ಮುಂದಿನ ಟಾರ್ಗೆಟ್‌ 90 ಮೀಟರ್‌: ನೀರಜ್‌


Team Udayavani, Aug 9, 2021, 6:10 AM IST

ಮುಂದಿನ ಟಾರ್ಗೆಟ್‌ 90 ಮೀಟರ್‌: ನೀರಜ್‌

ಒಲಿಂಪಿಕ್ಸ್‌ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ ಈಗ ಭಾರತೀಯ ಕ್ರೀಡೆಯ ನವತಾರೆ. ಕೇವಲ ಕ್ರಿಕೆಟ್‌, ಐಪಿಎಲ್‌, ಕಬಡ್ಡಿ, ಬ್ಯಾಡ್ಮಿಂಟನ್‌ ಮೊದಲಾದ ಕ್ರೀಡೆಗಳಿಗಷ್ಟೇ ಪ್ರಾಧಾನ್ಯ ನೀಡುತ್ತಿದ್ದ ದೇಶದ ಕ್ರೀಡಾಪ್ರೇಮಿಗಳನ್ನು ಆ್ಯತ್ಲೆಟಿಕ್ಸ್‌ನತ್ತಲೂ ತಿರುಗಿ ನೋಡುವಂತೆ ಮಾಡಿದ ಮಾಂತ್ರಿಕ. ಅವರ ಬಂಗಾರದ ಈಟಿ ಮನೆ ಮನೆಯ ಅಲಂಕಾರ.

ಪದಕ ಗೆದ್ದ ಬಳಿಕ ಪಿಟಿಐ ವಿಶೇಷ ಸಂದರ್ಶನದಲ್ಲಿ ಮಾತಾಡಿದ ನೀರಜ್‌ ಚೋಪ್ರಾ ತನ್ನ ಮುಂದಿನ ಗುರಿಯನ್ನು ತೆರೆದಿರಿಸಿದ್ದಾರೆ. ಅದು, ಈಟಿಯನ್ನು 90 ಮೀಟರ್‌ ಗಡಿ ದಾಟಿಸುವುದು. ಒಲಿಂಪಿಕ್ಸ್‌ ದಾಖಲೆ 90.57 ಮೀಟರ್‌ ಆಗಿದೆ. ಆದರೆ ಫೈನಲ್‌ ಸ್ಪರ್ಧೆಗೆ ಇಳಿಯುವ ಮೊದಲೇ ನೀರಜ್‌ ಒಂದು ಅಂಶವನ್ನು ಸ್ಪಷ್ಟಪಡಿಸಿದ್ದರು. ನನ್ನ ಗುರಿ ಚಿನ್ನದ ಪದಕ ಗೆಲ್ಲುವುದಲ್ಲ, ಒಲಿಂಪಿಕ್ಸ್‌ ದಾಖಲೆ ಸ್ಥಾಪಿಸುವುದು ಎಂದು! ಅಷ್ಟೊಂದು ಆತ್ಮವಿಶ್ವಾಸ ಅವರಲ್ಲಿತ್ತು. ಹೀಗಾಗಿ ಅವರ ಪಾಲಿಗೆ ಚಿನ್ನ ಗೆದ್ದದ್ದು ಅಚ್ಚರಿಯೇನಲ್ಲ!

ಚಿನ್ನ ಕನಸು ಈಡೇರಿದೆ, ಮುಂದಿನ ಗುರಿ?

ಈಟಿಯನ್ನು 90 ಮೀಟರ್‌ ದೂರಕ್ಕೆ ಎಸೆಯುವುದೇ ನನ್ನ ಮುಂದಿನ ಟಾರ್ಗೆಟ್‌. ಆದರೆ ತಾಂತ್ರಿಕವಾಗಿ ಜಾವೆಲಿನ್‌ ಅತ್ಯಂತ ಕಠಿನ ಸ್ಪರ್ಧೆ. ಎಲ್ಲವೂ ನಿಗದಿತ ದಿನದ ಫಾರ್ಮ್ ನ್ನು ಅವಲಂಬಿಸಿರುತ್ತದೆ. ಅಂದು ಏನೂ ಸಂಭವಿಸಬಹುದು.

ಇದು ಮೊದಲ ಒಲಿಂಪಿಕ್ಸ್‌ ಅನುಭವ. ಇದರಿಂದ ಒತ್ತಡವನ್ನೇನಾದರೂ ಅನುಭವಿಸಿದಿರಾ?

ಇಲ್ಲ. ಎಲ್ಲ ಕ್ರೀಡಾಕೂಟಗಳಂತೆ ಒಲಿಂಪಿಕ್ಸ್‌ ಕೂಡ ಒಂದು ಎಂದು ಭಾವಿಸಿಯೇ ಸ್ಪರ್ಧೆಗಿಳಿದೆ. ಇಲ್ಲಿನ ಆ್ಯತ್ಲೀಟ್ಸ್‌ ವಿರುದ್ಧ ನಾನು ಸಾಕಷ್ಟು ಸಲ ಸ್ಪರ್ಧಿಸಿದ್ದೆ. ಹೀಗಾಗಿ ಚಿಂತೆಗಾಗಲಿ, ಒತ್ತಡಕ್ಕಾಗಲಿ ಆಸ್ಪದವೇ ಇರಲಿಲ್ಲ. ಕೇವಲ ನನ್ನ ನಿರ್ವಹಣೆಯ ಮೇಲಷ್ಟೇ ಗಮನ ಕೇಂದ್ರೀಕರಿಸಿದೆ. ಹೀಗಾಗಿ ಚಿನ್ನ ಗೆಲ್ಲಲು ಸಾಧ್ಯವಾಯಿತು.

ಗೋಲ್ಡ್‌ ಗೆಲ್ಲುವ ನಿರೀಕ್ಷೆ ಇತ್ತೇ?

ಖಂಡಿತ ಇತ್ತು. ಭಾರತ ಒಲಿಂಪಿಕ್ಸ್‌ ಆ್ಯತ್ಲೆಟಿಕ್ಸ್‌ನಲ್ಲಿ ಈ ವರೆಗೆ ಬಂಗಾರ ಗೆದ್ದಿರಲಿಲ್ಲ ಎಂಬುದೊಂದು ಮೈನಸ್‌ ಪಾಯಿಂಟ್‌ ಆಗಿತ್ತು. ಆದರೆ ಒಮ್ಮೆ ಜಾವೆಲಿನ್‌ ಹಿಡಿದ ಕೂಡಲೇ ಇದನ್ನೆಲ್ಲ ತಲೆಯಿಂದ ಅಳಿಸಿ ಹಾಕಿದೆ. ನಾನುಂಟು, ಈ ಈಟಿ ಉಂಟು… ನೋಡಿಯೇ ಬಿಡೋಣ ಎಂದು ಹೊರಟೆ. ಫ‌ಲಿತಾಂಶ ನಿಮ್ಮ ಮುಂದಿದೆ.

ನಿಮಗೆ ದೊಡ್ಡ ಸವಾಲಾಗಿದ್ದ ನೆಚ್ಚಿನ ಸ್ಪರ್ಧಿ ಜೊಹಾನ್ನೆಸ್‌ ವೆಟರ್‌ ಬಗ್ಗೆ ಏನು ಹೇಳುತ್ತೀರಿ?

ವೆಟರ್‌ ಮಾಜಿ ವಿಶ್ವ ಚಾಂಪಿಯನ್‌. ಆದರೆ ಅವರೇಕೋ ಪರದಾಡುತ್ತಿದ್ದರು. ಒತ್ತಡದಲ್ಲಿದ್ದರೋ ಅಥವಾ ಸತತ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರಿಂದ ಈ ಸಂಕಟಕ್ಕೆ ಸಿಲುಕಿದರೋ ಗೊತ್ತಿಲ್ಲ. ಅಲ್ಲದೇ ವೆಟರ್‌ ಫಾರ್ಮ್ನಲ್ಲೂ ಇರಲಿಲ್ಲ. ಅವರು ಅಂತಿಮ ಎಂಟರ ಸುತ್ತಿನ ಫೈನಲ್‌ಗೆ ಆಯ್ಕೆಯಾಗದಿದ್ದುದು ದುರದೃಷ್ಟ. ಗೆದ್ದ ಬಳಿಕ ಅವರು ನನ್ನನ್ನು ಪ್ರಶಂಸಿಸಿದ್ದನ್ನು ಮರೆಯುವಂತಿಲ್ಲ. ನಾವಿಬ್ಬರೂ ಉತ್ತಮ ಗೆಳೆಯರು.

ನಿಮ್ಮ ಯಶಸ್ಸಿನಲ್ಲಿ ಕೋಚ್‌ ಪಾತ್ರವನ್ನು ಮರೆಯುವಂತಿಲ್ಲ ಅಲ್ಲವೇ?

ಬಾಲ್ಯದ ಮೆಂಟರ್‌ ಜೈವೀರ್‌ ಚೌಧರಿ ಅವರ ಮಾರ್ಗದರ್ಶನ ನನ್ನ ಮೇಲೆ ವಿಪರೀತ ಪ್ರಭಾವ ಬೀರಿದೆ. ಪಾಣೀಪತ್‌ನ ಶಿವಾಜಿ ಸ್ಟೇಡಿಯಂನಲ್ಲಿ ನನ್ನ ಕೈಗೆ ಮೊದಲು ಜಾವೆಲಿನ್‌ ಕೊಟ್ಟವರೇ ಅವರು. ಬಳಿಕ ವಿದೇಶಿ ಕೋಚ್‌ ಲಭಿಸಿದರು. ಹಾಲಿ ಕೋಚ್‌ ಜರ್ಮನಿಯ ಉವೆ ಹಾನ್‌ ಪ್ರಮುಖರು. ಅವರು ಈಟಿಯನ್ನು 100 ಮೀಟರ್‌ ಗಡಿ ದಾಟಿಸಿದ (104.80 ಮೀ.) ವಿಶ್ವದ ಏಕೈಕ ಎಸೆತಗಾರ. ನನ್ನ ತಾಂತ್ರಿಕ ದೋಷಗಳೆಲ್ಲ ಇವರಿಂದ ನಿವಾರಣೆಯಾಯಿತು.

ನಿಮ್ಮ ಯಶಸ್ಸಿನಲ್ಲಿ ವೃತ್ತಿಯ ಪಾತ್ರ ಏನಿದೆ?

ನಾನು 2016ರಲ್ಲಿ ಸೇನೆ ಸೇರಿದೆ. ಅಲ್ಲಿ ನಿಯಮ ಬಹಳ ಸರಳ. ನಿಮ್ಮ ಮನೋಭಾವ ಬಹಳ ಕಠಿನವಾಗಿರಬೇಕು, ಶಿಸ್ತುಬದ್ಧವಾಗಿರಬೇಕು, ನಿಮ್ಮ ಸಂಪೂರ್ಣ ಶಕ್ತಿ ಹಾಕಿ ಕೆಲಸ ಮಾಡಬೇಕೆಂದು ಸೇನೆ ಹೇಳುತ್ತದೆ, ಒಬ್ಬ ಆ್ಯತ್ಲೀಟ್‌ನ ಜೀವನವೂ ಅದೇ ಆಗಿದೆ. ಯೋಧರು ಮತ್ತು ಕ್ರೀಡಾಪಟುಗಳು ತಮ್ಮ ಕುಟುಂಬದಿಂದ ದೂರ ಇರಬೇಕಾಗುತ್ತದೆ. ಕ್ರೀಡೆಯ ಬಗ್ಗೆ ನಾನೆಷ್ಟೇ ಗಮನ ಕೇಂದ್ರೀಕರಿಸಲಿ, ನಾನೊಬ್ಬ ಯೋಧನೆಂಬುದೂ ಅಷ್ಟೇ ಮುಖ್ಯ.

ಟಾಪ್ ನ್ಯೂಸ್

1-swee

Digital ಬಿಟ್ಟು ಮುದ್ರಿತ ಪಠ್ಯಪುಸ್ತಕ ಮಾದರಿಗೆ ಮರಳಿದ ಸ್ವೀಡನ್‌!

UCC

UCC ಕೈಪಿಡಿಗೆ ಉತ್ತರಾಖಂಡ ಒಪ್ಪಿಗೆ: ಶೀಘ್ರವೇ ಜಾರಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ;  ಓರ್ವನ ಬಂಧನ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ; ಓರ್ವನ ಬಂಧನ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

Ankola: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Ankola: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

LSG: ಹೊಸ ಸೀಸನ್‌ ಗೆ ಹೊಸ ನಾಯಕನ ನೇಮಕ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್

LSG: ಹೊಸ ಸೀಸನ್‌ ಗೆ ಹೊಸ ನಾಯಕನ ನೇಮಕ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್

Who is Neeraj chopra’s wife Himani Mor

Himani Mor: ನೀರಜ್‌ ಚೋಪ್ರಾ ಕೈ ಹಿಡಿದ ಚಿನ್ನದ ಹುಡುಗಿ; ಯಾರು ಈ ಹಿಮಾನಿ ಮೊರ್‌?

1-gg

Champions Trophy; ಕೋಚ್‌ ಗಂಭೀರ್‌ ಆಯ್ಕೆ ಒಲವು ಬೇರೆಯಾಗಿತ್ತೇ?

1-nc

ದಾಂಪತ್ಯ ಜೀವನಕ್ಕೆ ನೀರಜ್‌ ಚೋಪ್ರಾ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

1-swee

Digital ಬಿಟ್ಟು ಮುದ್ರಿತ ಪಠ್ಯಪುಸ್ತಕ ಮಾದರಿಗೆ ಮರಳಿದ ಸ್ವೀಡನ್‌!

UCC

UCC ಕೈಪಿಡಿಗೆ ಉತ್ತರಾಖಂಡ ಒಪ್ಪಿಗೆ: ಶೀಘ್ರವೇ ಜಾರಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

1-telanga

America; ಗುಂಡು ಹಾರಿಸಿ ತೆಲಂಗಾಣದ ಯುವಕನ ಹ*ತ್ಯೆ

Kasaragod ಬದ್ಧತೆ, ಸೇವಾ ಮನೋಭಾವದಿಂದ ಯಶಸ್ಸು: ಎಡನೀರು ಸ್ವಾಮೀಜಿ

Kasaragod ಬದ್ಧತೆ, ಸೇವಾ ಮನೋಭಾವದಿಂದ ಯಶಸ್ಸು: ಎಡನೀರು ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.