ನೀರಜ್ ಮುಕುಟಕ್ಕೆ ಮತ್ತೊಂದು ಗರಿ: ಡೈಮಂಡ್ ಲೀಗ್ ಗೆದ್ದ ಬಂಗಾರದ ಹುಡುಗ
Team Udayavani, Sep 9, 2022, 9:31 AM IST
ಜ್ಯೂರಿಕ್: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರ ಸಾಧನೆಗಳ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಸ್ವಿಜರ್ ಲ್ಯಾಂಡ್ ನ ಜ್ಯೂರಿಕ್ ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ನಲ್ಲಿ ನೀರಜ್ ಚೋಪ್ರಾ ಪ್ರಥಮ ಸ್ಥಾನ ಪಡೆದಿದ್ದಾರೆ.
ಎರಡನೇ ಪ್ರಯತ್ನದಲ್ಲಿ 88.44 ಮೀಟರ್ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅವರು ಮೊದಲ ಸ್ಥಾನ ಪಡೆದರು. ಟೋಕಿಯೋ ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಆಟದ ಮುಂದೆ ಉಳಿದವರ ಆಟ ನಡೆಯಲಿಲ್ಲ.
ನೀರಜ್ ತನ್ನ ಎರಡನೇ ಪ್ರಯತ್ನದಲ್ಲಿ 88.44 ಮೀ ಎಸೆದರು. ಮೂರನೇ ಪ್ರಯತ್ನದಲ್ಲಿ 88 ಮೀ ಮತ್ತು ನಾಲ್ಕನೇ ಪ್ರಯತ್ನದಲ್ಲಿ 86.11 ಮೀ ಎಸೆದರು. ನೀರಜ್ ಅವರ ಐದನೇ ಪ್ರಯತ್ನ 87 ಮೀ ದೂರ ಸಾಗಿದರೆ, ಕೊನೆಯ ಪ್ರಯತ್ನ 83.6 ಮೀ. ದೂರ ನೀರಜ್ ಜಾವೆಲಿನ್ ಎಸೆದರು.
ಇದನ್ನೂ ಓದಿ:ನಾಲ್ವರಿಗೆ ಸಮಾನ ಅಂಕ ಬಂದಿದ್ದರೂ ರ್‍ಯಾಂಕ್ ಮಾತ್ರ ಒಬ್ಬರಿಗೇ! : ಯಾಕೆ ಗೊತ್ತಾ?
ನೀರಜ್ ಚೋಪ್ರಾ ಡೈಮಂಡ್ ಲೀಗ್ ಕೂಟದ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. ಜುಲೈನಲ್ಲಿ ಯುಎಸ್ ಎ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ಪ್ರದರ್ಶನದ ಸಂದರ್ಭದಲ್ಲಿ ಅವರು ಅನುಭವಿಸಿದ ಸಣ್ಣ ತೊಡೆಸಂದು ಗಾಯದಿಂದಾಗಿ ಅವರು ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಆಡಿರಲಿಲ್ಲ.
ಡೈಮಂಡ್ ಲೀಗ್ ಚಾಂಪಿಯನ್‌ಶಿಪ್-ಶೈಲಿಯ ಮಾದರಿಯನ್ನು ಅನುಸರಿಸಿ 32 ಡೈಮಂಡ್ ವಿಭಾಗಗಳನ್ನು ಒಳಗೊಂಡಿದೆ. ಅಥ್ಲೀಟ್‌ಗಳು ತಮ್ಮ ವಿಭಾಗಗಳ ಫೈನಲ್ ಗೆ ಅರ್ಹತೆ ಪಡೆಯಲು 13 ಸರಣಿಗಳ ಕೂಟದಲ್ಲಿ ಅಂಕಗಳನ್ನು ಗಳಿಸುತ್ತಾರೆ. ಫೈನಲ್ ನಲ್ಲಿ ಪ್ರತಿ ಡೈಮಂಡ್ ವಿಭಾಗದ ವಿಜೇತರು ‘ಡೈಮಂಡ್ ಲೀಗ್ ಚಾಂಪಿಯನ್’ ಕಿರೀಟವನ್ನು ಅಲಂಕರಿಸುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.