ರಾಷ್ಟ್ರೀಯ ವೇಟ್‌ಲಿಫ್ಟಿಂಗ್: ರೈಲ್ವೇಸ್‌ಗೆ ಸಮಗ್ರ ಪ್ರಶಸ್ತಿ
Team Udayavani, Jan 26, 2018, 9:59 AM IST
ಮೂಡಬಿದಿರೆ: ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆದ ಪುರುಷರ ವಿಭಾಗದ 70ನೇ ಮತ್ತು ಮಹಿಳೆಯರ ವಿಭಾಗದ 33ನೇ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಕೂಟದಲ್ಲಿ ರೈಲ್ವೇ ಸ್ಪೋರ್ಟ್ಸ್ ಪ್ರೊಮೋಶನ್ ಬೋರ್ಡ್‌ನ ಪುರುಷರು ಮತ್ತು ಮಹಿಳೆಯರ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿವೆ.
ಇಂಡಿಯನ್ ವೇಯ್ ಲಿಫ್ಟಿಂಗ್ ಫೆಡರೇಶನ್ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ ಎಸೋಸಿಯೇಶನ್, ದ.ಕ. ಜಿಲ್ಲಾ ವೇಯ್rಲಿಫ್ಟರ್ ಅಸೋಸಿಯೇಶನ್ ಆತಿಥೇಯತ್ವದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಂಘಟಿಸಿದ ಈ ಕೂಟದಲ್ಲಿ 63 ಕೆಜಿ ವಿಭಾಗದ ಸ್ಪರ್ಧಾಳು ರೈಲ್ವೇಸ್‌ನ ರಾಖೀ ಹಲೆªàರ್ ಮಹಿಳಾ ವಿಭಾಗದಲ್ಲಿ ಮತ್ತು ಪುರುಷರ 77 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಸರ್ವೀಸಸ್ ನ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ನ ಅಜಯ್ ಸಿಂಗ್ ಬೆಸ್ಟ್ ಲಿಫ್ಟರ್ ಪ್ರಶಸ್ತಿ ಗೆದ್ದಿದ್ದಾರೆ. ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ರಾಖೀ ಹಲೆªàರ್ ಅವರು 128 ಅಂಕ ಗಳಿಸಿ, ಈ ಹಿಂದೆ ಇದೇ ವಿಭಾಗದಲ್ಲಿ 127 ಅಂಕ ಗಳಿಸಿದ್ದ ಕರ್ಣಂ ಮಲ್ಲೇಶ್ವರಿ ಅವರ ದಾಖಲೆಯನ್ನು ಹಿಮ್ಮೆಟ್ಟಿಸಿದ್ದರು.
ಪುರುಷರ 105 ಕೆ.ಜಿ.ವಿಭಾಗದಲ್ಲಿ ರೈಲ್ವೇಸ್‌ನ ಗುರುದೀಪ್ ಸಿಂಗ್ ಸ್ನ್ಯಾಚ್‌ನಲ್ಲಿ ತಮ್ಮದೇ ದಾಖಲೆಯನ್ನು 172 ಕೆ.ಜಿ.ಯಿಂದ 173ಕ್ಕೆ ಏರಿಸಿಕೊಂಡಿದ್ದು , ಕ್ಲೀನ್ ಆ್ಯಂಡ್ ಜರ್ಕ್‌ನಲ್ಲೂ ತಮ್ಮ ದಾಖಲೆಯನ್ನು 216 ಕೆ.ಜಿ.ಯಿಂದ 217ಕ್ಕೆ ವಿಸ್ತರಿಸಿದರು. 2 ನೂತನ ದಾಖಲೆಗಳೊಂದಿಗೆ ಒಟ್ಟು 390 ಅಂಕ ಗಳಿಸಿ ಅಗ್ರಸ್ಥಾನಿಯಾದರು.
ರನ್ನರ್ ಅಪ್: ಪುರುಷರಲ್ಲಿ ಸರ್ವೀಸಸ್ ನ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ತಂಡ 569 ಅಂಕಗಳೊಂದಿಗೆ ಹಾಗೂ ಮಹಿಳೆಯರಲ್ಲಿ ಆಲ್ ಇಂಡಿಯಾ ಪೊಲೀಸ್ ನ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ 584 ಅಂಕಗಳೊಂದಿಗೆ ರನ್ನರ್‌ಅಪ್ ತಂಡ ಪ್ರಶಸ್ತಿ ಗಳಿಸಿವೆ.
ಅಂತಾರಾಜ್ಯ ವಿಭಾಗದ ಪುರುಷರಲ್ಲಿ ತಮಿಳುಡು (155) ತಂಡ ಚಾಂಪಿಯನ್‌ಶಿಪ್ ಗಳಿಸಿದೆ. ಮಹಾರಾಷ್ಟ್ರ ತಂಡ (128) ರನ್ನರ್‌ಅಪ್ ಪ್ರಶಸ್ತಿ ಪಡೆದಿದೆ. ಮಹಿಳಾ ವಿಭಾಗದಲ್ಲಿ ಆಂಧ್ರಪ್ರದೇಶ (174) ತಂಡ ಚಾಂಪಿಯನ್‌ಶಿಪ್, ಮಣಿಪುರ (153) ರನ್ನರ್ ಅಪ್ ಸ್ಥಾನ ಗಳಿಸಿವೆ. ಮಹಿಳೆಯರ 105 ಕೆ.ಜಿ. ವಿಭಾಗದಲ್ಲಿ ಕರ್ನಾಟಕದ ಕಾಂಚನಾ ಬಿ.ಎನ್. ಚಿನ್ನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಬಹುಮಾನ ವಿತರಣೆ: ಶಾಸಕ, ಮಾಜಿ ಕ್ರೀಡಾ ಸಚಿವ ಕೆ. ಅಭಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಒಲಿಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತ ಸತೀಶ್ ರೈ ಅವರು ಬಹುಮಾನ ವಿತರಿಸಿದರು. ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಡಿ. ಚಂದ್ರಹಾಸ ರೈ, ಇಂಡಿಯನ್ ವೇಟ್‌ಲಿಫ್ಟಿಂಗ್ ಫೆಡರೇಶನ್‌ನ ಪ್ರ. ಕಾರ್ಯದರ್ಶಿ ಸಹದೇವ ಯಾದವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಆಳ್ವಾಸ್‌ನ ಅಯನಾ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.