ಕ್ರಿಕೆಟ್ ಶಿಶು ನೇಪಾಳದ ಮಹಾನ್ ಸಾಧನೆ
Team Udayavani, Jan 29, 2019, 5:30 AM IST
ದುಬೈ : ಕಳೆದ ವರ್ಷವಷ್ಟೇ ಏಕದಿನ ಕ್ರಿಕೆಟ್ ನಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ನೇಪಾಳ ತನ್ನ ಮೋದಲ ಏಕದಿನ ಸರಣಿ ಗೆದ್ದು ಬೀಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ನೇಪಾಳ 2-1ರ ಅಂತರದಿಂದ ಗೆದ್ದು ಈ ಸಾಧನೆ ಮಾಡಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಯುಎಇ ತಂಡ ನಿಗದಿತ 50 ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತ್ತು. ಇದಕ್ಕುತ್ತರಿಸಿದ ನೇಪಾಳ, ನಾಯಕ ಪರಾಸ್ ಖಡ್ಕಾ ಶತಕದ ಸಹಾಯದಿಂದ ಆರು ವಿಕೆಟ್ ಕಳೆದುಕೊಂಡು 44.4 ಓವರ್ ನಲ್ಲಿ ಗುರಿ ಬೆನ್ನಟ್ಟಿತು. ಈ ಮೂಲಕ ನೇಪಾಳ ಮೊದಲ ಬಾರಿಗೆ ಗುರಿ ಚೆಸ್ ಮಾಡಿ ಗೆಲುವು ದಾಖಲಿಸಿತು.
ನಾಯಕ ಪರಾಸ್ ಖಡ್ಕಾ 115 ರನ್ ಗಳಿಸಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರು. 2 ವಿಕೆಟ್ ಕೂಡಾ ಪಡೆದ ಪರಾಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡಾ ಪಡೆದರು.
2018ರ ಮಾರ್ಚ್ ನಲ್ಲಿ ಐಸಿಸಿಯಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ನೇಪಾಳ, ನಂತರ ನೆದರ್ಲ್ಯಾಂಡ್ ವಿರುದ್ಧ ಎರಡು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿತ್ತು.
ಯುಏಇ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 113 ರನ್ ಗೆ ಆಲ್ ಔಟ್ ಆಗಿ ಸೋತಿದ್ದ ನೇಪಾಳ, ಎರಡನೇ ಪಂದ್ಯದಲ್ಲಿ ತಿರುಗಿ ಬಿದ್ದಿತ್ತು. ಸೋಮ್ ಪಾಲ್ ಕಮಿ ನೇಪಾಳದ ಚೊಚ್ಚಲ ಐದು ವಿಕೆಟ್ ಪಡೆದ ಸಾಧನೆ ಮಾಡಿದರೆ, 16ರ ಹರೆಯದ ರೋಹಿತ್ ಪೌಡೆಲ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅರ್ಧ ಶತಕ ಬಾರಿಸಿದ ಅತೀ ಕಿರಿಯನೆಂಬ ದಾಖಲೆ ಬರೆದಿದ್ದರು. ಈ ಪಂದ್ಯದಲ್ಲಿ ನೇಪಾಳ 282 ರನ್ ಗಳಿಸಿದರೆ, ಯುಎಇ 97 ರನ್ ಗಳಿಗೆ ಆಲ್ ಔಟ್ ಆಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.