀಸ್ಟೆ çಲ್ ವಿಭಾಗದಲ್ಲಿ ಕರ್ನಾಟಕ ತಂಡ ದಾಖಲೆ ನಿರ್ಮಿಸಿದೆ. ಪೃಥ್ವಿ ಎಂ., ಕಾರ್ತಿಕೇಯನ್ ನಾಯರ್, ಆಕಾಶ್ ಮಣಿ ಹಾಗೂ ಶ್ರೀಹರಿ ನಟರಾಜ್ ಅವರು 3:28.09 ನಿಮಿಷದಲ್ಲಿ ಪೂರ್ಣಗೊಳಿಸುವ ಮೂಲಕ 2023ರ ತಮ್ಮದೇ ದಾಖಲೆಯನ್ನು ಹಿಂದಿಕ್ಕಿದರು.
ಪುರುಷರ 400 ಮೀ. ಮೆಡ್ಲೆ ವಿಭಾಗದಲ್ಲಿ ರಾಜಸ್ಥಾನದ ಯುಗ್ ಚೆಲನಿ 4:36.39 ನಿಮಿಷಗಳ ಸಾಧನೆಯೊಂದಿಗೆ ಪ್ರಥಮ ಸ್ಥಾನಿಯಾದರು. ಪುರುಷರ 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕರ್ನಾಟಕದ ಅನೀಶ್ ಎಸ್. ಗೌಡ ಪ್ರಥಮ ಸ್ಥಾನ (1:52.09) ಪಡೆದರು. 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ವಿದಿತ್ ಎಸ್. ಶಂಕರ್ ಪ್ರಥಮ (1:02.75) ಸ್ಥಾನ ಪಡೆದುಕೊಂಡಿದ್ದಾರೆ.
ಮಹಿಳೆಯರ 400 ಮೀ. ಮೆಡ್ಲೆಯಲ್ಲಿ ಕರ್ನಾಟಕದ ತಾನ್ಯಾ ಷಡಕ್ಷರ್ ಪ್ರಥಮ ಸ್ಥಾನಿಯಾದರು (5:08.10). ಮಹಿಳೆಯರ 200 ಮೀ. ಫ್ರಿಸ್ಟೈಲ್‌ನಲ್ಲಿ ಹಶಿಕಾ ರಾಮಚಂದ್ರ ಪ್ರಥಮ ಸ್ಥಾನ (2:06.49) ಅಲಂಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.