ಚಿನ್ನ ಗೆದ್ದು ಎಡವಿದ ನೀರಜ್‌ಚೋಪ್ರಾ : ಟೋಕಿಯೊ ಬಳಿಕ ಮೊದಲ ಚಿನ್ನ
ಡೈಮಂಡ್ ಲೀಗ್‌ನಲ್ಲಿ ಸ್ಪರ್ಧೆ
Team Udayavani, Jun 19, 2022, 11:06 PM IST
ಹೊಸದಿಲ್ಲಿ : ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಫೆನ್ಲಂಡ್‌ನಲ್ಲಿ ನಡೆಯುತ್ತಿರುವ “ಕುವೋ ರ್ತಾನ್ ಗೇಮ್ಸ್’ನಲ್ಲೂ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಆದರೆ ಅವರ ಈ ಖುಷಿಯ ಬೆನ್ನಲ್ಲೇ ಆತಂಕವೂ ಕಾಡಿತು. 3ನೇ ಪ್ರಯತ್ನದ ವೇಳೆ ರನ್‌ಅಪ್‌ನಲ್ಲಿ ಎಡವಿ ಬಿದ್ದ ಚೋಪ್ರಾ ಎಡ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಆದರೂ ಜೂ. 30ರಂದು ಸ್ಟಾಕ್‌ಹೋಮ್‌ನಲ್ಲಿ ಆರಂಭವಾಗಲಿರುವ ಮೊದಲ ಡೈಮಂಡ್ ಲೀಗ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುವೋರ್ತಾನ್ ಗೇಮ್ಸ್‌ನ ಜಾವೆಲಿನ್ ಸ್ಪರ್ಧೆಯ ಮೊದಲ ಸುತ್ತಿನಲ್ಲೇ 86.69 ಮೀ. ದೂರದ ಸಾಧನೆಯೊಂದಿಗೆ ನೀರಜ್ ಚೋಪ್ರಾ ಚಿನ್ನಕ್ಕೆ ಮುತ್ತಿಕ್ಕಿದರು. ಇದು ಟೋಕಿಯೊ ಒಲಿಂಪಿಕ್ಸ್ ಬಳಿಕ ಅವರಿಗೆ ಒಲಿದ ಮೊದಲ ಸ್ವರ್ಣ ಪದಕ. 2012ರ ಒಲಿಂಪಿಕ್ಸ್ ಚಾಂಪಿಯನ್, ಟ್ರೆನಿಡಾಡ್ ಮತ್ತು ಟೊಬಾಗೋದ ಕೆಶ್ರೋನ್ ವಾಲ್ಕಾಟ್ 86.64 ಮೀ. ಸಾಧನೆಯೊಂದಿಗೆ ಬೆಳ್ಳಿ ಪದಕ ಗೆದ್ದರು. ಅವರೂ ಮೊದಲ ಸುತ್ತಿನಲ್ಲೇ ಈ ದೂರ ಕಾಯ್ದುಕೊಂಡರು. ಹಾಲಿ ವಿಶ್ವ ಚಾಂಪಿಯನ್ ಗ್ರೆನಡಾದ ಆ್ಯಂಡರ್ಸನ್ ಪೀಟರ್ 84.75 ಮೀ. ದೂರ ಎಸೆದು ಕಂಚು ಜಯಿಸಿದರು. ಇವರೂ ಈ ದೂರವನ್ನು ಮೊದಲ ಸುತ್ತಿನಲ್ಲೇ ದಾಖಲಿಸಿದ್ದು ವಿಶೇಷ. ಪೀಟರ್ ನಾಲ್ಕೇ ದಿನಗಳ ಅಂತರದಲ್ಲಿ ನೀರಜ್ ಕೈಯಲ್ಲಿ ಎರಡನೇ ಸೋಲನುಭವಿಸಿದರು.
ಏಷ್ಯನ್ ಮತ್ತು ವಿಶ್ವ ಪ್ಯಾರಾ ಜಾವೆಲಿನ್ ಚಾಂಪಿ ಯನ್ ಸಂದೀಪ್ ಚೌಧರಿ ಕೂಡ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಅವರಿಲ್ಲಿ 8ನೇ ಸ್ಥಾನಿಯಾದರು (60.35 ಮೀ.).
ಕಳೆದ ವಾರವಷ್ಟೇ ನಡೆದ ಪಾವೋ ನುರ್ಮಿ ಗೇಮ್ಸ್ ನಲ್ಲಿ ನೀರಜ್ ಚೋಪ್ರಾ ಇದಕ್ಕಿಂತ ಉತ್ತಮ ಸಾಧನೆ ಗೈದಿದ್ದರು. ಅಲ್ಲಿ 89.30 ಮೀ. ದೂರದ ಸಾಧನೆ ಇವರದಾಗಿತ್ತು. ಇದಕ್ಕೆ ಒಲಿದದ್ದು ಬೆಳ್ಳಿ ಪದಕ.
ಜಾರಿ ಬಿದ್ದ ಚೋಪ್ರಾ
ಮಳೆಯಿಂದಾಗಿ ಟ್ರ್ಯಾಕ್ ಒದ್ದೆಯಾದ್ದರಿಂದ ಕುವೋರ್ತಾನ್ ಗೇಮ್ಸ್‌ನ 3ನೇ ಸುತ್ತಿನಲ್ಲಿ ನೀರಜ್ ಚೋಪ್ರಾ ಜಾರಿ ಬಿದ್ದರು. ಎಡ ಭುಜ ಟಫ್ìಗೆ ಬಡಿದುದರಿಂದ ನೋವು ಕಾಡಿತು. ಆದರೆ ಇದೇನೂ ಗಂಭೀರ ಸಮಸ್ಯೆ ಅಲ್ಲ ಎಂಬುದಾಗಿ ಚೋಪ್ರಾ ಹೇಳಿದ್ದಾರೆ.
“ಇಲ್ಲಿ ಪ್ರತಿಕೂಲ ವಾತಾವರಣವಿತ್ತು. ಆದರೆ ಇದೇನೂ ಗಂಭೀರ ಏಟಲ್ಲ. ಮುಂದಿನ ಡೈಮಂಡ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ವಿಶ್ವಾಸವಿದೆ. ಈ ಜಯದಿಂದ ನನ್ನ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದೆ…’ ಎಂದಿದ್ದಾರೆ.
ಆ್ಯತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಕೂಡ ಈ ಘಟನೆ ಕುರಿತು ಟ್ವೀಟ್ ಮಾಡಿದೆ. “ವೆಲ್‌ಡನ್ ನೀರಜ್ ಚೋಪ್ರಾ. ಮತ್ತೂಂದು ಉನ್ನತ ಮಟ್ಟದ ಸಾಧನೆಗಾಗಿ ಆಭಿನಂದನೆಗಳು’ ಎಂದಿರುವ ಎಎಫ್ಐ, ಅವರ ಗಾಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
Pro Kabaddi: ಹರಿಯಾಣ- ಪಾಟ್ನಾ ಫೈನಲ್ ಹಣಾಹಣಿ
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.