ಮಣಿಪಾಲ ಮ್ಯಾರಥಾನ್‌ ಆಳ್ವಾಸ್‌ ಮೇಲುಗೈ ನವೀನ್‌, ಕಿರಣ್‌ಗೆ ಪ್ರಶಸ್ತಿ

Team Udayavani, Mar 6, 2017, 10:49 AM IST

06-sp-1.jpg

ಉಡುಪಿ: ಮಣಿಪಾಲ ವಿ.ವಿ. ಮತ್ತು ಉಡುಪಿ ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಅಸೋಸಿಯೇಶನ್‌ನ ಸಹಯೋಗದಲ್ಲಿ ಮಾ. 5ರ ಬೆಳಗ್ಗೆ ಮಣಿಪಾಲದಲ್ಲಿ ನಡೆದ ಮಣಿಪಾಲ್‌ ಮ್ಯಾರಥಾನ್‌ನಲ್ಲಿ ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಓಟಗಾರರು ಹೆಚ್ಚಿನ ಪ್ರಶಸ್ತಿ ಪಡೆದುಕೊಂಡರು.
ಮಣಿಪಾಲ ಕೆಎಂಸಿ ಗ್ರೀನ್ಸ್‌ನಿಂದ ಮ್ಯಾರಥಾನ್‌ ಪ್ರಾರಂಭಗೊಂಡು ಅಲ್ಲಿಯೇ ಸಮಾಪನಗೊಂಡಿತು. ದೇಶ, ವಿದೇಶದ ಮಂದಿ ಸಹಿತ ಉಭಯ ಜಿಲ್ಲಾ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹೀಗೆ 6,000ಕ್ಕೂ ಅಧಿಕ ಮಂದಿ ಓಟದಲ್ಲಿ ಪಾಲ್ಗೊಂಡರು. 

ಏಶ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದ ಆಳ್ವಾಸ್‌ನ ನವೀನ್‌ ದಗರ್‌ ಅವರು 21.1 ಕಿ.ಮೀ. ಮ್ಯಾರಥಾನ್‌ನಲ್ಲಿ ಪ್ರಥಮ ಸ್ಥಾನ ಪಡೆದರು. ಮಹಿಳೆಯರ ಹಾಫ್ ಮ್ಯಾರಥಾನ್‌ನಲ್ಲಿ ಆಳ್ವಾಸ್‌ನ ಕಿರಣ್‌ ಜಿತುರ್‌ ಪಂಜಾಬ್‌ ಅವರು ಪ್ರಶಸ್ತಿ ಗೆದ್ದರು. ಅವರಿಬ್ಬರು ತಲಾ 70 ಸಾವಿರ ರೂ. ನಗದು ಬಹುಮಾನ ಪಡೆದರು. ಹಾಫ್ ಮ್ಯಾರಥಾನ್‌ನಲ್ಲಿ ಮಹಿಳೆಯರಲ್ಲಿ ಪ್ರಥಮ, ದ್ವಿತೀಯ ಹಾಗೂ ಪುರುಷರಲ್ಲಿ ಮೊದಲ ಮೂರು ಸ್ಥಾನಗಳ ಸಹಿತ ಹೆಚ್ಚಿನ ಪ್ರಶಸ್ತಿಯನ್ನು ಆಳ್ವಾಸ್‌ನವರೇ ಪಡೆದುಕೊಂಡರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಮಣಿಪಾಲ ವಿವಿಯ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಡಾ| ಎಚ್‌. ವಿನೋದ್‌ ಭಟ್‌, ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಸಹಕುಲಪತಿ ಸುರೇಂದ್ರ ವಿ. ಶೆಟ್ಟಿ, ಪೊಲೀಸ್‌ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ಸಿಂಡಿಕೇಟ್‌ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌.ಎಸ್‌. ಮಲ್ಲಿಕಾರ್ಜುನ ರಾವ್‌, ಜನರಲ್‌ ಮ್ಯಾನೇಜರ್‌ಗಳಾದ ಕೆ.ಟಿ. ರೈ, ಅಜಯ್‌ ಶರ್ಮಾ, ಫೀಲ್ಡ್‌ ಜನರಲ್‌ ಮ್ಯಾನೇಜರ್‌ ಸತೀಶ್‌ ಕಾಮತ್‌, ಅದಾನಿ ಯುಪಿಸಿಎಲ್‌ ಜಂಟಿ ನಿರ್ದೇಶಕ ಕಿಶೋರ್‌ ಆಳ್ವ, ಜಿಲ್ಲಾ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಅಧ್ಯಕ್ಷ ಅಶೋಕ್‌ ಅಡ್ಯಂತಾಯ, ಕಾರ್ಯಾಧ್ಯಕ್ಷ ರಘುರಾಮ ನಾಯಕ್‌, ಉದ್ಯಮಿ ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಮಣಿಪಾಲ ಎಂಐಟಿಯ ಬಿ.ಎಚ್‌.ವಿ. ಪೈ, ನಿರ್ದೇಶಕ ಡಾ| ಜಿ.ಕೆ. ಪ್ರಭು, ಸಂಘಟಕ ಗಿರೀಶ್‌ ಮೆನನ್‌, ಮ್ಯಾರಥಾನ್‌ ಸಮಿತಿ ಕಾರ್ಯದರ್ಶಿ ಡಾ| ವಿನೋದ್‌ ಸಿ. ನಾಯಕ್‌ ಉಪಸ್ಥಿತರಿದ್ದರು. ಮ್ಯಾರಥಾನ್‌ ಸಮಿ ಅಧ್ಯಕ್ಷ ಕೆ. ರಘುಪತಿ ಭಟ್‌ ಸ್ವಾಗತಿಸಿದರು.

ಬಹುಮಾನಿತರ ವಿವರ 
ಪುರುಷರ ಹಾಫ್ ಮ್ಯಾರಥಾನ್‌ನಲ್ಲಿ ನವೀನ್‌ ಪ್ರಥಮವಾದರೆ ರಂಜೀತ್‌ ಸಿಂಗ್‌ (ದ್ವಿ), ಸಂತೋಷ್‌ (ತೃ) ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಕಿರಣ್‌ ಜಿತುರ್‌ ಪ್ರಥಮವಾದರೆ ತಿಪ್ಪವ್ವ ಸಣ್ಣಕ್ಕಿ (ದ್ವಿ), ಅರ್ಚನಾ (ತೃ) ಸ್ಥಾನ ಪಡೆದರು. 

10 ಕಿ.ಮೀ.ನಲ್ಲಿ ಮಮತಾ ವಾರಾಣಸಿ (ಪ್ರ), ಸುಪ್ರೀತಾ (ದ್ವಿ), ದೀಕ್ಷಾ (ತೃ). ಪುರುಷರ ವಿಭಾಗದಲ್ಲಿ ಪ್ರವೀಣ್‌ ಖಂಬಲ್‌ (ಪ್ರ), ವಿಜಯ್‌ (ದ್ವಿ), ಚೇತನ್‌ ಜಿ.ಜೆ. (ತೃ), 10 ಕಿ.ಮೀ. ಸೀನಿಯರ್‌ ಮಹಿಳಾ ವಿಭಾಗದಲ್ಲಿ ಯೂಲಿಯಾ (ಪ್ರ), ರೇಖಾ (ದ್ವಿ), ಪ್ರಮೀಳಾ (ತೃ). ಪುರುಷರ ವಿಭಾಗದಲ್ಲಿ ಶಂಕರ್‌ (ಪ್ರ), ವಿಶ್ವನಾಥ ಕೋಟ್ಯಾನ್‌ (ದ್ವಿ) ಮತ್ತು ದಿವಾಕರ್‌ (ತೃ) ಬಹುಮಾನ ಪಡೆದರು. 

5 ಕಿ.ಮೀ. ಮುಕ್ತ ವಿಭಾಗದಲ್ಲಿ ಚಿದಾನಂದ ನಿಟ್ಟೆ (ಪ್ರ), ಅನಿಲ್‌ ಕುಮಾರ್‌ (ದ್ವಿ), ಬಸವರಾಜ್‌ ಉಡುಪಿ (ತೃ), ಮಹಿಳಾ ವಿಭಾಗ ಸುಮಾ ನಿಟ್ಟೆ (ಪ್ರ), ಭೂಮಿಕಾ ನಿಟ್ಟೆ (ದ್ವಿ), ಮಂಜುಳಾ ವಿ.ಎಚ್‌. ನಿಟ್ಟೆ (ತೃ). ಹಿರಿಯರ ವಿಭಾಗದಲ್ಲಿ ಅರುಣಕಲಾ ರಾವ್‌ ಬೊಮ್ಮರಬೆಟ್ಟು (ಪ್ರ), ಲಲಿತಾ ನಾಯಕ್‌ (ದ್ವಿ), ಬಬಿತಾ (ತೃ), ಪುರುಷರಲ್ಲಿ ಹೊಸೂರು ಉದಯ ಕುಮಾರ್‌ ಶೆಟ್ಟಿ (ಪ್ರ), ಮಾಧವ (ದ್ವಿ), ಓಂಶಿವ ಕೋಟ್ಯಾನ್‌ (ತೃ) ಹಾಗೂ ಮಕ್ಕಳ ವಿಭಾಗದಲ್ಲಿ ಹಲವರು ಪ್ರಶಸ್ತಿ ಪಡೆದುಕೊಂಡರು.

ಟಾಪ್ ನ್ಯೂಸ್

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

1-eeeeega

Iga Swiatek doping ban ; ತಿಂಗಳ ನಿಷೇಧಕ್ಕೆ ಒಪ್ಪಿಗೆ

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

BJP: ಅಶಿಸ್ತಿನ ವಿರುದ್ಧ ಹೈಕಮಾಂಡ್‌ ಕ್ರಮ ಕೈಗೊಳ್ಳಲಿ: ಡಿವಿಎಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.