ತನ್ವೀರ್ ಅಮೆರಿಕದಿಂದ ಗಡೀಪಾರು
Team Udayavani, Dec 9, 2017, 11:49 AM IST
ನ್ಯೂಯಾರ್ಕ್: ವಿಶ್ವ ಸ್ನೋ ಶೂ ಸ್ಪರ್ಧಿ, 25 ವರ್ಷದ ಕಾಶ್ಮೀರದ ತನ್ವೀರ್ ಹುಸೇನ್ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಾನು ತಪ್ಪಿತಸ್ಥ ಎಂದು ಅಮೆರಿಕದ ಎಸೆಕ್ಸ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ. ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ 10 ವರ್ಷ ಜೈಲು ಶಿಕ್ಷೆ ಪಾಲಾಗುವ ಭೀತಿಗೊಳಗಾಗಿದ್ದ ಅವರು ಸದ್ಯ ಅದರಿಂದ ಪಾರಾಗಿದ್ದು ಭಾರತಕ್ಕೆ ಗಡೀಪಾರಾಗಲಿದ್ದಾರೆ. ಹುಸೇನ್ ತಾನು ತಪ್ಪಿತಸ್ಥ, ತನ್ನನ್ನು ತಾಯ್ನಾಡಿಗೆ ಕಳುಹಿಸಿಕೊಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡ ಪರಿಣಾಮ ಗಡೀಪಾರು ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.
ಆಗಿದ್ದೇನು?: ಈ ವರ್ಷ ಫೆಬ್ರವರಿ 23ರಿಂದ 25ವರೆಗೆ ನ್ಯೂಯಾರ್ಕ್‌ನ ಸರನಾಕ್ ಲೇಕ್ ಎಂಬಲ್ಲಿ ವಿಶ್ವ ಸ್ನೋ ಶೂ ಸ್ಪರ್ಧೆಯಲ್ಲಿ ಭಾಗವಹಿಸಲು ಕಾಶ್ಮೀರದ ತನ್ವೀರ್ ಹುಸೇನ್ ತೆರಳಿದ್ದರು. ಹಿಮಾಚ್ಛಾದಿತ ಸ್ಥಳದಲ್ಲಿ ವೇಗವಾಗಿ ನಡೆಯುವುದು ಸ್ಪರ್ಧೆಯ ಗುರಿ. ಭಾರತದಿಂದ ಈ ಕೂಟದಲ್ಲಿ ಭಾಗವಹಿಸುವ ಏಕೈಕ ಸ್ಪರ್ಧಿಯಾಗಿದ್ದರಿಂದ ತನ್ವೀರ್‌ಗೆ ನ್ಯೂಯಾರ್ಕ್‌ನಲ್ಲಿ ಭಾರೀ ಗೌರವ ಸಿಕ್ಕಿತ್ತು. ಆದರೆ ಫೆ.27ರಂದು ಸೇವಕಿಯಾಗಿ ಬಂದಿದ್ದ 12 ವರ್ಷದ ಬಾಲಕಿಯ ಕೆಲವು ಭಾಗಗಳಿಗೆ ಕೈಹಾಕಿದ್ದು, ಆಕೆಯನ್ನು ಚುಂಬಿಸಿದ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಇದನ್ನು ತನ್ವೀರ್ ನಿರಾಕರಿಸಿ, ತನ್ನ ವಿರುದ್ಧ ಪಿತೂರಿ ಮಾಡಲಾಗಿದೆ, ಅದನ್ನು ಸಾಬೀತು ಮಾಡಿಯೇ ಭಾರತಕ್ಕೆ ಹಿಂತಿರುಗುತ್ತೇನೆಂದಿದ್ದರು.
ದಿನೇ ದಿನೇ ತನ್ವೀರ್ ವಿರುದ್ಧ ಆರೋಪ ತೀವ್ರವಾಗುತ್ತಲೇ ಹೋಯಿತು. ಅಪ್ರಾಪೆ¤ಯೊ ಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಆಕೆಯ ಗೌರವವನ್ನು ಹಾಳು ಮಾಡಲು ಯತ್ನಿಸಿದ ಪ್ರಕರಣದಡಿ ತನ್ವೀರ್‌ಗೆ ಹತ್ತು ವರ್ಷ ಜೈಲಾಗುವ ಸಾಧ್ಯತೆಯಿತ್ತು. ಸದ್ಯ ಅವರೇ ತಾನು ತಪ್ಪಿತಸ್ಥ ಎಂದು ಒಪ್ಪಿಕೊಂಡು, ತನ್ನನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ತಮ್ಮ ತಾಯಿ ಶಪಿರೊ ಅನಾರೋಗ್ಯ ಪೀಡಿತರಾಗಿದ್ದು, ತಾನು ಮರಳುವರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಿಲ್ಲವೆಂದು ಕುಳಿತಿದ್ದಾರೆ, ಸೋದರಿ ತಮ್ಮ ಮದುವೆಯನ್ನೇ ಮುಂದೂಡಿದ್ದಾರೆ. ಆದ್ದರಿಂದ ತಾನು ಭಾರತಕ್ಕೆ ತೆರಳಲೇಬೇಕು ಎಂದು
ತನ್ವೀರ್ ಎಸೆಕ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದನ್ನು ಗಮನಿಸಿದ ನ್ಯಾಯಾಲಯ ಅವರ ವೀಸಾ ಅವಧಿ ಆಗಸ್ಟ್‌ನಲ್ಲೇ
ಮುಗಿದಿರುವುದರಿಂದ ಭಾರತಕ್ಕೆ ಗಡೀಪಾರು ಮಾಡಲು ತೀರ್ಮಾನಿಸಿದೆ. ಆದರೆ ಇದನ್ನು ಅಲ್ಲಿನ ಸ್ಥಳೀಯ ಪತ್ರಿಕೆಗಳು ಟೀಕಿಸಿವೆ. ಸರಳವಾಗಿ ತನ್ವೀರ್ ರನ್ನು ಭಾರತಕ್ಕೆ ಮರಳಲು ಬಿಡಬಹುದಿತ್ತು. ಗಡೀಪಾರು ಪ್ರಕ್ರಿಯೆಗೆ ಇನ್ನೂ ಒಂದು ತಿಂಗಳು ಬೇಕಾಗುತ್ತದೆ ಎನ್ನುವುದು ಪತ್ರಿಕೆಗಳ ಆಕ್ಷೇಪ. ಇದೆಲ್ಲದರ ನಡುವೆ ತನ್ವೀರ್ ತಾಯಿ ಪ್ರತಿಕ್ರಿಯಿಸಿ, ತನ್ನ ಮಗಳ ಪ್ರಕರಣದಿಂದ ಬೇಸತ್ತು ತಪ್ಪಿತಸ್ಥ ಎಂದು ಒಪ್ಪಿಕೊಳ್ಳಲು ತೀರ್ಮಾನಿಸಿದ್ದಾನೆ. ಆತ ನಿರಪರಾಧಿ ಎಂದು ಸಮರ್ಥಿಸಿಕೊಂಡಿದ್ದಾನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.