T20 Worldcup: ನೆದರ್ಲೆಂಡ್ಸ್ಗೆ ಶರಣಾದ ನೇಪಾಲ
Team Udayavani, Jun 5, 2024, 11:17 PM IST
ಟೆಕ್ಸಾಸ್: ಮಳೆಯಿಂದ ಅಡಚಣೆಗೊಳಗಾಗಿ ವಿಳಂಬವಾಗಿ ಆರಂಭಗೊಂಡ “ಡಿ’ ವಿಭಾಗದ ಟಿ20 ವಿಶ್ವಕಪ್ ಪಂದ್ಯದಲ್ಲಿ ನೆದರ್ಲೆಂಡ್ಸ್ ಪಡೆ ನೇಪಾಲವನ್ನು 6 ವಿಕೆಟ್ಗಳಿಂದ ಸೋಲಿಸಿದೆ. ಆಗ 8 ಎಸೆತಗಳಷ್ಟೇ ಉಳಿದಿದ್ದವು. ಇದು ನೇಪಾಲದ ಹೋರಾಟಕ್ಕೆ ಸಾಕ್ಷಿ.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನೇಪಾಲ 19.2 ಓವರ್ಗಳಲ್ಲಿ 106 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿಯಿತು. ಬೆನ್ನಟ್ಟಿದ ನೆದರ್ಲೆಂಡ್ಸ್ ಗುರಿ ಮುಟ್ಟಲು 18.4 ಓವರ್ ತೆಗೆದುಕೊಂಡಿತು. ಸ್ಕಾಟ್ ಎಡ್ವರ್ಡ್ಸ್ ಪಡೆಯ ಸ್ಕೋರ್ 4ಕ್ಕೆ 109 ರನ್.
ಚೇಸಿಂಗ್ ವೇಳೆ ಓಪನರ್ ಮ್ಯಾಕ್ಸ್ ಓಡೌಡ್ 48 ಎಸೆತಗಳಿಂದ 54 ರನ್ ಮಾಡಿ ಅಜೇಯರಾಗಿ ಉಳಿದರು (4 ಬೌಂಡರಿ, 1 ಸಿಕ್ಸರ್). ಇದು ಟಿ20 ವಿಶ್ವಕಪ್ನಲ್ಲಿ ಓಡೌಡ್ ಬಾರಿಸಿದ 5ನೇ ಅರ್ಧ ಶತಕ ಹಾಗೂ ನೆದರ್ಲೆಂಡ್ಸ್ ಪರ ದಾಖಲೆ ಆಗಿದೆ.
16ನೇ ಓವರ್ ವೇಳೆ ನೆದರ್ಲೆಂಡ್ಸ್ 4ಕ್ಕೆ 80 ರನ್ ಮಾಡಿದ್ದಾಗ ನೇಪಾಲಕ್ಕೆ ಗೆಲುವಿನ ಕ್ಷೀಣ ನಿರೀಕ್ಷೆ ಇತ್ತು. ಆದರೆ ನೆದರ್ಲೆಂಡ್ಸ್ ಅನುಭವಕ್ಕೆ ನೇಪಾಲ ಸಾಟಿ ಯಾಗಲಿಲ್ಲ. ನೇಪಾಲ ಪರ 35 ರನ್ ಮಾಡಿದ ನಾಯಕ ರೋಹಿತ್ ಪೌದೆಲ್ ಅವರದೇ ಹೆಚ್ಚಿನ ಗಳಿಕೆ. ಟಿಮ್ ಪ್ರಿಂಗಲ್ (20ಕ್ಕೆ 3) ಮತ್ತು ಲೋಗನ್ ವಾನ್ ಬೀಕ್ (18ಕ್ಕೆ 3) ನೇಪಾಲವನ್ನು ಕಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!
BBK11: ಬಿಗ್ ಬಾಸ್ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.