ಚಾಹಲ್, ಯಾದವ್ ಎದುರಿಸಲು ಬೇರೇಯೇ ಗೇಮ್‌ಪ್ಲ್ರಾನ್ ಬೇಕು
Team Udayavani, Feb 9, 2018, 6:15 AM IST
ಕೇಪ್‌ಟೌನ್:ಭಾರತದ ಘಾತಕ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಅವರನ್ನು ಎದುರಿಸಲು ನಾವು ಬೇರೆಯೇ ಆದ ಗೇಮ್‌ಪ್ಲ್ರಾನ್ ರೂಪಿಸಬೇಕಾದ ಅಗತ್ಯವಿದೆ ಎಂಬುದಾಗಿ ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆಟಗಾರ ಜೆಪಿ ಡ್ಯುಮಿನಿ ಅಭಿಪ್ರಾಯಪಟ್ಟಿದ್ದಾರೆ. ಈವರೆಗಿನ ಮೂರೂ ಪಂದ್ಯಗಳಲ್ಲಿ ಇವರ ಸ್ಪಿನ್ ಬಲೆಗೆ ಸಿಲುಕಿದ ಆಫ್ರಿಕಾ ಈಗ ಸರಣಿ ಸೋಲಿನತ್ತ ಮುಖ ಮಾಡಿ ನಿಂತಿರುವ ಸಂದರ್ಭದಲ್ಲಿ ಡ್ಯುಮಿನಿ ಈ ಹೇಳಿಕೆ ನೀಡಿದ್ದಾರೆ.
“ಇಲ್ಲಿನ ವಾತಾವರಣ ಹಾಗೂ ಪರಿಸ್ಥಿತಿಗೆ ಏನು ಬೇಕೋ, ಎಷ್ಟು ಬೇಕೋ… ಅದನ್ನೆಲ್ಲ ಈ ಸ್ಪಿನ್ ಜೋಡಿ ಅಚ್ಚುಕಟ್ಟಾಗಿ ನಿಭಾಯಿಸುತ್ತ ಬಂದಿದೆ. ಎಸೆತಗಳಿಗೆ ಎಷ್ಟು ವೇಗ ಇರಬೇಕು, ಲೆಂತ್ ಹೇಗಿರಬೇಕು ಎಂಬುದನ್ನು ಚೆನ್ನಾಗಿ ಅರಿತು ದಾಳಿ ನಡೆಸುತ್ತಿದ್ದಾರೆ. ನಮಗೆ ಸಿಂಗಲ್ಸ್ ಕೂಡ ಗಳಿಸಲಾಗುತ್ತಿಲ್ಲ’ ಎಂದು ಡ್ಯುಮಿನಿ ಅಸಹಾಯಕತೆ ವ್ಯಕ್ತಪಡಿಸಿದರು.
“ಇವರ ಗೂಗ್ಲಿ ಎಸೆತಗಳನ್ನು ಈವರೆಗೆ ನಾವ್ಯಾರೂ ಎದುರಿಸಿದವರಲ್ಲ. ಹೀಗಾಗಿ ಕಷ್ಟವಾಗುತ್ತಿದೆ. ನಮ್ಮ ಗೇಮ್‌ಪ್ಲ್ರಾನ್ ಪ್ರಕಾರ ಆಡಲು ಸಾಧ್ಯವೇ ಆಗುತ್ತಿಲ್ಲ. ಇದಕ್ಕೆ ಬೇರೆಯೇ ಕಾರ್ಯತಂತ್ರ ರೂಪಿಸಿ ಸರಣಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ…’ ಎಂದು ಡ್ಯುಮಿನಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.